ಕಾಳಿ ಸೇತುವೆ ಹಾಗೂ ಬಿಣಗಾ ಸುರಂಗ ಪ್ರದೇಶವನ್ನು ಅಪಾಯದ (Danger) ಸ್ಥಳ ಎಂದು ಜಿಲ್ಲಾಡಳಿತ ಗುರುತಿಸಿದೆ. ಹೀಗಾಗಿ ಇಲ್ಲಿ ನಿಂತು ಫೋಟೋ-ವಿಡಿಯೋ ತೆಗೆಯುವುದನ್ನು ನಿಷೇಧಿಸಲಾಗಿದೆ.
ಕೋಡಿಭಾಗದಲ್ಲಿ ಹಳೆಯ ಕಾಳಿ ಸೇತುವೆ ಕುಸಿತವಾಗಿದ್ದು, ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ. ಹೀಗಾಗಿ ಈ ಭಾಗದಲ್ಲಿ ಮೀನುಗಾರಿಕೆ ನಡೆಸುವುದನ್ನು ಸಹ ನಿಷೇಧಿಸಲಾಗಿತ್ತು. ಇದೀಗ ಅಲ್ಲಿ ವಾಹನ ನಿಲುಗಡೆ ಹಾಗೂ ಫೋಟೋ – ವಿಡಿಯೋ ಮಾಡುವುದಕ್ಕೂ ನಿಷೇಧ ಹೇರಲಾಗಿದೆ.
ಇದರ ಜೊತೆ ಬೈತಖೋಲ-ಬಿಣಗಾ ಸಂಪರ್ಕಿಸುವ ಸುರಂಗ ಮಾರ್ಗಗಳಲ್ಲಿ ಸಹ ಕುಸಿತವಾಗಿದ್ದರಿಂದ ಆ ಭಾಗದಲ್ಲಿಯೂ ವಾಹನ ನಿಲ್ಲಿಸದಂತೆ ಸೂಚಿಸಲಾಗಿದೆ. ಇಲ್ಲಿಯೂ ಫೋಟೋ ತೆಗೆಯುವುದು ಅಪಾಯಕಾರಿ ಎಂದು ತಾಲೂಕಾಡಳಿತ ಅಭಿಪ್ರಾಯಪಟ್ಟಿದ್ದು, ಈ ಪ್ರದೇಶದಲ್ಲಿ ಯಾವುದೇ ಚಟುವಟಿಕೆ ಕೈಗೊಳ್ಳದಂತೆ ಸೂಚಿಸಿದೆ.
Discussion about this post