`ಉತ್ತರ ಕನ್ನಡ ಜಿಲ್ಲೆಯ ( Utthara kannada ) ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿದ್ದು, ಅವರಿಗೆ ಪರಿಹಾರ ಒದಗಿಸಬೇಕು’ ಎಂದು ಮುಖ್ಯಮಂತ್ರಿಗೆ ಪತ್ರ ಬರೆದಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಆ ಪತ್ರದಲ್ಲಿ `ರೈತ ಪರ ಮುಖ್ಯಮಂತ್ರಿ’ ಎಂದು ಸಿದ್ದರಾಮಯ್ಯ ಅವರನ್ನು ಹೊಗಳಿದ್ದಾರೆ. S News ಡಿಜಿಟಲ್
`ಈ ವರ್ಷ ಉತ್ತರ ಕನ್ನಡ ಜಿಲ್ಲೆಯಲ್ಲಿ (Utthara kannada) ಅತಿಯಾದ ಮಳೆಯಾಗಿದೆ. ಪೃಕೃತಿ ವಿಕೋಪದ ಕಾರಣ ಜನ ವಿವಿಧ ಸಮಸ್ಯೆ ಅನುಭವಿಸಿದ್ದಾರೆ. ಜನ ಜೀವನ ಸಹ ಅಸ್ತವ್ಯಸ್ತವಾಗಿದೆ. ಕೃಷಿ ಆಧಾರಿತ ಜೀವನ ನಡೆಸುವ ಇಲ್ಲಿನ ಜನ ಸಮಸ್ಯೆಯಲ್ಲಿದ್ದು, ಅಡಿಕೆ ಹಾಗೂ ಕಾಳು ಮೆಣಸಿಗೆ ಕೊಳೆ ರೋಗ ಬಾಧಿಸಿದೆ. ಜೊತೆಗೆ ಎಲೆಚುಕ್ಕಿ ರೋಗದಿಂದ ಅಡಿಕೆ ಮರಗಳು ಸಾವನಪ್ಪಿದೆ. ಇದರಿಂದ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ’ ಎಂದು ಕಾಗೇರಿ ವಿವರಿಸಿದ್ದಾರೆ.
`ರೈತರ ಕಷ್ಟಗಳಿಗೆ ಸದಾ ಸ್ಪಂದಿಸುವ ತಾವು ಈ ಪ್ರದೇಶದಲ್ಲಿ ಹೋಬಳಿವಾರು ಅಡಿಕೆ ಬೆಳೆ ಸಮೀಕ್ಷೆ ನಡೆಸಬೇಕು. ಬೆಳೆಗಳ ಸ್ಥಿತಿಗತಿಯ ಬಗ್ಗೆ ವಸ್ತುನಿಷ್ಠ ವರದಿ ಪಡೆದು ಅಡಿಕೆ ಹಾಗೂ ಕಾಳು ಮೆಣಸಿಗೆ ಬೆಳೆ ಪರಿಹಾರ ಒದಗಿಸಬೇಕು’ ಎಂದು ಮನವಿ ಮಾಡಿದ್ದಾರೆ.
ಮೈಲು ತುತ್ತಕ್ಕೂ ಬೇಕು ಸಬ್ಸಿಡಿ:
`ಅಡಿಕೆ ಬೆಳೆಗೆ ಸಿಂಪಡಿಸುವ ಮೈಲುತುತ್ತಕ್ಕೆ ಸಹ ಸರ್ಕಾರ ಸಬ್ಸಿಡಿ ಕೊಡಬೇಕು’ ಎಂದು ಕಾಗೇರಿ ಆಗ್ರಹಿಸಿದ್ದಾರೆ.
S News ಡಿಜಿಟಲ್