ಬೇರೆ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂಗಾoಗ ದಾನಕ್ಕೆ ನೊಂದಣಿ ಮಾಡಿಕೊಂಡವರ ಸಂಖ್ಯೆ ತೀರಾ ಕಡಿಮೆ. ಇದಕ್ಕೆ ಮುಖ್ಯ ಕಾರಣ ಮೂಡನಂಬಿಕೆ. ವ್ಯಕ್ತಿ ಸಾವಿನ ನಂತರ ಅಂಗಾoಗ ದಾನ ಮಾಡುವುದು ಪುಣ್ಯದ ಕೆಲಸ. ಒಬ್ಬ ವ್ಯಕ್ತಿಯ ಅಂಗಾoಗ ದಾನನಿಂದ 8 ಪ್ರಾಣ ಕಾಪಾಡಲು ಸಾಧ್ಯ.
ಜಗತ್ತಿನಲ್ಲಿ ಜನಿಸಿದ ಪ್ರತಿ ಜೀವಿಯೂ ಮರಣ ಹೊಂದಲೇಬೇಕು. ಜಗತ್ತಿನಲ್ಲಿ ಯಾವುದೇ ಸಾಧನೆಗಳನ್ನು ಮಾಡಲು ದೇಹ ಅಗತ್ಯ. ಆದರೆ ಜೀವಿತಾವಧಿಯಲ್ಲಿ ಯಾವುದೇ ಸಾಧನೆ ಮಾಡದೇ ಇದ್ದರೂ ವ್ಯರ್ಥವಾಗಿ ಸಾಯುವ ಬದಲು, ಮರಣದ ನಂತರವಾದರೂ ತಮ್ಮ ಅಂಗಾoಗಗಳನ್ನು ದಾನ ( Organ donation ) ಮಾಡುವುದರ ಮೂಲಕ ಮತ್ತೊಬ್ಬರ ದೇಹದ ಮೂಲಕ ಪ್ರತಿಯೊಬ್ಬರೂ ಸದಾ ಜೀವಂತವಾಗಿರಲು ಸಾಧ್ಯ.
ಅನೇಕ ಜನರು ಅಂಗಾoಗ ವೈಫಲ್ಯದಿಂದ ಮರಣ ಹೊಂದುತ್ತಿದ್ದು, ಭಾರತದಾದ್ಯಂತ ಪ್ರತಿ ವರ್ಷ ಅಂದಾಜು 5 ಲಕ್ಷ ಅಂಗಾoಗಗಳ ಅಗತ್ಯವಿದೆ. ಆದರೆ ಪ್ರಸ್ತುತ ಕೇವಲ 2-3 ಪ್ರತಿಶತದಷ್ಟು ಬೇಡಿಕೆಯನ್ನು ಮಾತ್ರ ಪೂರೈಸಲಾಗುತ್ತಿದೆ. ಮೆದುಳು ನಿಷ್ಕ್ರಿಯಗೊಂಡ ಯಾವುದೇ ವ್ಯಕ್ತಿಯ ಕುಟುಂಬದ ಸದಸ್ಯರ ಒಪ್ಪಿಗೆಯ ಮೇರೆಗೆ ಅಂಗಾoಗ ದಾನ ಮಾಡಬಹುದಾಗಿದ್ದು, ಇದು ಕಾನೂನು ಬದ್ಧವಾಗಿದೆ. ಯಾವುದೇ ವಯಸ್ಸು ಅಥವಾ ಲಿಂಗ ಭೇದವಿಲ್ಲದೇ ಅಂಗಾoಗ ಮತ್ತು ಅಂಗಾoಶ ದಾನ ಮಾಡಬಹುದಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂಗಾoಗ ದಾನ ಮಾಡಲು ಈವರೆಗೆ 483 ಜನ ನೊಂದಾಯಿಸಿಕೊoಡಿದ್ದು, ಇದರಲ್ಲಿ 18 ವರ್ಷದಿಂದ 60 ವರ್ಷ ಮೇಲ್ಪಟ್ಟ ವಯೋಮಿತಿಯವರೂ ಇದ್ದಾರೆ. ನೋಂದಣಿ ಮಾಡಿದವರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಇದರಲ್ಲಿ 283 ಜನ ಹೃದಯ, 209 ಕರುಳು, 278 ಕಿಡ್ನಿ, 243 ಲಿವರ್, 221 ಶ್ವಾಸಕೋಶ, 211 ಮೇದೋಜೀರಕ ಗ್ರಂಥಿಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ಈ ಅಂಗಗಳ ಅಂಗಾoಶಗಳಾದ ರಕ್ತನಾಳಗಳು 179, ಮೂಳೆ 167, ಕಾರ್ಟಿಲೇಜ್ 167, ಎರಡು ಕಣ್ಣುಗಳ ಕಾರ್ನಿಯಾ 433, ಹೃದಯದ ಕವಾಟಗಳು 188 ಮತ್ತು 177 ಸಂಖ್ಯೆಯ ಚರ್ಮವನ್ನು ದಾನಕ್ಕೆ ನೀಡುವುದಾಗಿ ಘೋಷಿಸಿಕೊಂಡಿದ್ದಾರೆ.
ಮೂತ್ರಪಿoಡ ಮತ್ತು ಯಕೃತ್ತನ್ನು ಜೀವಂತ ದಾನಿಗಳು ಮೂಲಕ ಮತ್ತೊಬ್ಬರಿಗೆ ಕಸಿ ಮಾಡಬಹುದಾಗಿದ್ದು, ಹೃದಯ, ಶ್ವಾಸಕೋಶ ಮತ್ತು ಮೇದೋಜೀರಕ ಗ್ರಂಥಿಯ ದಾನಗಳನ್ನು ಮೆದುಳು ಮರಣ ಹೊಂದಿದ ದಾನಿಗಳ ಮೂಲಕ ಮಾತ್ರ ಪಡೆಯಬಹುದು. ಜೀವಂತ ದಾನಿಯು, ತನ್ನ ಹತ್ತಿರದ ಸಂಬoಧಿ, ಸಂಗಾತಿ, ಮಗ-ಮಗಳು, ಸಹೋದರ-ಸಹೋದರಿ, ಪೋಷಕರು, ಅಜ್ಜಿ-ತಾತ ಮತ್ತು ಮೊಮ್ಮಕ್ಕಳು ಮತ್ತು ನಿಕಟ ಸ್ನೇಹಿತರಿಗೆ ಮಾತ್ರ ಅಂಗಾoಗ ದಾನ ಮಾಡಬಹುದಾಗಿದೆ. ಅವರು ತಮ್ಮ ಅಂಗಾoಗ ದಾನ ಮಾಡಲು ರಾಜ್ಯ ಅಧಿಕಾರ ಸಮಿತಿಯಿಂದ ಅನುಮೋದನೆ ಪಡೆಯಬೇಕು.
ಸಾಮಾನ್ಯವಾಗಿ ತಲೆಗೆ ಮಾರಣಾಂತಿಕ ಗಾಯವನ್ನು ಅನುಭವಿಸಿ ಸಾವನಪ್ಪಿದವರ ಕುಟುಂಬದವರು ದಾನದ ಘೋಷಣೆ ಮಾಡಲು ಅವಕಾಶವಿದೆ. ಅಂಗಾoಗಗಳನ್ನು ಪಡೆದ ನಂತರ ದಾನಿಯ ದೇಹವನ್ನು ಗೌರವಯುತವಾಗಿ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತದೆ. ದಾನಿಯ ಅಂಗಾoಗಗಳನ್ನು ಅದನ್ನು ಸ್ವೀಕರಿಸುವ ರೋಗಿ ದಾಖಲಾಗಿರುವ ಆಸ್ಪತ್ರೆಗಳಿಗೆ ನಿಗಧಿತ ಅವಧಿಯೊಳಗೆ ತಲುಪುವಂತೆ ಸುರಕ್ಷಿತವಾಗಿ ಸಾಗಿಸಲಾಗುತ್ತದೆ.
ಸಾವಿನ ನಂತರ ಮಣ್ಣಲ್ಲಿ ಮಣ್ಣಾಗುವ ಅಥವಾ ಬೆಂಕಿಯ ಜ್ವಾಲೆಯಲ್ಲಿ ಉರಿಯುವ ಮೊದಲು ಅಂಗಾoಗಗಳನ್ನು ದಾನ ಮಾಡಿ. ಈ ಬಗ್ಗೆ ಮಾಹಿತಿ ಬೇಕಾದವರು ಯಾವುದೇ ಸಮಯದಲ್ಲಿ `ಜೀವ ಸಾರ್ಥಕತೆ’ ಸಹಾಯವಾಣಿ 9845006768 ಸಂಪರ್ಕಿಸಿ.
ಮಾಹಿತಿ: ಡಾ ಅರ್ಚನಾ ನಾಯಕ, ಜಿಲ್ಲಾ ಸರ್ವೇಕ್ಷಣಾಧಿಕಾರಿ, ಉತ್ತರ ಕನ್ನಡ ಜಿಲ್ಲೆ
Discussion about this post