ವಿಶ್ವ ಪರಿಸರ ದಿನದ ಅಂಗವಾಗಿ `ತಾಯಿಯ ಹೆಸರಲ್ಲಿ ಒಂದು ವೃಕ್ಷ’ ಅಭಿಯಾನಕ್ಕೆ ಶಿರಸಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯೂ ಆಗಿರುವ ತೋಟಗಾರಿಕಾ ಅಧಿಕಾರಿ ಸತೀಶ್ ಹೆಗಡೆ ಅವರು ಗಿಡ ನಾಟಿ ಮಾಡಿದರು.
ನಂತರ ಮಾತನಾಡಿದ ಅವರು `ಶಿರಸಿಯ 32 ಗ್ರಾಮ ಪಂಚಾಯತ್‌ಗಳಲ್ಲಿಯೂ ಗಿಡ ನೆಡುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಬೇಕು. ಈ ಮೂಲಕ ಹಸಿರು ಸಂರಕ್ಷಣೆ ಹಾಗೂ ಅರಣ್ಯೀಕರಣಕ್ಕೆ ಪ್ರಾಧಾನ್ಯತೆ ನೀಡೋಣ’ ಎಂದರು.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಹಾಗೂ ಜಿಲ್ಲಾ ಪಂಚಾಯತ್’ನ ನಿರ್ದೇಶನದಂತೆ ಶಿರಸಿ ತಾಲೂಕು ಪಂಚಾಯತ್ ಹಾಗೂ ಸಾಮಾಜಿಕ ಅರಣ್ಯ ಇಲಾಖೆಯ ಸಹಾಭಾಗಿತ್ವದಲ್ಲಿ ತಾಲೂಕಾ ಕ್ರೀಡಾಂಗಣದ ಹತ್ತಿರ ಅವರು ಗಿಡ ನಾಟಿ ಮಾಡಿದರು. ತಾಲೂಕು ಪಂಚಾಯತ್ ಯೋಜನಾಧಿಕಾರಿ ಅಶೋಕ್ ನಾಯ್ಕ, ಸಹಾಯಕ ನಿರ್ದೇಶಕ ರಾಮಮೂರ್ತಿ ಬಿ. ವಾಯ್, ಸಾಮಾಜಿಕ ಅರಣ್ಯ ಸಂರಕ್ಷಣಾಧಿಕಾರಿ ಮಾರುತಿ ನಾಯ್ಕ ಇತರರು ಇದ್ದರು.
Discussion about this post