ದೇಶ-ವಿದೇಶಗಳಲ್ಲಿ ನೈಜ ವಾಸ್ತುಶಾಸ್ತ್ರದ ಬಗ್ಗೆ ಅರಿವು ಮೂಡಿಸುತ್ತಿರುವ ಮಹೇಶ ಮುನಿಯಂಗಳ ಅವರು ಯಲ್ಲಾಪುರದ ನಾಯ್ಕನಕೆರೆಯಲ್ಲಿ ನಿರ್ಮಾಣವಾಗುತ್ತಿರುವ ದತ್ತಮಂದಿರಕ್ಕೂ (Temple) ವಾಸ್ತು ಸಲಹೆಗಾರರಾಗಿದ್ದಾರೆ.
ನಾಯ್ಕನಕೆರೆಯಲ್ಲಿರುವ ನೀರಿನ ಆಶ್ರಯ ಹಾಗೂ ಅಲ್ಲಿನ ಪರಿಸರ ದೇವಾನುದೇವತೆಗಳ ವಾಸಕ್ಕೆ ಯೋಗ್ಯ ಸ್ಥಳ. ಹೀಗಾಗಿ ಕೆರೆಯ ಪಶ್ಚಿಮ ಭಾಗದಲ್ಲಿ ಪೂರ್ವಾಭಿಮುಖವಾಗಿ ವೃತ್ತಾಕಾರದ ಗರ್ಭಗೃಹ ಹಾಗೂ ಎಡನಾಳಿಸಹಿತದ ದೇವಾಲಯ ನಿರ್ಮಾಣಕ್ಕೆ ಅವರು ಸಲಹೆ ನೀಡಿದ್ದಾರೆ. ಮುಂದಿನ ದತ್ತ ಜಯಂತಿಯ ಒಳಗೆ ದ್ರಾವಿಡ ಶೈಲಿಯ ಸುಂದರ ದೇವಾಲಯ ಇಲ್ಲಿ ತಲೆಯೆತ್ತಲಿದೆ.

ಮಹೇಶ ಮುನಿಯಂಗಳ ಯಾರು?
ಕುಕ್ಕೆ ಸುಬ್ರಹ್ಮಣ್ಯದವರಾದ ಮಹೇಶ ಮುನಿಯಂಗಳ ದೇವಸ್ಥಾನ ಹಾಗೂ ದೈವಸ್ಥಾನಗಳ ವಾಸ್ತುಶಾಸ್ತ್ರದಲ್ಲಿ ಪರಿಣಿತರು. ಅವರು ಈವರೆಗೆ 3 ಸಾವಿರಕ್ಕೂ ಅಧಿಕ ದೇವಸ್ಥಾನ ಸಾವಿರಾರು ದೈವಸ್ಥಾನಗಳಿಗೆ ವಾಸ್ತು ಸಲಹೆ ನೀಡಿದ್ದಾರೆ. ಮುಂಬೈಯಲ್ಲಿ ಅಯ್ಯಪ್ಪ ಸ್ವಾಮಿ, ಮೂಕಾಂಬಿಕಾ ದೇವಿ ಇನ್ನಿತರ ದೇವಾಲಯಗಳ ವಾಸ್ತು ನೋಡಿದ್ದಾರೆ. ಮಹೇಶ ಮುನಿಯಂಗಳ ಅವರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಪ್ರಾಂಗಾಣದಲ್ಲಿರುವ ವೀರಭದ್ರ ದೇವಸ್ಥಾನ ಹಾಗೂ ಬ್ರಹ್ಮರಥ ದೇವಸ್ಥಾನದ ವಾಸ್ತು ಸಲಹಾಗಾರರು ಹೌದು. ಕುಕ್ಕೆ ಸುಬ್ರಹ್ಮಣ್ಯದ ಗರ್ಭಗುಡಿಯ ವಾಸ್ತು ಸಹ ಮಹೇಶ ಮುನಿಯಂಗಳ ಅವರ ಸಲಹೆ ಮೇರೆಗೆ ನಡೆದಿದೆ.

ಮರೊಳ್ಳಿ ಸೂರ್ಯನಾರಾಯಣ ದೇವಸ್ಥಾನ, ಕುಂಬಾಶಿ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ವಾಸ್ತು ನಕ್ಷೆಯನ್ನು ಸಹ ಮಹೇಶ ಮುನಿಯಂಗಳ ಅವರು ಚಿತ್ರಿಸಿದ್ದಾರೆ. ವಾಸ್ತು ನೋಡುವುದು ಮಹೇಶ ಮುನಿಯಂಗಳ ಅವರಿಗೆ ವಂಶಪಾರoಪರಿಕವಾಗಿ ಬಂದ ವಿದ್ಯೆ. ಅದಾಗಿಯೂ ಅವರು ಸಿವಿಲ್ ಇಂಜಿನಿಯರ್ ಓದಿದ್ದಾರೆ. 1991ರಿಂದ ವಾಸ್ತುಶಾಸ್ತ್ರ ಅಧ್ಯಯನ ಹಾಗೂ ವಿನ್ಯಾಸ ಕೆಲಸ ಮಾಡಿದ್ದು, ಪ್ರಸಿದ್ಧ ವಾಸ್ತು ತಜ್ಞರಾದ ಮುನಿಯಂಗಳ ಕೃಷ್ಣ ಭಟ್ಟ ಕಾಣಿಪೈಯೂರು, ಕೃಷ್ಣನ್ ನಂಬೋದರಿಪಾಡ್ ಅವರ ಶಿಷ್ಯರಿವರು. ರಾಮಚಂದ್ರಾಪುರಮಠದ ಎಲ್ಲಾ ದೇವಾಲಯಗಳಿಗೂ ಅವರು ವಾಸ್ತು ತಜ್ಞರಾಗಿ ಸೇವೆಯಲ್ಲಿದ್ದಾರೆ.
`ಭೂಮಿ ಮತ್ತು ಗೃಹಗಳಿರುವ ಸಂಬoಧವನ್ನು ಮನುಷ್ಯನ ಜೊತೆ ಬೆಸೆಯುವುದು ವಾಸ್ತು. ಅದರಿಂದ ಮನುಷ್ಯನಿಗೆ ಜೀವನದಲ್ಲಿ ಧರ್ಮ ಅರ್ಥ ಕಾಮ ಮೋಕ್ಷ ಸಿಗಲು ಸುಲಭ ದಾರಿಯಾಗುತ್ತದೆ’ ಎಂದವರು ವಿವರಿಸಿದರು. `ವಾಸ್ತು ಎಂದರೆ ನಾಲ್ಕು ಮಹಾ ದಿಕ್ಕುಗಳು ಸಮಾನಾಂತರವಾಗಿ ರಚಿಸಿ ಅಲ್ಲಿಂದ ಶಕ್ತಿ ಪಡೆಯುವ ವಿಧಾನವೂ ಹೌದು’ ಎಂದವರು ಅಭಿಪ್ರಾಯಪಟ್ಟರು.
ದ್ರಾವಿಡ ಶೈಲಿಯ ವಾಸ್ತು ಪ್ರಕಾರ ನಾಯ್ಕನಕೆರೆಯಲ್ಲಿ ನಿರ್ಮಾಣವಾಗುತ್ತಿರುವ ದತ್ತ ಮಂದಿರದ 3D ವಿಡಿಯೋ ಇಲ್ಲಿ ನೋಡಿ…
Discussion about this post