6

Organ donation | ಸಾವಿನ ಮನೆಯಲ್ಲಿಯೂ ಮಾನವೀಯ ಕಾರ್ಯ: ಸಿದ್ದಾಪುರದ ಈ ಮಹಿಳೆಯರು ರಾಜ್ಯಕ್ಕೆ ಮಾದರಿ!

ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಕೊಂಡ್ರಿ ಮೂಲದ ರಾಘವೇಂದ್ರ ಗಾಣಿಗ (51) ಅವರು ಬೆಂಗಳೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವನಪ್ಪಿದಾಗ ಅವರ ಕುಟುಂಬದವರು ರಾಘವೇಂದ್ರ ಅವರ ಕಣ್ಣು, ಕಿಡ್ನಿ, ಹೃದಯ ಸೇರಿ ವಿವಿಧ ಅಂಗಾoಗಗಳನ್ನು ದಾನ (Organ donation) ಮಾಡಿದ್ದಾರೆ. ಇದರೊಂದಿಗೆ ಬೆಂಗಳೂರಿನಲ್ಲಿ ಕಟ್ಟಡ ಕಾರ್ಮಿಕರಾಗಿದ್ದ ಸಿದ್ದಾಪುರ ಪುರದಮಠ ಮೂಲದ ಬಾಲಚಂದ್ರ ಮಡಿವಾಳ (18) ಸಹ ಕಟ್ಟಡದಿಂದ ಬಿದ್ದು ಸಾವನಪ್ಪಿದ್ದು, ಅವರ ಅಂಗಾಗಗಳು ಸಹ ಇತರರ ಬದುಕಿಗೆ ಬೆಳಕು ನೀಡಿದೆ.

ರಾಘವೇಂದ್ರ ಗಾಣಿಗ ಅವರು 2023ರ ಮೇ 24ರಂದು ಸಾವನಪ್ಪಿದ್ದರು. ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯ ಮೂಲಕ ಅವರ ಅಂಗಾoಗಗಳನ್ನು ದಾನ (Organ donation) ಮಾಡಲಾಗಿತ್ತು. ಮೃತರ ಪತ್ನಿ ಚಂದ್ರಭಾಗ್ಯ ಗಾಣಿಗ ಅವರನ್ನು ಗುರುವಾರ ಸನ್ಮಾನಿಸಲಾಯಿತು. ಬಾಲಚಂದ್ರ ಮಡಿವಾಳ (18) ಅವರು 2023ರ ಫೆಬ್ರವರಿ 19ರಂದು ಸಾವನಪ್ಪಿದ್ದರು. ಅವರ ಅಂಗಾಗಗಳನ್ನು ಜಿಬಿಎಸ್ ಗ್ಲೋಬಲ್ ಹಾಸ್ಪಿಟಲ್ ಮೂಲಕ ಕುಟುಂಬಸ್ಥರು ದಾನ ಮಾಡಿದ್ದರು. ಮೃತರ ತಾಯಿ ಲತಾ ಮಡಿವಾಳ ಅವರನ್ನು ಗುರುವಾರ ಸನ್ಮಾನಿಸಲಾಯಿತು.

ಕಾರವಾರದ ಸ್ವಾತಂತ್ರೋತ್ಸವದ ಮುಖ್ಯ ವೇದಿಕೆಯಲ್ಲಿ ಮುಖ್ಯಮಂತ್ರಿಗಳು ಹಸ್ತಾಕ್ಷರ ಮಾಡಿದ ಪ್ರಶಂಸಾ ಪತ್ರವನ್ನು ಈ ಕುಟುಂಬದವರಿಗೆ ಜಿಲ್ಲಾಡಳಿತ ನೀಡಿ ಗೌರವಿಸಿದೆ.

  • Related Posts

    ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ

    Share this… Facebook Pinterest Twitter Linkedin Whatsapp*ನಟ ನಾನಾ ಪಾಟೇಕರ್ ನಿಧನಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಸಂತಾಪ* ಬೆಂಗಳೂರು: ಖ್ಯಾತ ಬಾಲಿವುಡ್ ನಟ ನಾನಾ ಪಾಟೇಕರ್ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಅತ್ಯಂತ ದುಖವಾಯಿತು. ಹಿಂದಿ ಹಾಗೂ ಮರಾಠಿ…

    ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್ ಐಆರ್ ವಿಚಾರದಲ್ಲಿ ಚುನಾವಣಾ ಆಯೋಗ ದೂರು ನೀಡದೇ ಯಾವುದೆ ಎಫ್ ಐಆರ್ ಮಾಡಲು ಅವಕಾಶ ಇಲ್ಲ:ಬಸವರಾಜ ಬೊಮ್ಮಾಯಿ ಸಿಎಂ ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ:ಬಸವರಾಜ ಬೊಮ್ಮಾಯಿ…

    Leave a Reply

    Your email address will not be published. Required fields are marked *

    You cannot copy content of this page