6
  • Latest

Agriculture festival | ನಾಟಿ ಹಬ್ಬ ಬಲು ಜೋರು: ಗದ್ದೆಗೆ ಇಳಿದು ಕೆಂಪಕ್ಕಿ-ಕಡ್ಲೆಮಡ್ಡಿ ಊಟ ಸವಿದ ಗಣ್ಯರು!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Monday, March 30, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಿಡಿಯೋ

Agriculture festival | ನಾಟಿ ಹಬ್ಬ ಬಲು ಜೋರು: ಗದ್ದೆಗೆ ಇಳಿದು ಕೆಂಪಕ್ಕಿ-ಕಡ್ಲೆಮಡ್ಡಿ ಊಟ ಸವಿದ ಗಣ್ಯರು!

AchyutKumar by AchyutKumar
in ವಿಡಿಯೋ
advt advt advt
ADVERTISEMENT

ಕೃಷಿ ವಿಜ್ಞಾನಿಗಳು, ಕೃಷಿ – ತೋಟಗಾರಿಕಾ ಅಧಿಕಾರಿಗಳ ಜೊತೆ ಶಿರಸಿ ಸ್ಕೋಡ್‌ವೆಸ್ ಸಂಸ್ಥೆ ಸಿಬ್ಬಂದಿ ಶನಿವಾರ ಗದ್ದೆಗೆ ಇಳಿದು ನಾಟಿ ಮಾಡಿದರು. ಉಂಚಳ್ಳಿಯ ಸರಸ್ವತಿ ಫಾರಂ’ನಲ್ಲಿನ 5 ಎಕರೆ ಪ್ರದೇಶದಲ್ಲಿ 22 ಬಗೆಯ ಭತ್ತಗಳನ್ನು ರೈತರ ಸಹಭಾಗಿತ್ವದಲ್ಲಿ ಬಿತ್ತನೆ ( Agriculture festival ) ಮಾಡಲಾಯಿತು. ಇದಾದ ನಂತರ ಎಲ್ಲರೂ ಒಟ್ಟಿಗೆ ಸೇರಿ ಗ್ರಾಮೀಣ ಊಟದ ಸೊಬಗು ಸವಿದರು.

ಸಾವಯವ ಕೆಂಪಕ್ಕಿಯ ಅನ್ನದ ಜೊತೆ ಸ್ಥಳೀಯ ಆಹಾರಗಳಾದ ಕಡ್ಲೆಮಡ್ಡಿ, ಹಲಸಿನ ಹಪ್ಪಳ, ಸವತೆಕಾಯಿ ಖರಿ, ಬೂತ್ಗೊಜ್ಜು, ಬಗೆಬಗೆ ತರಕಾರಿಯ ಪಲ್ಯದ ಊಟಕ್ಕೆ ಹಲವರು ಮನಸೋತರು. ಗದ್ದೆ ಹಾಳಿಯ ಮೇಲೆ ಕುಳಿತು ಅನೇಕ ಗಣ್ಯರು ಊಟ ಮಾಡಿದರು. ಸಾವಯವ ಕೃಷಿ ಪದ್ಧತಿಯ ಮೂಲಕ ಸಾಂಪ್ರದಾಯಿಕ ಕೃಷಿಗೆ ಒತ್ತು ನೀಡುವ ಉದ್ದೇಶದಿಂದ ನಡೆದ ನಾಟಿ ಹಬ್ಬ ಆಯೋಜಿಸಲಾಗಿದ್ದು, ನಾಟಿಗೆ ಇಳಿದವರ ತಲೆಯ ಮೇಲಿನ ಟೊಪ್ಪಿ, ಬಾಯಲ್ಲಿನ ಕವಳ ಸಹ ಗ್ರಾಮೀಣ ಸೊಬಗಿಗೆ ಮೆರಗು ನೀಡಿತ್ತು. ಪ್ರಾರಂಭದಲ್ಲಿ ಸಂಪ್ರದಾಯದ0ತೆ ಮೊದಲು ಗೋ ಪೂಜೆ ನಡೆಸಲಾಯಿತು. ಹಸುವಿಗೆ ಗೋ ಗ್ರಾಸ ನೀಡುವ ಮೂಲಕ ಹಬ್ಬ ಶುರುವಾಯಿತು. ನೇಗಿಲು, ನೊಗ ಹಾಗೂ ಅಗೆ ಪೂಜೆಯನ್ನು ಸ್ಕೋಡ್‌ವೆಸ್ ಮುಖ್ಯಸ್ಥ ವೆಂಕಟೇಶ್ ನಾಯ್ಕ ನೆರವೇರಿಸಿದರು.

ADVERTISEMENT
ADVERTISEMENT

ಗಜಮಿನಿ, ಶೋಬಿನಿ, ಮೈಸೂರು ಮಗ, ಕಗ್ಗ, ರಾಜಮುಡಿ, ಮಂಜಗುಣಿ ಸಣ್ಣ ಸೇರಿ ಪಾರಂಪರಿಕ ಅಳಿವಿನಂಚಿನಲ್ಲಿರುವ ಭತ್ತದ ಗಿಡಗಳನ್ನು ಇಲ್ಲಿ ನಾಟಿ ಮಾಡಲಾಗಿದ್ದು, ಅಂದಾಜು 12 ಕ್ವಿಂಟಲ್ ಇಳುವರಿ ಬರುವ ನಿರೀಕ್ಷೆಯಿದೆ. ರೈತರಿಗೆ ಉತ್ತಮ ತಳಿಯ ಸಾಂಪ್ರದಾಯಿಕ ಬೀಜ ದೊರೆಯಬೇಕು. ರೈತರಿಗೆ ಬೀಕಾದ ಬೀಜ ಬ್ಯಾಂಕ್ ಮಾಡಬೇಕು ಎಂಬ ಉದ್ದೇಶದಿಂದ ಬಿತ್ತನೆ ಮಾಡಲಾಗಿದ್ದು, ರೈತರು ಸಹ ಉತ್ಸಾಹದಿಂದ ಭಾಗವಹಿಸಿದ್ದರು.

Advertisement. Scroll to continue reading.

ಈ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಉಪ ನಿರ್ದೇಶಕ ಟಿ ಎಚ್ ನಟರಾಜ, ಕೃಷಿ ವಿಜ್ಞಾನ ಕೇಂದ್ರದ ರೂಪಾ ಪಾಟೀಲ್, ಸ್ಕೊಡ್‌ವೆಸ್ ಉಪಾಧ್ಯಕ್ಷ ಕೆ ವಿ ಖೂರ್ಸೆ, ಸ್ಕೊಡ್‌ವೆಸ್ ಸಂಸ್ಥೆಯ ಆಡಳಿತ ಮತ್ತು ಮುಖ್ಯ ಹಣಕಾಸು ಅಧಿಕಾರಿ ಸರಸ್ವತಿ ಎನ್ ರವಿ, ಸಂಸ್ಥೆಯ ನಿರ್ದೇಶಕ ಕೆ. ಎನ್. ಹೊಸ್ಮನಿ ಈ ನಾಟಿ ಪ್ರಕ್ರಿಯೆಯಲ್ಲಿ ತೊಡಗಿಕೊಂಡರು.

Advertisement. Scroll to continue reading.

ನಾಟಿ ಹಬ್ಬ ಹೇಗಿತ್ತು? ವಿಡಿಯೋ ಇಲ್ಲಿ ನೋಡಿ..

ShareSendTweetShare
ADVERTISEMENT
Previous Post

Illegal liquor | ಹೆಸರಿಗೆ ಎಗ್‌ರೈಸ್ ಸೆಂಟರ್: ಅಲ್ಲಿ ನಡೆಯುವ ವ್ಯಾಪಾರವೇ ಬೇರೆ!

Next Post

Techers | ಈ ಶಿಕ್ಷಕರಿಗೆ ಇನ್ನೂ ಸಿಕ್ಕಿಲ್ಲ ನ್ಯಾಯ!

Next Post

Techers | ಈ ಶಿಕ್ಷಕರಿಗೆ ಇನ್ನೂ ಸಿಕ್ಕಿಲ್ಲ ನ್ಯಾಯ!

Theft | ಸಿಸಿ ಕ್ಯಾಮರಾ ಹೇಳಿದ ರಹಸ್ಯ: ಸರ್ಕಾರಿ ದಾಖಲೆಗೂ ಇಲ್ಲ ಭದ್ರತೆ!

Temple | ದತ್ತ ಮಂದಿರ ನಿರ್ಮಾಣ: ಶ್ರೀರಾಮ.. ನಿನ್ನ ನಾಮಬಲವೊಂದಿದ್ದರೆ ಸಾಕು!

Temple | ದತ್ತ ಮಂದಿರ ನಿರ್ಮಾಣ: ಶ್ರೀರಾಮ.. ನಿನ್ನ ನಾಮಬಲವೊಂದಿದ್ದರೆ ಸಾಕು!

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page