ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 137 ಆಧಾರ್ (Aadhar ) ಸೇವಾ ಕೇಂದ್ರಗಳಿವೆ. ಈ ಎಲ್ಲಾ ಕೇಂದ್ರಗಳಲ್ಲಿ ಹೊಸದಾಗಿ ಆಧಾರ್ ನೋಂದಣಿ, ತಿದ್ದುಪಡಿ ಕಾರ್ಯ ಶುರುವಾಗಿದೆ. ಅಂಚೆ ಕಚೇರಿ ಅಥವಾ ಸಮೀಪದ ಗ್ರಾಮ ಒನ್ ಕೇಂದ್ರದಲ್ಲಿ ತಿದ್ದುಪಡಿ ಮಾಡಿಕೊಳ್ಳುವುದು ಸೂಕ್ತ. S News ಡಿಜಿಟಲ್
ಆಧಾರ್ ಕಾರ್ಡಿನಲ್ಲಿ ( Aadhar ) ಜನ್ಮ ದಿನಾಂಕ ಮತ್ತು ಲಿಂಗ ಬದಲಾವಣೆಗೆ ಕೇವಲ ಒಂದು ಬಾರಿ ಹಾಗೂ ಹೆಸರು ಬದಲಾವಣೆಗೆ 2 ಬಾರಿ ಅವಕಾಶವಿದ್ದು, ವಿಳಾಸ ಬದಲಾವಣೆ ಎಷ್ಟು ಸಲ ಬೇಕಾದರೂ ಮಾಡಬಹುದು. ಜಿಲ್ಲೆಯ 19 ಅಟಲ್ ಜನ ಸ್ನೇಹಿ ಕೇಂದ್ರಗಳು, 41 ಕರ್ನಾಟಕ ಒನ್ ಕೇಂದ್ರಗಳು, 1 ಜಿಲ್ಲಾ ಜನಸ್ಪಂದನ ಕೇಂದ್ರ, 13 ಸಾಮಾನ್ಯ ಸೇವಾ ಕೇಂದ್ರಗಳು, 45 ಭಾರತೀಯ ಅಂಚೆ ಕಚೇರಿಗಳು ಮತ್ತು 11 ಬ್ಯಾಂಕ್’ಗಳಲ್ಲಿ ಆಧಾರ್ ತಿದ್ದುಪಡಿ ಕೆಲಸ ನಡೆಯುತ್ತಿದೆ.
18 ವರ್ಷ ಮೇಲ್ಪಟ್ಟವರ ಹೆಸರು ಬದಲಾವಣೆ ಇದ್ದಲ್ಲಿ Voter id ಸರಿಪಡಿಸಿಕೊಂಡು ಆಧಾರ್ ಕಾರ್ಡಿನಲ್ಲಿ ಹೆಸರು ಬದಲಾವಣೆ ಮಾಡಬಹುದು. `ಆಧಾರ್ ಮೊಬೈಲ್ ಅಪಡೇಶನ್ ಕುರಿತು ಉತ್ತರ ಕನ್ನಡ ಜಿಲ್ಲೆಯಲ್ಲಿ 16,43,471 ಆಧಾರ್ ಸೃಜಿಸಲಾಗಿದ್ದು, 15,38,406 ಮೊಬೈಲ್ ಸೀಡೆಡ್ ಆಗಿದೆ. ಅದಾಗಿಯೂ ಒಟ್ಟು 1,05,065 ಬಾಕಿ ಇರುತ್ತದೆ. ಬಾಕಿ ಇರುವ ಆಧಾರ್ ಕಾರ್ಡ್ಗಳನ್ನು ಗ್ರಾಮ ಒನ್ ಹಾಗೂ ಕರ್ನಾಟಕ ಒನ್ ಅಂಚೆ ಕಛೇರಿ ಕೇಂದ್ರ, ನಾಡಕಛೇರಿಗಳಲ್ಲಿ ನವೀಕರಿಸಿಕೊಳ್ಳಬಹುದು’ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಹೇಳಿದ್ದಾರೆ.
S News ಡಿಜಿಟಲ್



