ಕಾರವಾರ ( Karwar) : ಕಾಂಗ್ರೆಸ್ಸಿನಲ್ಲಿ ಗುರುತಿಸಿಕೊಂಡು ನಂತರ ಬಿಜೆಪಿ ಸೇರಿದ್ದ ಸಿದ್ದಾರ್ಥ ನಾಯ್ಕ ಇದೀಗ ಮತ್ತೆ ಕಾಂಗ್ರೆಸ್ ಸೇರಿದ್ದಾರೆ.
ಕಾಂಗ್ರೆಸ್ ವಿದ್ಯಾರ್ಥಿ ಘಟಕದಲ್ಲಿ ಗುರುತಿಸಿಕೊಂಡಿದ್ದ ಸಿದ್ದಾರ್ಥ ನಾಯ್ಕ’ಗೆ ( Karwar ) ಪಕ್ಷ NSUI ಜವಾಬ್ದಾರಿ ನೀಡಿತ್ತು. ಈ ಘಟಕದ ರಾಜ್ಯ ಉಪಾಧ್ಯಕ್ಷರಾಗಿ ಸಿದ್ದಾರ್ಥ ನಾಯ್ಕ ಕೆಲಸ ನಿರ್ವಹಿಸಿದ್ದರು. ಈ ನಡುವೆ ರಾಜಕೀಯ ಕಾರಣಗಳಿಂದ ಬಿಜೆಪಿ ಸೇರಿದ್ದ ಅವರು ಅಲ್ಲಿ ಸಹ ಸಕ್ರೀಯವಾಗಿರಲಿಲ್ಲ. ಇದೀಗ ಮತ್ತೆ ಕಾಂಗ್ರೆಸ್ ಸೇರಿ ಯುವ ಕಾಂಗ್ರೆಸ್ ಚುನಾವಣಾ ಆಕಾಂಕ್ಷಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.