ವಧು-ವರರ ಮಾಹಿತಿ ಹಾಗೂ ಸಮಾಲೋಚನಾ ಉದ್ದೇಶದಿಂದ ( Matrimony ) ಶಿವಮೊಗ್ಗದ `ಆರ್ ಟಿ ನಟರಾಜ್ ಶ್ರೀ ಕಲಾ ಕೌಶಲ್ಯಾಭಿವೃದ್ಧಿ ಕೇಂದ್ರ’ ಅಗಸ್ಟ 25ರಂದು ವಧು-ವರರ ಸಮ್ಮೇಳನ ಆಯೋಜಿಸಿದೆ.
ಕಳೆದ ನಾಲ್ಕು ವರ್ಷಗಳಿಂದ ವಧು-ವರರಿಗೆ ವೇದಿಕೆ ಕಲ್ಪಿಸುತ್ತಿರುವ ಈ ಸಂಸ್ಥೆ ಹಲವು ಜೋಡಿಗಳನ್ನು ಒಂದು ಮಾಡಿದೆ. ಎಲ್ಲಾ ಜಾತಿ-ಜನಾಂಗದವರೂ ಈ ಸಮಾವೇಶದಲ್ಲಿ ಭಾಗಿಯಾಗಬಹುದು. ಜೊತೆಗೆ ವಿಧವೆ-ವಿಧುರರಿಗೂ ಅವರವರ ಅರ್ಹತೆಗೆ ಅನುಗುಣವಾಗಿ ಸಂಗಾತಿಯನ್ನು ಹುಡುಕಿಕೊಳ್ಳಲು ಈ ಕೇಂದ್ರ ಸೇತುವೆಯಾಗಿದೆ. ಪ್ರಸ್ತುತ 5ನೇ ವರ್ಷದ ಕಾರ್ಯಕ್ರಮ ರೂಪಿಸಿದ್ದು, ಅಂದು ಬೆಳಗ್ಗೆ 11ಗಂಟೆಯಿ0ದ ಸಮಾಲೋಚನಾ ( Matrimony )ಸಭೆ ನಡೆಯಲಿದೆ.
`ಮರಳಿ ಯತ್ನವ ಮಾಡು, ಮರಳಿ ಯತ್ನವ ಮಾಡು ಎಂಬ ತತ್ವಪದದಂತೆ ನಿರಂತರ ಪ್ರಯತ್ನ ಮಾಡುವವರಿಗಾಗಿ ಮಾನವೀಯ ಸಂಬ0ಧ ಬೆಳಸುವುದಕ್ಕಾಗಿ ಸಂಸ್ಥೆ ಈ ಕಾರ್ಯಕ್ರಮ ಆಯೋಜಿಸಿದೆ. ಇದಕ್ಕೆ ನಾಡಿನ ಎಲ್ಲಾ ಭಾಗಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅರ್ಹರು 9448143165ಗೆ ಕರೆ ಮಾಡಿ ಹೆಸರು ನೊಂದಾಯಿಸಿಕೊಳ್ಳಬಹುದು. ಆಧಾರ್ ಕಾರ್ಡ, ಫೋಟೋ ಜೊತೆ ಇನ್ನಿತರ ದಾಖಲೆಗಳನ್ನು ತರುವುದು ಕಡ್ಡಾಯ’ ಎಂದು ಸಂಸ್ಥೆಯ `ಆರ್ ಟಿ ನಟರಾಜ್ ತಿಳಿಸಿದರು.