6
  • Latest

Uttara kannada | ಅಗಸ್ಟ 25: ಸಮಗ್ರ ಸುದ್ದಿಗಳ ಸಂಕ್ಷಿಪ್ರ ನೋಟ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

Uttara kannada | ಅಗಸ್ಟ 25: ಸಮಗ್ರ ಸುದ್ದಿಗಳ ಸಂಕ್ಷಿಪ್ರ ನೋಟ

AchyutKumar by AchyutKumar
in ಸ್ಥಳೀಯ

ಏಳುವರೆ ವರ್ಷದ ಬಾಲಕನಿಂದ ಏಳುವರೆ ನಿಮಿಷದ ಸಾಧನೆ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆ

ADVERTISEMENT

ಶಿರಸಿ: ಕಣ್ಣು ಮುಚ್ಚಿ ಜಗತ್ತಿನ ನಕಾಶೆ ಜೋಡಿಸುವ ನಿಶ್ಚಿತ ಹೆಗಡೆ ಹೆಸರು ಇಂಡಿಯಾ ಬುಕ್ ಆಫ್ ರೆಕಾರ್ಡ’ನಲ್ಲಿ ದಾಖಲಾಗಿದೆ.

ಮಂಡೇಮನೆ ಪ್ರದೀಪ ಹೆಗಡೆ ಮತ್ತು ಅನುರಾಧಾ ಹೆಗಡೆ ಅವರ ಮಗನಾದ 7.5 ವರ್ಷದ ನಿಶ್ಚಿತ ಹೆಗಡೆ ಸಾಧನೆ ಹೊಸ ದಾಖಲೆಯಾಗಿದೆ. 7 ನಿಮಿಷದ 58 ಸೆಕೆಂಡಿನಲ್ಲಿ ವಿವಿಧ ದೇಶಗಳ 77 ತುಣಕುಗಳನ್ನು ಆತ ಜೋಡಿಸಿ ಸಾಧನೆ ಮಾಡಿದ್ದಾನೆ.
S News ಡಿಜಿಟಲ್

Advertisement. Scroll to continue reading.

ಸೋಲು-ಗೆಲುವಿಗಿಂತ ಸ್ಪರ್ಧೆ ಮುಖ್ಯ

Advertisement. Scroll to continue reading.

ಯಲ್ಲಾಪುರ: `ಸೋಲು ಗೆಲುವುಗಳಿಗಿಂತ ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ಮುಖ್ಯ’ ಎಂದು ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ ತಾರಿಕೊಪ್ಪ ಹೇಳಿದರು.
ಅವರು ಶನಿವಾರ ಕಿರವತ್ತಿಯ ಕೆಪಿಎಸ್ ಮೈದಾನದಲ್ಲಿ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ನಡೆದ 14 ವರ್ಷದೊಳಗಿನ ಮಕ್ಕಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಮಾತನಾಡಿದರು.

`ಎಲ್ಲಾ ಸ್ಪರ್ಧೆಯಲ್ಲಿಯೂ ಸೋಲು-ಗೆಲುವು ಸಾಮಾನ್ಯ. ಸೋಲನ್ನು ಸವಾಲಾಗಿ ಸ್ವೀಕರಿಸಿ ಯಶಸ್ಸು ಸಾಧಿಸಬೇಕು’ ಎಂದು ಕರೆ ನೀಡಿದರು. ಮುಖ್ಯಾಧ್ಯಾಪಕ ಜನಾರ್ಧನ ಗಾಂವ್ಕಾರ, ಸಿ ಆರ್ ಪಿ’ಗಳಾದ ನಾಗರಾಜ ನಾಯ್ಕ, ವಿಶ್ವನಾಥ ಮರಾಠೆ , ಶ್ರೀನಿವಾಸ ಪ್ರಸಾದ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ ನಾಯಕ, ನೌಕರರ ಸಂಘದ ಸದಸ್ಯ ನಾರಾಯಣ ಕಾಂಬಳೆ, ಶಿಕ್ಷಕರಾದ ಸಂತೋಷ ನಾಯ್ಕ,ನಾಗರಾಜ ಡಿ ನಾಯ್ಕ ಭಾಗವಹಿಸಿದ್ದರು.

ಹೆಣ್ಣು ಮಕ್ಕಳ ವಿಭಾಗದಲ್ಲಿ ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಎಚ್ ಪಿ ಎಸ್ ಮಾದೇವಕೊಪ್ಪ, ಗಂಡು ಮಕ್ಕಳ ವಿಭಾಗದಲ್ಲಿ ಎಚ್ ಪಿ ಎಸ್ ಹುಣ ಶೆಟ್ಟಿ ಕೊಪ್ಪದ ಬಾಲಕರು ಪಡೆದರು.

S News ಡಿಜಿಟಲ್

 ಮಲೀನಗೊಂಡ ಕೋಟಿತೀರ್ಥ

ಕುಮಟಾ: ಶ್ರೀ ಕ್ಷೇತ್ರ ಗೋಕರ್ಣಕ್ಕೆ ಬರುವ ಭಕ್ತರ ಪುಣ್ಯಸ್ನಾನಕ್ಕೆ ಕೋಟಿತೀರ್ಥ ಅನುಕೂಲಕರ ರೀತಿಯಲ್ಲಿ ಇಲ್ಲ. ಕಾರಣ ಮೃತ ಹೆಸರಿನಲ್ಲಿ ನಡೆಯುವ ಕಾರ್ಯಗಳಿಗೆ ಬಳಕೆಯಾದ ಹೂ-ಬಾಳೆ ಎಲೆಗಳು ಈ ನೀರಿನಲ್ಲಿ ತೇಲುತ್ತಿವೆ.
ದೇವಾಲಯಗಳಿಗೆ ತೆರಳುವುದಕ್ಕೂ ಮುನ್ನ ಇಲ್ಲಿಯ ಕೋಟಿತೀರ್ಥಕ್ಕೆ ಭಕ್ತರು ಭೇಟಿ ನೀಡಿ ನೀರು ಪ್ರೋಕ್ಷಣೆ ಮಾಡಿಕೊಳ್ಳುವುದು ವಾಡಿಕೆ. ಅದರಂತೆ ಕೆಲವರು ಇಲ್ಲಿ ಸ್ನಾನವನ್ನು ಮಾಡುತ್ತಾರೆ. ಆದರೆ, ಮೃತ ಹೆಸರಿನಲ್ಲಿ ಬಿಡುವ ಬಾಳೆಎಲೆ ಹಾಗೂ ಹೂಗಳಿಂದ ಕೋಟಿತೀರ್ಥದ ಮಾಲಿನ್ಯ ಹೆಚ್ಚಾಗಿದೆ.

ಗೆಳೆಯರ ಬಳಗಕ್ಕೆ ಸವಾಲಿನ ಕೆಲಸ
6 ಎಕರೆ ಪ್ರದೇಶದಲ್ಲಿರುವ ಕೋಟಿತೀರ್ಥ ಸ್ವಚ್ಚತೆಗೆ ಇಲ್ಲಿನ ಪಟ್ಟೆ ಗಣಪತಿ ಗೆಳೆಯರ ಬಳಗ ಶ್ರಮಿಸುತ್ತಿದೆ. ಕಳೆದ ವಾರ ನೀರಿನ ಸ್ವಚ್ಚತೆಗಾಗಿ 1 ಲಕ್ಷ ಮೀನು ಮರಿಗಳನ್ನು ಈ ಬಳಗದವರು ಕೋಟಿತೀರ್ಥಕ್ಕೆ ಬಿಟ್ಟಿದ್ದಾರೆ. ಕೋಟಿತೀರ್ಥದಲ್ಲಿ ತ್ಯಾಜ್ಯ ಎಸೆಯದಂತೆ ನಾಮಫಲಕಗಳನ್ನು ಸಹ ಅಳವಡಿಸಲಾಗಿದೆ. ಆದರೂ, ಈ ನಿಯಮ ಪಾಲಿಸುವವರಿಲ್ಲ. ಜನ ಜಾಗೃತಿ ಜೊತೆ ಸ್ವಚ್ಚತೆಯನ್ನು ಕಾಪಾಡುವುದು ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಗೆಳೆಯವರ ಬಳಗಕ್ಕೆ ಸವಾಲಿನ ಸಂಗತಿಯಾಗಿದೆ.

S News ಡಿಜಿಟಲ್

ಇದನ್ನೂ ಓದಿ: https://srinews.in/uttharakannada-all-news/

ವೇದಿಕೆ ಒಂದು: ಕಾರ್ಯಕ್ರಮ ಎರಡು!

ಅಂಕೋಲಾ: ಸ್ವಾತಂತ್ರ್ಯೋತ್ಸವ ಸಂಭ್ರಮದ ನಿಮಿತ್ತ ಅಂಕೋಲಾ ಕನ್ನಡ ಸಾಹಿತ್ಯ ಪರಿಷತ್ ಘಟಕ ಹಾಗೂ ಸಾಹಿತಿಗಳ ಒಕ್ಕೂಟವಾದ ಮಿತ್ರಸಂಗಮದ ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ ದೇಶಭಕ್ತಿ ಗೀತೆಗಳ ಗಾಯನ ಸ್ಪರ್ಧೆ ಹಾಗೂ ಹಿರಿಯ ಸಾಹಿತಿಗಳೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ ನಡೆಯಿತು.

ಅಂಕೋಲೆಯ ಗ್ರಾಮೀಣ ಭಾಗದ ಬೇಳಾಬಂದರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಜರುಗಿದ ದೇಶಭಕ್ತಿ ಗೀತೆಯ ಸ್ಪರ್ಧೆಯಲ್ಲಿ ವಿಜೇತರಿಗೆ ನಗದು ಹಾಗೂ ಉಪಯುಕ್ತ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು. ಅನಂತರ ನಡೆದ ಸಾಹಿತಿಗಳೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಮೋಹನ ಹಬ್ಬು, ರಾಮಕೃಷ್ಣ ಗುಂದಿ, ನಾಗೇಂದ್ರ ತೊರ್ಕೆ, ಗೋಪಾಲಕೃಷ್ಣ ನಾಯಕ, ಮಹಾಂತೇಶ ರೇವಡಿ ಭಾಗವಹಿಸಿ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದರು.
ಅಂಕೋಲಾ ಕ.ಸಾ.ಪ ಘಟಕದ ಅಧ್ಯಕ್ಷರಾದ ಗೋಪಾಲಕೃಷ್ಣ ನಾಯಕ ಅಧ್ಯಕ್ಷತೆವಹಿಸಿದ್ದರು. ಸಾಹಿತಿಗಳಾದ ನಾಗೇಂದ್ರ ತೊರ್ಕೆ, ಮಹಾಂತೇಶ ರೇವಡಿ ಹಾಗೂ ನಿವೃತ್ತ ಮುಖ್ಯಾಧ್ಯಾಪಕ ಮಾದೇವ ಆಗೇರ ಮಾತನಾಡಿದರು. ಮುಖ್ಯಾಧ್ಯಾಪಕ ವಾಮನ ಆಗೇರ ಸ್ವಾಗತಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ರತ್ನಾಕರ ನಾಯ್ಕ ಉಪಸ್ಥಿತರಿದ್ದರು. ಶಿಕ್ಷಕಿ ಸುಮನಾ ನಾಯಕ ನಿರೂಪಿಸಿದರು. ಶಿಕ್ಷಕಿ ವಿನುತಾ ನಾಯಕ ವಂದಿಸಿದರು. ಸುವರ್ಣ ನಾಯಕ ಸಹಕರಿಸಿದರು.

S News ಡಿಜಿಟಲ್

ಅಡುಗೆ ಅನಿಲದ ಬಗ್ಗೆ ಇರಲಿ ಎಚ್ಚರ

ದಾಂಡೇಲಿ: ನಿರ್ಮಲ ನಗರದ ಅಂಗನವಾಡಿ ಕೇಂದ್ರದ ಆವರಣದಲ್ಲಿ ಶ್ರೀಯೋಗ್ ಇಂಡೇನ್ ಗ್ಯಾಸ್ ಏಜೆನ್ಸಿ’ಯಿಂದ ಸುರಕ್ಷಿತವಾಗಿ ಅಡುಗೆ ಅನಿಲ ಬಳಸುವ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಗರಸಭೆಯ ನಿಕಟಪೂರ್ವ ಉಪಾಧ್ಯಕ್ಷರಾದ ಸಂಜಯ ನಂದ್ಯಾಳ್ಕರ್ `ಅಡುಗೆ ಅನಿಲ ಬಳಕೆ ಮಾಡುವ ಗ್ರಾಹಕರು ಅದರ ಸುರಕ್ಷತೆಯ ಬಗ್ಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಅಡುಗೆ ಅನಿಲ ಇದರ ಬಳಕೆ ಮತ್ತು ನಿರ್ವಹಣೆಯ ಬಗ್ಗೆ ಪ್ರತಿಯೊಬ್ಬರಲ್ಲಿಯೂ ಜಾಗೃತಿ ಇರಬೇಕು’ ಎಂದರು.
ಶ್ರೀಯೋಗ್ ಇಂಡೇನ್ ಗ್ಯಾಸ್ ಏಜೆನ್ಸಿಯ ಮುಖ್ಯಸ್ಥರಾದ ಕೀರ್ತಿ ಅರುಣಾದ್ರಿ ರಾವ್ ಅವರು ಸುರಕ್ಷಿತವಾಗಿ ಅಡುಗೆ ಅನಿಲ ಬಳಸುವ ಬಗ್ಗೆ ಮಾಹಿತಿ ನೀಡಿದರು. `ಗ್ಯಾಸ್ ಪೆಟ್ರೋಲ್‌ಗಿಂತಲೂ ಹೆಚ್ಚು ದಹನಾ ಶಕ್ತಿ ಹೊಂದಿದ್ದು, ಬಳಕೆದಾರರು ಸುರಕ್ಷತೆಯ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು’ ಎಂದರು.

ಶ್ರೀಯೋಗ್ ಇಂಡೇನ್ ಗ್ಯಾಸ್ ಏಜೆನ್ಸಿಯ ಪ್ರಧಾನ ವ್ಯವಸ್ಥಾಪಕರಾದ ಸುಯೋಗ್ ಅರುಣಾದ್ರಿ ರಾವ್ ಹಾಗೂ ಸಿಬ್ಬಂದಿಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿತೆ ನೀಡಿದರು.

S News ಡಿಜಿಟಲ್

ಉಚಿತ ಮೂತ್ರ ರೋಗ ತಪಾಸಣಾ ಶಿಬಿರ ಯಶಸ್ವಿ

ಶಿರಸಿ: ನಗರದ ಚರ್ಚ್ ರಸ್ತೆಯ ಅಕ್ಷಯ ಆರ್ಕೆಡ್‌ನಲ್ಲಿರುವ ಸಿಂಗದಿನಿ ಹೆಲ್ತ್ ಕೇರ್ ಸೆಂಟರಿನಲ್ಲಿ ಮುಂಗಾರಿನ ಅಂಗವಾಗಿ ಉಚಿತ ಮೂತ್ರ ರೋಗ ತಪಾಸಣಾ ಶಿಬಿರ ನಡೆಯಿತು.

ಉಚಿತ ಶಿಬಿರದಲ್ಲಿ 135ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಡಾ.ರೋಹಿತ್ ಆರ್ ಹೆಗಡೆ ಮತ್ತು ಡಾ.ಮಧುಮಿತ ಎನ್.ಎಸ್. ಅವರು ಶಿಬಿರಾರ್ಥಿಗಳಿಗೆ ಸಮರ್ಪಕವಾದ ಸುಶ್ರೂಷೆ ಹಾಗೂ ತಪಾಸಣೆ ಮಾರ್ಗದರ್ಶನ ನೀಡಿದರು. ಕಿಡ್ನಿಕಲ್ಲು, ಹರ್ನಿಯಾ, ಗಂಡಸರ ಬಂಜೆತನ, ಕಿಡ್ನಿ ಕ್ಯಾನ್ಸರ್, ಮೂತ್ರಪಿಂಡ ರೋಗ, ಮುಂತಾದ ರೋಗಗಳ ಕುರಿತು ಮಹಿಳೆಯರು ಮತ್ತು ಪುರುಷ ರೋಗಿಗಳು ಪ್ರಯೋಜನ ಪಡೆದರು.

S News ಡಿಜಿಟಲ್

ಮನುವಿಕಾಸದಿಂದ ಮಾನವೀಯ ಕೆಲಸ

ಶಿರಸಿ: ನಗರದ ಪತ್ರಿಕಾ ಭವನದಲ್ಲಿ ಶನಿವಾರ ಅತಿವೃಷ್ಠಿಯಿಂದ ಹಾನಿಗೊಳಗಾದ ಫಲಾನುಭವಿಗಳಿಗೆ ಮನು ವಿಕಾಸ ಸಂಸ್ಥೆಯವರು ನೆರೆ ಪರಿಹಾರದ ಕಿಟ್ ವಿತರಿಸಿದರು.

ಕಿಟ್ ವಿತರಣಾ ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷರಾದ ಶರ್ಮಿಳಾ ಮಾದನಗೇರಿ, ಉಪಾದ್ಯಕ್ಷ ರಮಾಕಾಂತ ಭಟ್ ಹಾಗೂ ಮನು ವಿಕಾಸ ಸಂಸ್ಥೆಯ ಗಣಪತಿ ಭಟ್ಟ ಇದ್ದರು. ಹಿರಿಯ ಪತ್ರಕರ್ತ ಸುಬ್ರಾಯ ಭಟ್ ಬಕ್ಕಳ ಕಿಟ್ ವಿತರಣೆ ಮಾಡಿದರು.

S News ಡಿಜಿಟಲ್

Previous Post

Uttara kannada news | ಸಮಗ್ರ ಸುದ್ದಿಗಳ ಸಂಕ್ಷಿಪ್ತ ನೋಟ

Next Post

ತಂಬಾಕು ತ್ಯಜಿಸಿದ ಶಾಸಕ!

Next Post

ತಂಬಾಕು ತ್ಯಜಿಸಿದ ಶಾಸಕ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ