ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕಷ್ಟದಲ್ಲಿರುವ ಕ್ರೀಡಾಪಟುಗಳಿಗೆ (Sports ) ಸರ್ಕಾರ ಮಾಸಾಶನ ನೀಡಲು ನಿರ್ಧರಿಸಿದೆ. ಇದಕ್ಕೆ ಅರ್ಹರಿರುವವರು ಆ 31ರ ಒಳಗೆ ಅರ್ಜಿ ಸಲ್ಲಿಸಿ.
50 ವರ್ಷ ಪೂರೈಸಿದ ಕುಸ್ತಿ ಅಥವಾ ಕುಸ್ತಿಯೇತರ ಕ್ರೀಡಾಪಟುಗಳು ( Sports ) ತಹಶೀಲ್ದಾರರಿಂದ ನಮೂನೆ F ಮೂಲಕ 20 ಸಾವಿರ ರೂ ಮೀರದಂತೆ ಆದಾಯ ಪ್ರಮಾಣ ಪತ್ರ ಪಡೆಯಬೇಕು. ನಂತರ ತಮ್ಮಲ್ಲಿರುವ ಪೋಸ್ಟರ್, ಬ್ಯಾನರ್, ಹ್ಯಾಂಡ್ ಬಿಲ್ಸ್, ಆಮಂತ್ರಣ ಪತ್ರಿಕೆಗಳ ಹಾಗೂ ಪದಕಗಳನ್ನು ಆಧಾರವಾಗಿ ಪರಿಗಣಿಸಿ ದೃಢೀಕೃತ ದಾಖಲೆ, ವಯಸ್ಸಿನ ಮಾನದಂಡಕ್ಕೆ ಆಧಾರ್ ಕಾರ್ಡು ವಾಸ ಸ್ಥಳ ದೃಢಿಕರಣಕ್ಕೆ ಕಂದಾಯ ಅಧಿಕಾರಿಗಳ ಪತ್ರ, 3 ಫೋಟೋ ಹಾಗೂ ವೈದ್ಯಕೀಯ ವರದಿ ಪಡೆಯಬೇಕು. ಪಿಂಚಣಿ ಪಡೆಯದ ಬಗ್ಗೆ ತಹಶಿಲ್ದಾರರ ದೃಢೀಕರಣ ಸೇರಿ ಎಲ್ಲಾ ದಾಖಲೆಗಳ ಜೊತೆ ಅರ್ಜಿ ಸಲ್ಲಿಸಬೇಕು.
ಮಾಹಿತಿಗಾಗಿ 9480886551, 9945489193ನ್ನು ಸಂಪರ್ಕಿಸಿ.