ಮಧ್ಯಪ್ರದೇಶದ ಇಂದೋರ್’ನಲ್ಲಿ ಮಾಲ್ವಾ ಸಾಮ್ರಾಜ್ಯದ ರಾಣಿಯಾಗಿ ಮೆರೆದ ಅಹಲ್ಯಾಬಾಯಿ ಹೋಳ್ಕರ್ ಅವರಿಗೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ನಿತ್ಯ ಪೂಜೆ ನಡೆಯುತ್ತದೆ. ಈ ರಾಣಿಗಾಗಿಯೇ ಇಲ್ಲಿ ದೇವಾಲಯವಿದ್ದು (Temple) ಅನೇಕ ಭಕ್ತರು ಆಗಮಿಸಿ ಸೇವೆ ಸಲ್ಲಿಸುತ್ತಾರೆ!
ಹಿಂದೂ ದೇವಾಲಯಗಳ ( Temple ) ರಕ್ಷಣೆ ಹಾಗೂ ಜೀರ್ಣೋದ್ಧಾರದಲ್ಲಿ ಅಹಲ್ಯಾಬಾಯಿ ಅವರ ಕೊಡುಗೆ ಅಪಾರ. ಮಧ್ಯಪ್ರದೇಶದ ಮಹೇಶ್ವರ, ಕಾಶಿ ವಿಶ್ವನಾಥ, ಗುಜರಾತಿನ ಸೋಮೇಶ್ವರ, ಶ್ರೀನಗರ, ಹೃಷಿಕೇಶ, ಬದ್ರಿನಾಥ, ಕೇದಾರನಾಥ, ವಾರಣಾಸಿ, ನೈಮಿಷಾರಣ್ಯ, ಪುರಿ, ರಾಮೇಶ್ವರ, ಶ್ರೀಶೈಲ ಮೊದಲಾದ ದೇಗುಲಗಳನ್ನು ಪರಕಿಯರಿಂದ ರಕ್ಷಿಸಿದ ಅಹಲಾಬಾಯಿ ಅವರ ಹೆಸರಿನಲ್ಲಿ ಗೋಕರ್ಣದ ಮಹಾಬಲೇಶ್ವರ ಸನ್ನಿಧಿಯಲ್ಲಿ ಸಹ ಪೂಜೆ ನಡೆಯುತ್ತದೆ! S News ಡಿಜಿಟಲ್

ಈ ರಾಣಿ ಗೋಕರ್ಣಕ್ಕೆ ಆಗಮಿಸಿದಾಗ ಇಲ್ಲಿನ ಮಹಿಳೆಯರು ಅವರಿಗೆ ಭಾಗೀನ ನೀಡಿದ್ದರು. ಈ ವೇಳೆ ಅವರು ಬಂದಾಗ ಛತ್ರವನ್ನು ನಿರ್ಮಿಸಿದ್ದು, ಅಲ್ಲಿ ಅವರ ರಾಣಿಯ ಪ್ರತಿಮೆ ಇದೆ. ರಾಣಿಯ ಜೊತೆ ಇಂದೂರಿನಿ0ದ ಬಂದಿದ್ದ ಬುಗದೆ ಕುಟುಂಬದ ಮೂರನೇ ತಲೆಮಾರಿನವರು ಇಂದಿಗೂ ರಾಣಿಯನ್ನು ನೆನೆದು ಪೂಜೆ ಮಾಡುತ್ತಿದ್ದಾರೆ. ಇದರ ಜೊತೆ ನಿತ್ಯ ಮಹಾಬಲೇಶ್ವರ ಸನ್ನಿಧಿಯಲ್ಲಿ ಸಹ ರಾಣಿಯ ಹೆಸರಿನಲ್ಲಿ ಪೂಜೆ ಸಲ್ಲಿಕೆಯಾಗುತ್ತದೆ.
ಅಹಲ್ಯಾಬಾಯಿ ಅವರು ಗೋಕರ್ಣಕ್ಕೆ ಆಗಮಿಸಿದಾಗ ಸಿದ್ದೇಶ್ವರ ಕುಟುಂಬದ ಲಕ್ಷ್ಮೀ ಅವರು ಕನ್ನಡಿಯ ಪೆಟ್ಟಿಗೆಯೊಂದನ್ನು ಕಾಣಿಕೆಯಾಗಿ ನೀಡಿದ್ದರು. ಆ ಕಾಣಿಕೆ ಪೆಟ್ಟಿಗೆಯನ್ನು ಇದೀಗ ವೈದಿಕ್ ವಿಲೇಜ್ ಅತಿಥಿ ಗೃಹದ ರಾಜೀವ ಬೈಲಕೇರಿಯವರ ಸಂಗ್ರಹದಲ್ಲಿದೆ. ಅಲ್ಲಿಗೆ ಹೋದವರಿಗೆ ರಾಜೀವ ಅವರು ರಾಣಿಯ ಇತಿಹಾಸ ತಿಳಿಸಿ, ಅವರ ಬಗ್ಗೆ ಅರಿವು ಮೂಡಿಸುತ್ತಾರೆ.
S News ಡಿಜಿಟಲ್