ನವದೆಹಲಿ: ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ಇಟಲಿಗೆ ತೆರಳಲಿದ್ದಾರೆ.
3ನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಅವರ ಮೊದಲ ಅಂತಾರಾಷ್ಟ್ರೀಯ ಭೇಟಿ ಇದಾಗಿದೆ. ಜೂನ್ 14ರಂದು ನಡೆಯಲಿರುವ 50ನೇ ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಟಲಿ ಪ್ರಧಾನಮಂತ್ರಿಯ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಇಟಲಿಯ ಅಪುಲಿಯಾಕ್ಕೆ ತೆರಳಲಿದ್ದಾರೆ. ಜಿ-20ಶೃಂಗಸಭೆಯಲ್ಲಿ ಭಾರತದ ಪ್ರಮುಖ ವಿಷಯಗಳ ಕುರಿತು ಇತರ ವಿಶ್ವ ನಾಯಕರೊಂದಿಗೆ ಹಂಚಿಕೊಳ್ಳಲು ಅವರಿಗೆ ಅವಕಾಶ ದೊರೆಯಲಿದೆ.
Discussion about this post