6
  • Latest

ಕಾಲೇಜಿಗೆ ತೆರಳಿದ ನ್ಯಾಯಾಧೀಶ: ಮೂಲಭೂತ ಹಕ್ಕುಗಳ ಬಗ್ಗೆ ಪಾಠ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕಾಲೇಜಿಗೆ ತೆರಳಿದ ನ್ಯಾಯಾಧೀಶ: ಮೂಲಭೂತ ಹಕ್ಕುಗಳ ಬಗ್ಗೆ ಪಾಠ

AchyutKumar by AchyutKumar
in ಸ್ಥಳೀಯ

ಸಿದ್ದಾಪುರ: `ಮೂಲಭೂತ ಹಕ್ಕುಗಳು ಮತ್ತು ಮೂಲಭೂತ ಕರ್ತವ್ಯಗಳು ಸಂವಿಧಾನದ ಆತ್ಮಕ್ಕೆ ಸಮನಾಗಿದ್ದು, ಈ ಹಕ್ಕುಗಳು ಮಾನವನ ಘನತೆ ಮತ್ತು ಗೌರವವನ್ನು ಹೆಚ್ಚಿಸುತ್ತದೆ’ ಎಂದು ಸಿದ್ದಾಪುರ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಭರತಚಂದ್ರ ಕೆ.ಎಸ್. ಹೇಳಿದರು.

ADVERTISEMENT

ಕೋಲಸಿರ್ಸಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಮೂಲಭೂತ ಹಕ್ಕುಗಳು ಮತ್ತು ಮೂಲಭೂತ ಕರ್ತವ್ಯಗಳ ಕುರಿತು ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಮೂಲಭೂತ ಕರ್ತವ್ಯಗಳನ್ನು ಪಾಲಿಸುವುದು ಭಾರತದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ’ ಎಂದರು. ಕಾಲೇಜಿನ ಪ್ರಾಚಾರ್ಯ ಪ್ರಶಾಂತ ತಾರಿಬಾಗಿಲ ಅಧ್ಯಕ್ಷತೆವಹಿಸಿದ್ದರು. ತಾಲೂಕು ವಕೀಲರ ಸಂಘದ ಸಹಕಾರ್ಯದರ್ಶಿ ರವಿಕುಮಾರ ನಾಯ್ಕ ಉಪಸ್ಥಿತರಿದ್ದರು.

Advertisement. Scroll to continue reading.

ನ್ಯಾಯವಾದಿ ರೇಖಾ ಎಂ.ಹರವಿ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತು ಹಾಗೂ ಪಿಎಸ್‌ಐ ಸಂಗೀತಾ ಕಾನಡೆ ಮಾನವ ಕಳ್ಳಸಾಗಣೆ ಕುರಿತು ಉಪನ್ಯಾಸ ನೀಡಿದರು. ಉಪನ್ಯಾಸಕ ಮಂಜಪ್ಪ ಎಂ.ಜಿ.ಸ್ವಾಗತಿಸಿದರು. ಉಪನ್ಯಾಸಕ ಗೋಪಾಲ ಕಾನಳ್ಳಿ ಕಾರ್ಯಕ್ರಮ ನಿರ್ವಹಿಸಿದರು.

Advertisement. Scroll to continue reading.

S News Digitel

ಹುಲೆಕಲ್ ಮಕ್ಕಳ ಕ್ರೀಡಾ ಸಾಧನೆ

ಶಿರಸಿ: ಎಂ. ಇ. ಎಸ್ ಚೈತನ್ಯ ಪಿಯು ಕಾಲೇಜು ಆಯೋಜಿಸಿದ್ದ ತಾಲೂಕಾ ಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಭಾಗವಹಿಸಿದ ಹುಲೇಕಲ್ ಪಿಯು ಕಾಲೇಜು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಸಾಧನೆ ಮಾಡಿದ್ದಾರೆ.
ಅಮೃತಾ ಗೌಡ 100ಮೀ ಹರ್ಡಲ್ಸ್ ಪ್ರಥಮ, 400 ಮೀ ಹರ್ಡಲ್ಸ್ ಪ್ರಥಮ, ತ್ರಿವಿಧ ಜಿಗಿತ ತೃತೀಯ, ರೋಹಿಣಿ ದೇವಾಡಿಗ ನಡಿಗೆ ಪ್ರಥಮ, ಆಶಾ ಜಿ. ಪೂಜಾರಿ 800ಮೀ ತೃತೀಯ, ಆಶಾ ಚಲವಾದಿ, ಎತ್ತರ ಜಿಗಿತ ದ್ವಿತೀಯ, ಆದಿತ್ಯ ನಾಯ್ಕ 400ಮೀ ಹರ್ಡಲ್ಸ್ ದ್ವಿತೀಯ, ಉದ್ದಜಿಗಿತ ತೃತೀಯ, ಪ್ರವೀಣ ಮರಾಠಿ ಗುಡ್ಡಗಾಡು ಓಟ ಪ್ರಥಮ, 100ಮೀ ತೃತೀಯ, ತಿಲಕ್ ನಾಯ್ಕ ನಡಿಗೆ ತೃತೀಯ, ನವೀನ ಗೌಡ ಎತ್ತರ ಜಿಗಿತ ತೃತೀಯ ಬಹುಮಾನ ಪಡೆದಿದ್ದಾರೆ.
ಸಮರ್ಥ ಪೂಜಾರಿ ಚಕ್ರಎಸೆತ ತೃತೀಯ, ಮಹೇಶ ಗೌಡ ಗುಡ್ಡಗಾಡು ಓಟ ಪ್ರಥಮ, 3000ಮೀ ದ್ವಿತೀಯ ಧನುಷ್ ಹೆಗಡೆ ನಡಿಗೆ ದ್ವಿತೀಯ, ಬಾಲಕರ 4*400ಮೀ ರಿಲೇ ಪ್ರಥಮ ಸ್ಥಾನ ಮತ್ತು ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಈ ಎಲ್ಲಾ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

S News Digitel

ಗಣೇಶ ಹಬ್ಬ ಹಾಗೂ ಈದ್ ಮಿಲಾದ್: ನಾವೇನು ಮಾಡಬೇಕು?

 

ಯಲ್ಲಾಪುರ: `ಯಾವುದೇ ಹಬ್ಬದ ಆಚರಣೆ ಇದ್ದರೂ ಅದು ಯಾರಿಗೂ ತೊಂದರೆ ಆಗದಂತಿರಬೇಕು. ಜನರ ಭಾವನೆಗಳನ್ನು ಪ್ರತಿಯೊಬ್ಬರು ಗೌರವಿಸಬೇಕು’ ಎಂದು ತಹಶೀಲ್ದಾರ್ ಅಶೋಕ ಭಟ್ಟ ಕರೆ ನೀಡಿದರು.
ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು `ಎಲ್ಲರೂ ಸೇರಿ ಶಾಂತಿ-ಸುವ್ಯವಸ್ಥೆಯಿAದ ಹಬ್ಬಗಳನ್ನು ಆಚರಿಸಬೇಕು. ಸರ್ಕಾರದ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಯಾವುದೇ ಆಡಂಬರಕ್ಕೆ ಅವಕಾಶ ಕೊಡಬಾರದು’ ಎಂದು ತಿಳಿಸಿದರು.

ಸಿಪಿಐ ರಮೇಶ ಹಾನಾಪುರ ಮಾತನಾಡಿ `ಹಬ್ಬ ಹಬ್ಬದ ರೀತಿ ಇರಬೇಕು. ಯಾರೂ ಕಾನೂನು ಉಲ್ಲಂಘಿಸಬಾರದು. ಸಾರ್ವಜನಿಕರ ಸಹಕಾರವಿಲ್ಲದೇ ಅಧಿಕಾರಿಗಳು ಕೆಲಸ ಮಾಡಲು ಆಗುವುದಿಲ್ಲ. ಹೀಗಾಗಿ ಎಲ್ಲಿಯೂ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸುವುದು ಮುಖ್ಯ’ ಎಂದರು.

ಪ ಪಂ ಮುಖ್ಯಾಧಿಕಾರಿ ಸುನೀಲ ಗಾವಡೆ ಪಟ್ಟಣ ಪಂಚಾಯತ ಅನುಮತಿಗಳ ಬಗ್ಗೆ ಹಾಗೂ ಹೆಸ್ಕಾಂ ಎಇಇ ರಮಾಕಾಂತ ಹೆಸ್ಕಾಂ ಅನುಮತಿಗಳ ಬಗ್ಗೆ ತಿಳಿಸಿದರು. ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

S News Digitel

ಮ್ಯಾರಥಾನ್ ಓಟ: ಯಾರು ಮೊದಲು.. ಯಾರು ಕೊನೆ?

ಕಾರವಾರ: 17ರಿಂದ 25 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ 5 ಕಿ.ಮೀ ಮ್ಯಾರಥಾನ ರೆಡ್ ರಿಬ್ಬನ್ ಓಟದ ಸ್ಪರ್ಧೆಗೆ ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ ಹರ್ಷ ವೆಂಕಟೇಶ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ನಂತರ ಮಾತನಾಡಿದ ಅವರು `ಏಡ್ಸ್ ಕುರಿತು ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಮ್ಯಾರಥಾನ ಸ್ಪರ್ಧೆಯಂತಹ ಹಲವಾರು ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದರು.
ಈ ಸ್ಪರ್ಧೆಯಲ್ಲಿ ಹುಡುಗರ ವಿಭಾಗದಲ್ಲಿ ಸಿದ್ದಾಪುರದ ಪ್ರಥಮ ದರ್ಜೆ ಕಾಲೇಜಿನ ಪ್ರಜ್ವಲ್.ಸಿ.ನಾಯ್ಕ ಪ್ರಥಮ ಸ್ಥಾನವನ್ನು, ಕಾರವಾರದ ಶಿವಾಜಿ ಕಾಲೇಜ ಬಾಡ ವಿದ್ಯಾರ್ಥಿ ಜೋಸೆಫ್ ಎಲ್ ಸಿದ್ಧಿ ದ್ವಿತೀಯ ಸ್ಥಾನ, ಅಂಕೋಲಾದ ಸರಕಾರಿ ಪದವಿ ಕಾಲೇಜಿನ ಮನೀಶ ಎಚ್ ನಾಯಕ್ ತೃತೀಯ ಸ್ಥಾನ ಪಡೆದುಕೊಂಡರು. ಸಮಾದಾನಕರ ಬಹುಮಾನವನ್ನು ಕಾರ್ತಿಕ ಸಂತೋಶ ನಾಯ್ಕ, ವಿನಾಯಕ ನಾಯ್ಕ, ಗುರುನಾಥ ಎಸ್, ಪ್ರಜ್ವಲ್ ಆರ್.ಡಿ ಪಡೆದು ಕೊಂಡರು.
ಹುಡುಗಿಯರ ವಿಭಾಗದಲ್ಲಿ ಶಿರಸಿಯ ಪ್ರಥಮ ದರ್ಜೆ ಕಾಲೇಜಿನ ಪೂಜಾ ಪಿ ನಾಯ್ಕ ಪ್ರಥಮ ಸ್ಥಾನವನ್ನು, ಕಾರವಾರದ ಮಹಾಸತಿ ಕಾಲೇಜಿನ ವಿದ್ಯಾರ್ಥಿ ಆರ್.ವಾಯ್ ನಮೀತಾ ದ್ವಿತೀಯ ಸ್ಥಾನ, ತೃತೀಯ ಸ್ಥಾನವನ್ನು ಬಿಂದು ಎಸ್ ಹಿರೇಮಠ ರವರು ಪಡೆದುಕೊಂಡರು. ಸಮಾಧಾನಕರ ಬಹುಮಾನವನ್ನು ಪೂರ್ವಿ ಹರಿಕಂತ್ರ, ಚಂದ್ರಿಕಾ ಸುಧಾಕರ ಗೌಡ, ಸಿಂಧೂ ಸಿ ಹುಲಸ್ವಾರ, ಪುಷ್ಪಾ ಮೊಗೇರ ಪಡೆದರು.

S News Digitel

ವನವಾಸಿ ಕಲ್ಯಾಣದಿಂದ ರಕ್ಷಾ ಹಬ್ಬ

ಯಲ್ಲಾಪುರ: `ರಕ್ಷೆ ಎಂಬ ದಾರದ ಗುಚ್ಚದ ರಕ್ಷಣೆಯ ಮೂಲಕ ಸಹೋದರತ್ವದ ಭಾವನೆಯನ್ನು ಬಿತ್ತುವ ಕಾರ್ಯವನ್ನು ಪಾಲಕರು ಮಾಡಬೇಕು’ ಎಂದು ಸಾಹಿತಿ, ಶಿಕ್ಷಕಿ ಶಿವಲೀಲಾ ಹುಣಸಗಿ ಹೇಳಿದರು.

ಪಟ್ಟಣದ ಕಾಳಮ್ಮನಗರದ ಕಾಳಮ್ಮಾ ದೇವಸ್ಥಾನದಲ್ಲಿ ವನವಾಸಿ ಕಲ್ಯಾಣ ಆಯೋಜಿಸಿದ್ದ ರಕ್ಷಾಭಂಧನ ಉತ್ಸವ ಹಾಗೂ ಅರಿಶಿಣ ಕುಂಕುಮ ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ಅವರು ಮಾತನಾಡಿದರು.

`ಕಟ್ಟಿದ ರಕ್ಷೆಯನ್ನು ಕಿತ್ತು ಬಿಸಾಡಬಹುದು. ಆದರೆ ರಕ್ಷಾ ಬಂಧನದ ಹಿಂದಿನ ಭಾವನಾತ್ಮಕ ಸಂಬAಧವನ್ನು ಕಿತ್ತು ಬಿಸಾಡಲು ಸಾಧ್ಯವಿಲ್ಲ. ರಕ್ಷೆಯನ್ನು ಕಟ್ಟುವ ಮೂಲಕ ಪರಸ್ಪರ ನಂಬಿಕೆಯಿoದ ಪ್ರತಿಯೊಬ್ಬರನ್ನು ರಕ್ಷಣೆ ಮಾಡುವ ಸಹೋದರತ್ವದ ಮನೋಭಾವವನ್ನು ಮೂಡಿಸಿಕೊಳ್ಳೋಣ’ ಎಂದರು.

ಅಧ್ಯಕ್ಷತೆ ವಹಿಸಿದ್ದ ವನವಾಸಿ ಕಲ್ಯಾಣದ ಜಿಲ್ಲಾ ಮಹಿಳಾ ಸಮಿತಿ ಸದಸ್ಯೆ ಡಾ. ಸುಚೇತಾ ಮದ್ಗುಣಿ ಮಾತನಾಡಿ `ಪರಸ್ಪರ ರಕೆಯನ್ನು ಕಟ್ಟಿಕೊಳ್ಳುವ ಮೂಲಕ ಸನಾತನ ಧರ್ಮದ, ಸಮಾಜದ, ದೇಶದ ರಕ್ಷಣೆಗೆ ಕಟಿಭದ್ಧರಾಗೋಣ’ ಎಂದರು. ಮಾತೃಮಂಡಳಿಯ ಮಹಾದೇವಿ ಭಟ್ಟ ಮಾತನಾಡಿ `ವನವಾಸಿ ಕಲ್ಯಾಣ ಆರಂಭದ ಮೂಲಕ ಬುಡಕಟ್ಟು ಮಕ್ಕಳ ಪ್ರತಿಭೆ ಹೊರಹಾಕುವ ಕಾರ್ಯಕ್ಕೆ ನಾಂದೊ ಹಾಡಿದ ಬಾಳಾ ಸಾಹೇಬ ದೇಶಪಾಂಡೆ ಅಭಿದನಾರ್ಹರು’ ಎಂದರು.

ಗೀತಾ ಜ್ಞಾನ ಯಜ್ಞ ಸಮೀತಿಯವರಿಂದ ಭಗವದ್ಗೀತಾ ಪಠಣ ನಡೆಯಿತು. ವನವಾಸಿ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು, ಉಮಾ ಯಲ್ಲಾಪುರಕರ್ ಸ್ವಾಗತಿಸಿದರು, ವನವಾಸಿ ಪ್ರಾಂತ ಮಹಿಳಾ ಪ್ರಮುಖೆ ಗೌರಿ ಭಟ್ಟ ಪ್ರಾಸ್ತಾವಿಕ ಮಾತನ್ನಾಡಿದರು. ಶ್ರೀನಿಧಿ ಮೊರಸ್ಕರ್ ನಿರೂಪಿಸಿದರು, ಸುಮಂಗಲಾ ಸಿದ್ದಿ ಸಹಕರಿಸಿದರು. ವೀಣಾ ಯಲ್ಲಾಪುರಕರ್ ವಂದಿಸಿದರು.

S News Digitel

Previous Post

ಜನರು ಇಲ್ಲ.. ಜನ ಪ್ರತಿನಿಧಿಗಳು ಭಾಗವಹಿಸಿಲ್ಲ.. ಕಾಟಾಚಾರಕ್ಕೆ ನಡೆದ ಜಮಾಬಂಧಿ!

Next Post

19ನೇ ವರ್ಷಕ್ಕೆ ಕಳ್ಳ ಎಂಬ ಬಿರುದು: ಬ್ಯಾಟರಿ ಕದಿಯೋದೇ ಅವರ ಕಾಯಕ!

Next Post

19ನೇ ವರ್ಷಕ್ಕೆ ಕಳ್ಳ ಎಂಬ ಬಿರುದು: ಬ್ಯಾಟರಿ ಕದಿಯೋದೇ ಅವರ ಕಾಯಕ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ