ಮುಂದಿನ ಮೂರು ತಿಂಗಳ ಒಳಗೆ ಕುಂಬ್ರಿ ಮರಾಠಿಗರಿಗೆ ರಾಜಕೀಯ ( Politics ) ಮೀಸಲಾತಿ ಘೋಷಿಸದೇ ಇದ್ದಲ್ಲಿ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸುವ ಬಗ್ಗೆ ಕುಂಬ್ರಿ ಮರಾಠಿಗರ ಸಭೆಯಲ್ಲಿ ನಿರ್ಣಯಿಸಲಾಗಿದೆ.
ಶಿರಸಿಯ ಅಂಬೇಡ್ಕರ ಭವನದಲ್ಲಿ `ಕುಂಬ್ರಿ ಮರಾಠಿ ಮೀಸಲಾತಿ ಎರಡು ದಶಕ’ ಸಭೆಯಲ್ಲಿ ಈ ನಿರ್ಣಯ ಮಂಡಿಸಲಾಗಿದೆ.
ಮರಾಠಿ ನಿಗಮ ವ್ಯಾಪ್ತಿಯಲ್ಲಿ ಕುಂಬ್ರಿ ಮರಾಠಿ ಸಮಾಜ ಸೇರ್ಪಡಿಸುವುದು, ಈ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಪರಿಗಣಿಸುವುದು, ಅರಣ್ಯ ಅತಿಕ್ರಮಣದಾರರಿಗೆ ಹಕ್ಕು ನೀಡುವುದು ಹಾಗೂ ನಾಟಿ ವೈದ್ಯಕೀಯ ಪದ್ಧತಿಗೆ ಪ್ರೋತ್ಸಾಹಿಸುವುದು ಅಗತ್ಯ ಎಂದು ಈ ಸಭೆ ನಿರ್ಣಯಿಸಿದೆ.
ಜಿಲ್ಲಾ ಹಿಂದುಳಿದ ವರ್ಗಗಳ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ, ಮಾನವ ಬಂದು ವೇದಿಕೆಯ ಸಂಯೋಜಕ ಎ ಬಿ ರಾಮಚಂದ್ರಪ್ಪ, ಜಿಲ್ಲಾ ಕುಂಬ್ರಿ ಮರಾಠಿ ಅಭಿವೃದ್ದಿ ಸಂಘದ ಅಧ್ಯಕ್ಷ ಮಂಜುನಾಥ ಮರಾಠಿ, ಪ್ರಮುಖರಾದ ದೇವರಾಜ ಮರಾಠಿ ಇತರರು ಸಭೆಯಲ್ಲಿದ್ದರು.




Discussion about this post