ಭಟ್ಕಳದಲ್ಲಿ ಚಾತುರ್ಮಾಸ್ಯ ವೃತಾಚರಣೆಯಲ್ಲಿರುವ ಧರ್ಮಸ್ಥಳದ ಕನ್ಯಾಡಿ ಶ್ರೀರಾಮ ಕ್ಷೇತ್ರ ಸಂಸ್ಥಾನದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರನ್ನು ಭೇಟಿಯಾದ RSS ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟರು ಮಂತ್ರಾಕ್ಷತೆ ಪಡೆದರು.
ಈ ವೇಳೆ ಗುರುಗಳು ಭಟ್ಟರಿಗೆ ಶಾಲು ಹೊದೆಸಿ ಗೌರವಿಸಿದರು. ಸ್ವಾಮೀಜಿಯವರ ದರ್ಶನಕ್ಕೆ ದಿನದಿಂದ ದಿನಕ್ಕೆ ಕರಾವಳಿಯ ಭಾಗದಿಂದ ಸಾಕಷ್ಟು ಜನ ಬರುತ್ತಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯಿಂದ ಅವರ ಅಪಾರ ಶಿಷ್ಯರು ಆಗಮಿಸುತ್ತಿದ್ದಾರೆ. ಈ ವ್ರತಾಚಾರಣೆ ಕಾರ್ಯ ಕ್ರಮ ಆಗಸ್ಟ್ 30ರವರಿಗೆ ನಡೆಯಲಿದೆ.