6
  • Latest
Ishwar malpe | ಸಾವಿರಾರು ಶವ ತೆಗೆದ ಸಾಹಸಿ.. ಈತನ ಬದುಕು ಮಾತ್ರ ನರಕ!

Ishwar malpe | ಸಾವಿರಾರು ಶವ ತೆಗೆದ ಸಾಹಸಿ.. ಈತನ ಬದುಕು ಮಾತ್ರ ನರಕ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

Ishwar malpe | ಸಾವಿರಾರು ಶವ ತೆಗೆದ ಸಾಹಸಿ.. ಈತನ ಬದುಕು ಮಾತ್ರ ನರಕ!

AchyutKumar by AchyutKumar
in ರಾಜ್ಯ
Ishwar malpe | ಸಾವಿರಾರು ಶವ ತೆಗೆದ ಸಾಹಸಿ.. ಈತನ ಬದುಕು ಮಾತ್ರ ನರಕ!

ಶುಕ್ರವಾರ ಬೆಳಗ್ಗೆ 11.30ರ ವೇಳೆಗೆ ಗಂಗಾವಳಿ ನದಿ ರಾಡಿ ನೀರಿನಲ್ಲಿದ್ದುಕೊಂಡೇ ಸ್ಥಳೀಯರೊಬ್ಬರು ನೀಡಿದ ಬನ್ಸ್'ನ್ನು ಈಶ್ವರ ಮಲ್ಪೆ ಸೇವಿಸಿದರು

ಶಿರೂರು ಗುಡ್ಡ ಕುಸಿತಕ್ಕೆ ಸಂಬ0ಧಿಸಿ ರಕ್ಷಣಾ ಕಾರ್ಯಾಚರಣೆಗೆ ಆಗಮಿಸಿರುವ ಈಶ್ವರ ಮಲ್ಪೆ (Ishwar malpe) ಶುಕ್ರವಾರ ಬೆಳಗ್ಗೆ ತಿಂಡಿಯನ್ನು ಸೇವಿಸಿಲ್ಲ. ಅವರ ತಂಡದ ಯಾವ ಸದಸ್ಯರು ಹಸಿವಾದರೂ ಅದನ್ನು ಬೇರೆಯವರಲ್ಲಿ ಹೇಳಿಕೊಂಡಿಲ್ಲ.

ADVERTISEMENT

ಮಧ್ಯಾಹ್ನದ ವೇಳೆ ಮನೆ ಬಾಗಿಲಿಗೆ ಬಂದವರನ್ನು ಉತ್ತರ ಕನ್ನಡ ಜಿಲ್ಲೆಯ ಜನ ಊಟ ಹಾಕಿಸದೇ ಕಳುಹಿಸುವುದಿಲ್ಲ. ಆದರೆ, ಶಿರೂರು ಗುಡ್ಡ ಕುಸಿತಕ್ಕೆ ಸಂಬ0ಧಿಸಿ ಸ್ವಯಂ ಪ್ರೇರಣೆಯಿಂದ ಉಚಿತವಾಗಿ ಸೇವೆ ಮಾಡಲು ಆಗಮಿಸಿರುವ ಈಶ್ವರ ಮಲ್ಪೆ ಅವರಿಗೆ ಸರ್ಕಾರದ ನೆರವು ಸಿಗುತ್ತಿಲ್ಲ. ಶಿರೂರಿಗೆ ಬಂದ ಮೊದಲ ದಿನ ಅವರ ತಂಡದವರು ಬೇಲೆಕರೆಯ ಮನೆಯೊಂದರಲ್ಲಿ ಆಶ್ರಯ ಪಡೆದಿದ್ದರು. ನಂತರ ಶಾಸಕ ಸತೀಶ್ ಸೈಲ್ ಅವರಿಗೆ ಅತಿಥಿಗೃಹದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಕೊಟ್ಟರು. ಆದರೆ, ಈವರೆಗೂ ಅವರ ಊಟ-ಉಪಚಾರಕ್ಕಾಗಿ ಯಾರೂ ವಿಚಾರಿಸಿದವರಿಲ್ಲ. ಕಿಸೆಯಲ್ಲಿ ಕಾಸಿದ್ದರೆ ಮಾತ್ರ ಅವರು ಹಾಗೂ ಅವರ ಜೊತೆಯಿದ್ದವರು ಊಟ ಮಾಡುತ್ತಾರೆ. ಸೇವೆಯನ್ನೇ ಸರ್ವಸ್ವ ಎಂದುಕೊ0ಡಿರುವ ಅವರು ತಮ್ಮ ಕಷ್ಟಗಳನ್ನು ಯಾರಿಗೂ ಹೇಳಿಕೊಳ್ಳುವುದಿಲ್ಲ. ಸಾರ್ವಜನಿಕರಿಗೂ ಅವರ ಬಗ್ಗೆ ಅರಿವಿಲ್ಲ!

ಮೋಗವೀರ ಸಮುದಾಯದಲ್ಲಿ ಹುಟ್ಟಿದ ಮೀನುಗಾರ ಈ ಈಶ್ವರ ಮಲ್ಪೆ. ಬಾಲ್ಯದಿಂದಲೂ ಸಾಹಸ ಚಟುವಟಿಕೆ ರೂಡಿಸಿಕೊಂಡವರು. ಭಾರತೀಯ ಸೈನ್ಯ ಸೇರಬೇಕು ಎಂಬ ಮಹದಾಸೆ ಹೊಂದಿದ್ದ ಅವರು ಕಲಿತಿದ್ದು 9ನೇ ತರಗತಿ. ಹೀಗಾಗಿ ಸೇನೆಗೆ ಸೇರಲು ಆಗಲಿಲ್ಲ. ಆದರೆ, ತಮ್ಮಲ್ಲಿದ್ದ ಸಮಾಜ ಸೇವಾ ಗುಣ ಅವರು ಎಂದು ಬಿಟ್ಟುಕೊಟ್ಟಿಲ್ಲ. ದೋಣಿಗಳಿಗೆ ನೀರು ತುಂಬಿಸಿಕೊಡುವುದು ಅವರ ವೃತ್ತಿ. ಅವರ ಕೆಲಸಕ್ಕಾಗಿ ಯಾರ ಬಳಿಯೂ ಇಂತಿಷ್ಟೇ ಹಣ ಎಂದು ಅಂಗಲಾಚಿದವರಲ್ಲ. ಹೀಗಾಗಿಯೇ ಈಶ್ವರ ಮಲ್ಪೆ ಅವರು ಈಗಲೂ ತಗಡಿನ ಮನೆಯಲ್ಲಿ ವಾಸಿಸುತ್ತಾರೆ. ಅವರ ಮೂವರು ಮಕ್ಕಳಲ್ಲಿ ಒಬ್ಬರು ಈಗಿಲ್ಲ. ಇಬ್ಬರು ಅಂಗವಿಕಲರು!

Advertisement. Scroll to continue reading.

ಅವರ ಜೊತೆ ಇದೀಗ ಬಂದಿರುವ ಎಲ್ಲರಿಗೂ ಬೇರೆ ಬೇರೆ ಕೆಲಸಗಳಿದೆ. ಆದರೂ ಸೇವಾ ಮನೋಭಾವನೆಯಿಂದ ಅವರು ರಕ್ಷಣಾ ಕೆಲಸಕ್ಕೆ ಬಂದಿದ್ದಾರೆ. ಈ ವೇಳೆ ಅವರೆಲ್ಲರ ಊಟ-ವಸತಿ ವೆಚ್ಚವನ್ನು ಈಶ್ವರ ಮಲ್ಪೆ ಭರಿಸುತ್ತಿದ್ದು, ಶಿರೂರಿಗೆ ಆಗಮಿಸಿದ ನಂತರ 40 ಸಾವಿರ ರೂ ಸ್ವಂತ ಹಣ ಖರ್ಚಾಗಿದೆ. ಇದೀಗ ಜೇಬಿನಲ್ಲಿ ಹಣವಿಲ್ಲ. ಆದರೂ, ಅವರು ತಮ್ಮ ರಕ್ಷಣಾ ಕೆಲಸ ನಿಲ್ಲಿಸಿಲ್ಲ. ಶುಕ್ರವಾರ ಮಧ್ಯಾಹ್ನ ಹಾಗೂ ರಾತ್ರಿಗೆ ಪ್ರವಾಸಿ ಮಂದಿರದಲ್ಲಿ ಊಟಕ್ಕೆ ಹೇಳಿದ್ದಾರೆ. ನಾಳೆಯದ್ದು ಹೇಗೆ ಎಂದು ಅರಿವಿಲ್ಲ. ದೋಣಿಗಳಿಗೆ ನೀರು ತುಂಬುವ ಕೆಲಸಕ್ಕೆ ಬರುವ ಕಾರ್ಮಿಕರು ಹಾಗೂ ಅವರ ಸ್ನೇಹಿತರ ಜೊತೆ ಸೇರಿ ಯಾರು ಎಲ್ಲಿಯೇ ಅಪಾಯದಲ್ಲಿದ್ದರೂ ಅಲ್ಲಿಗೆ ಧಾವಿಸುತ್ತಾರೆ. ಈವರೆಗೆ 20ಕ್ಕೂ ಅಧಿಕ ಜನರನ್ನು ಅವರು ಬದುಕಿಸಿದ್ದಾರೆ. ನೀರಿನ ಆಳಕ್ಕೆ ಸಿಲುಕಿದ್ದ ಸಾವಿರಾರು ಶವಗಳನ್ನು ನೀರಿನಿಂದ ಮೇಲೆತ್ತಿದ್ದಾರೆ.

Advertisement. Scroll to continue reading.

`ಎಲ್ಲರೂ ದುಡ್ಡು ಪಡೆದು ಕೆಲಸ ಮಾಡಿದರೆ, ಬಡವರ ರಕ್ಷಣೆಗೆ ಬರುವವರು ಯಾರೂ ಇರುವುದಿಲ್ಲ. ನೀರಿನ ಆಳದಲ್ಲಿ ಈಜುವುದು ಮಾತ್ರ ನನಗೆ ಗೊತ್ತು. ನಾನು ಇಲ್ಲಿ ಒಳಿತು ಮಾಡಿದರೆ ಅಂಗವಿಕಲರಾಗಿರುವ ನನ್ನ ಮಕ್ಕಳಿಗೆ ಮುಂದೆ ಒಳಿತಾಗುತ್ತದೆ ಎಂಬ ಭಾವನೆಯಿಂದ ಈ ಕೆಲಸ ಮಾಡುತ್ತಿದ್ದೇನೆ’ ಎನ್ನುತ್ತ ಅವರು ಭಾವುಕರಾದರು. ಇಡೀ ದಿನ ನೀರಿನಲ್ಲಿರುವ ಅವರು ಫೋನಿನಲ್ಲಿ ಮಾತಿಗೆ ಸಿಗುವುದು ಕಡಿಮೆ. ಅದಾಗಿಯೂ ಒಮ್ಮೊಮ್ಮೆ ಮಾತನಾಡುತ್ತಾರೆ. ಅವರು ಯಾರಿಂದಲೂ ಏನನ್ನು ಬೇಡುವುದಿಲ್ಲ. ಕೊಟ್ಟಿದ್ದನ್ನು ಸ್ವೀಕರಿಸಲು ಸಹ ಅವರಿಗೆ ಮುಜುಗರ. ಈಶ್ವರ ಮಲ್ಪೆ ಅವರ ಫೋನ್ ನಂ: 9663434415. ಇದೇ ಸಂಖ್ಯೆಯಲ್ಲಿ ಗೂಗಲ್ ಪೇ ( Google pay ) ಸಹ ಇದೆ.

`ಸ್ವ ಇಚ್ಚೆಯಿಂದ ನೀವು ನೀಡುವ ಪ್ರತಿಯೊಂದು ರೂಪಾಯಿ ಸಹ  ಅಮೂಲ್ಯ’

ಈಶ್ವರ ಮಲ್ಪೆ ಅವರಿಗೆ ಸಂಬ0ಧಿಸಿದ ಇನ್ನೊಂದು ವರದಿ ಇಲ್ಲಿ ಓದಿ..

Ishwar malpe | ಕಾಸು ಪಡೆದಿಲ್ಲ.. ಸನ್ಮಾನವನ್ನೂ ಸ್ವೀಕರಿಸಿಲ್ಲ: ಮಾತು ತಪ್ಪದ ಮಾನವೀಯ ವ್ಯಕ್ತಿ ಈತ!

Previous Post

Accident | ತರಕಾರಿ ತರಲು ಹೋದವ ಆಸ್ಪತ್ರೆಗೆ: ಸ್ಕೂಟಿಗೆ ಗುದ್ದಿದ ಸರ್ಕಾರಿ ಬಸ್ಸು

Next Post

Temple | ದಿವ್ಯ ದೇಗುಲ: ದತ್ತಮಂದಿರದಲ್ಲಿ ತ್ರಿಮೂರ್ತಿ ದರ್ಶನ!

Next Post
Temple | ದಿವ್ಯ ದೇಗುಲ: ದತ್ತಮಂದಿರದಲ್ಲಿ ತ್ರಿಮೂರ್ತಿ ದರ್ಶನ!

Temple | ದಿವ್ಯ ದೇಗುಲ: ದತ್ತಮಂದಿರದಲ್ಲಿ ತ್ರಿಮೂರ್ತಿ ದರ್ಶನ!

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ