ಅಗಸ್ಟ 22 ಅಂದರೆ ಜಗತ್ತಿನ ಜನಪದ ಸಮುದಾಯಗಳಿಗೂ ಅವಿಸ್ಮರಣೀಯ ದಿನ. ವಿಲಿಯಂ ಜಾನ್ ಥಾವ್ನ್ ಎಂಬ ಬ್ರಿಟಿಷ್ ಪ್ರಾಚೀನ ಅನ್ವೇಷಕ ಅಂಬೋಸ್ ಮೆರ್ತಾನ್ ಪತ್ರಿಕೆಗೆ 1846ರಲ್ಲಿ ಬರೆದ ಒಂದು ಪತ್ರದಿಂದ `ಫೋಕ್‌ಲೋರ್’ ಎನ್ನುವ ಪದ ಅಧಿಕೃತವಾಗಿ ಬಳಕೆಗೆ ಬಂದಿತು.
ಬ್ರೆಜಿಲ್ ಸರ್ಕಾರವು ಆಗಸ್ಟ್ 22ನ್ನು `ಫೋಕ್‌ರ್ ಡೇ’ ಎಂದು 1965ರ ಆ 17ರಂದು ಅಧಿಕೃತವಾಗಿ ಘೋಷಿಸಿತು. ಭಾರತದಲ್ಲೂ 2015ರ ನಂತರ ವಿಶ್ವ ಜಾನಪದ ದಿನ ಆಚರಿಸಲಾಗುತ್ತಿದೆ. ಕನ್ನಡ ಜನಪದ ಕತೆಗಳು ಜಗತ್ತಿನ ಯಾವುದೇ ಭಾಷೆಯ ಕತೆಗಳ ಹೆಗಲೆತ್ತರಕ್ಕೆ ನಿಲ್ಲಬಲ್ಲುದು ಎನ್ನುವ ಮಾತು ಉದಾರ ಪ್ರಶಂಸೆ ಎಂದು ತಿಳಿಯಬೇಕಾಗಿಲ್ಲ.
ಸಾಮಾನ್ಯವಾಗಿ ನಮ್ಮ ಜಾನಪದ ಅಧ್ಯಯನದ ಈಚೆಗೆ ನಾವು ನಮ್ಮ ಸಾಂಸ್ಕೃತಿಕ ಪ್ರಕಾರಗಳಾದ ಲಾವಣಿ, ಕತೆ, ಅಜ್ಜಿಕತೆ, ಹಾಡು, ಪದ, ಅಜ್ಜಿಮದ್ದು, ಗಾದೆ, ಒಗಟು, ಒಡಪು, ಎದುರುಕತೆ ಬಳಸುವವರ ಪ್ರಮಾಣ ಹೆಚ್ಚಾಗಿದೆ. ಇದಕ್ಕೆ ಪ್ರತಿಯಾಗಿ ಕಥನಕವನ, ಜನಪದ ಕಥೆ, ಜನಪದ ಮಹಾಕಾವ್ಯ, ಜನಪದ ಕಾವ್ಯ ಖಂಡ, ಜನಪದ ವೈದ್ಯ ಮುಂತಾದ ವಿಶ್ಲೇಷಣಾತ್ಮಕ ಪ್ರಕಾರಗಳ ಮೂಲಕ ಗುರುತಿಸುವ ಹಾಗೂ ಬಳಸುವ ಪ್ರವೃತ್ತಿ ಹೆಚ್ಚಾಗುತ್ತಿದೆ.
ಆದರೂ ಯುನೆಸ್ಕೊ ವಿಶ್ವ ಜಾನಪದ ದಿನಕ್ಕೆ ಮಾನ್ಯತೆ ನೀಡಿಲ್ಲ.
– ಡಾ ರವಿಕಿರಣ ಪಟವರ್ಧನ, ಆಯುರ್ವೇದ ವೈದ್ಯರು ಶಿರಸಿ
Discussion about this post