ಸಿದ್ದಾಪುರದ ಗವಿನಗುಡ್ಠದಲ್ಲಿ ಕಾಡುಕೋಣ ಕೊಂದ ಹೆಗಡೆಕಟ್ಟಾದ ಯೂಸಫ್ ಸಾಬ್ ಅಬ್ದುಲ್ ಕರಿಮ ಸಾಬ ಎಂಬಾತನನ್ನು ಅರಣ್ಯ ಸಿಬ್ಬಂದಿ ಜೈಲಿಗೆ ಕಳುಹಿಸಿದ್ದಾರೆ.
ಈತ ಗವಿನಗುಡ್ಡದಲ್ಲಿ ಕಾಡುಕೋಣವನ್ನು ಬೇಟೆಯಾಡಿ ಮಾಂಸವನ್ನು ಬೇರ್ಪಡಿಸಿ ತೆಗೆದುಕೊಂಡು ಹೋಗುವಾಗ ಗಸ್ತು ಸಿಬ್ಬಂದಿ ಪತ್ತೆ ಮಾಡಿದ್ದರು. ಆತನನ್ನು ಹಿಂಬಾಲಿಸಿದ ಅರಣ್ಯ ಸಿಬ್ಬಂದಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ವನ್ಯಜೀವಿ ಹತ್ಯೆ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದರು. ಆತನನ್ನು ವಿಚಾರಣೆಗೆ ಒಳಪಡಿಸಿದಾಗ 7ಕ್ಕೂ ಅಧಿಕ ಜನ ಈ ಹತ್ಯೆ ಹಿಂದಿರುವುದು ಬೆಳಕಿಗೆ ಬಂದಿದೆ. ಅವರ ಬಂಧನಕ್ಕೆ ಅರಣ್ಯಾಧಿಕಾರಿಗಳು ಬಲೆ ಬೀಸಿದ್ದಾರೆ.
Discussion about this post