6
  • Latest
Cow Milk Cow problems Solution

ನಾಟಿ ನಂಟು: ಹಸುಗಳನ್ನು ಕಾಡುವ ಕೆಚ್ಚಲುಬಾವು: ಎರಡು ತೆಂಗಿನಕಾಯಿಯಲ್ಲಿದೆ ಶಾಶ್ವತ ಪರಿಹಾರ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ನಾಟಿ ನಂಟು: ಹಸುಗಳನ್ನು ಕಾಡುವ ಕೆಚ್ಚಲುಬಾವು: ಎರಡು ತೆಂಗಿನಕಾಯಿಯಲ್ಲಿದೆ ಶಾಶ್ವತ ಪರಿಹಾರ!

AchyutKumar by AchyutKumar
August 29, 2024
in ಲೇಖನ
Cow Milk Cow problems Solution
advt advt advt
ADVERTISEMENT

ಜಾನುವಾರು ಸಾಕುವವರಿಗೆ ಹಸುಗಳಲ್ಲಿನ ಕೆಚ್ಚಲು ಬಾಹು ಅತಿದೊಡ್ಡ ಸಮಸ್ಯೆ. ಎಲ್ಲಾ ಋತುಗಳ ಪ್ರಾರಂಭದಲ್ಲಿಯೂ ಕಾಣಿಸಿಕೊಳ್ಳುವ ಕೆಚ್ಚಲುಬಾವು ನಂಜು ಹಸುಗಳು, ಎಮ್ಮೆಗಳನ್ನು ಬಾಧಿಸುತ್ತವೆ. ಇಂತಹ ಕೆಚ್ಚಲು ಬಾವಿಗೆ ಪರಿಣಾಮಕಾರಿಯಾಗಿ ಔಷಧಿ ಕೊಡುವವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಸುಬ್ಬಣ್ಣ. ಅವರು ಎರಡು ತೆಂಗಿನಕಾಯಿಗಳನ್ನು ಮಾತ್ರ ಕಾಣಿಕೆಯಾಗಿ ಪಡೆದು ನಾಟಿ ಔಷಧಿ ಮೂಲಕ ಕೆಚ್ಚಲು ಬಾವನ್ನು ಸಂಪೂರ್ಣವಾಗಿ ಗುಣಪಡಿಸುತ್ತಾರೆ.

ಏನಿದು ಕೆಚ್ಚಲು ಬಾವು ?
ವಾತಾವರಣದ ವೈಪರಿತ್ಯ ಹಾಗೂ ಆಹಾರದ ಬದಲಾವಣೆಯಿಂದಾಗಿ ಸಾಮಾನ್ಯವಾಗಿ ಕೆಚ್ಚಲುಬಾವು ಉಂಟಾಗುತ್ತದೆ. ಬ್ಯಾಕ್ಟೀರಿಯಾದ ಸೋಂಕಿನಿoದಲೂ ಇದು ಉಂಟಾಗುತ್ತದೆ. ಹಾಲು ನೀಡುವ ರಾಸುಗಳ ಕೆಚ್ಚಲಿನಲ್ಲಿ ಬಾವು ಉಂಟಾಗುತ್ತದೆ. ಒಂದೆರಡು ದಿನಗಳಲ್ಲಿಯೇ ಇದು ಗಡ್ಡೆಗಟ್ಟುತ್ತದೆ. ತೀರಾ ವಿಳಂಬ ಮಾಡಿದರೆ ಕೆಲವೊಮ್ಮೆ ಕೆಚ್ಚಲುಗಳು ಕೆಂಪು ಬಣ್ಣಕ್ಕೆ ತಿರುಗುವುದೂ ಇದೆ. ಸಾಮಾನ್ಯವಾಗಿ ಕೆಚ್ಚಲು ಬಾವಿಗೆ ಪರಿಣಾಮಕಾರಿಯಾಗಿ ಮದ್ದು ಮಾಡದೇ ಇದ್ದಲ್ಲಿ ರಾಸುಗಳು ಹಾಲು ಕೊಡುವುದನ್ನೇ ನಿಲ್ಲಿಸಬಹುದು.

Advertisement. Scroll to continue reading.
ADVERTISEMENT
ADVERTISEMENT

ಇಂಥ ಕೆಚ್ಚಲುಬಾವಿಗೆ ಆಂಗ್ಲ ವೈದ್ಯ ಪದ್ಧತಿಯಲ್ಲಿ ಕೆಲವು ಮಾತ್ರೆಗಳೂ ಇವೆ. ಪಶುವೈದ್ಯರು ಮೊಲೆಗಳ ರಂಧ್ರಕ್ಕೆ ಟ್ಯೂಬನ್ನು ಏರಿಸಿ ಕೆಚ್ಚಲು ಬಾವಿನಿಂದ ಹಾಲು ನಿಲ್ಲುವ ಸಮಸ್ಯೆಗೆ ಪರಿಹಾರ ಮಾಡುತ್ತಾರೆ. ಆದರೆ ಈ ಪದ್ಧತಿ ಕೂಡ ಪರಿಣಾಮಕಾರಿಯಲ್ಲ ಎನ್ನುವ ಭಾವನೆಗಳಿವೆ. ಅಲ್ಲದೇ ಟ್ಯೂಬ್ ಏರಿಸಿದ ನಂತರದಲ್ಲಿ ರಾಸುಗಳ ಕೆಚ್ಚಲಿನಿಂದ ಹಾಲು ಸುರಿಯುವುದು ನಿಲ್ಲುವುದೇ ಇಲ್ಲ ಎಂದೋ ಅಥವಾ ಮೊಲೆಗಳ ರಂಧ್ರ ದೊಡ್ಡದಾಗಿ ಸಮಸ್ಯೆಗಳು ಉಂಟಾದ ಸಂದರ್ಭಗಳಿವೆ.

ಹೋಮಿಯೋಪತಿ ವೈದ್ಯಪದ್ಧತಿಯಲ್ಲಿಯೂ ಕೂಡ ಕೆಚ್ಚಲುಬಾವಿಗೆ ಔಷಧ ಇದೆಯಾದರೂ ಕೆಚ್ಚಲಿನಲ್ಲಿ ಉಂಟಾಗಿರುವ ಗಡ್ಡೆಗಳು ಕರಗುವುದೇ ಇಲ್ಲ ಎನ್ನುವ ದೂರುಗಳಿವೆ. ಕೆಚ್ಚಲು ಬಾವಿಗೆ ಇತ್ತೀಚಿನ ದಿನಗಳಲ್ಲಿ ಔಷಧಿ ಕಂಡು ಹಿಡಿಯುವ ಪ್ರಯತ್ನಗಳು ನಡೆಯುತ್ತಿವೆಯಾದರೂ ಸಂಪೂರ್ಣವಾಗಿ ಅವು ಫಲಪ್ರದವಾಗಿಲ್ಲ.

Advertisement. Scroll to continue reading.

ಪರಿಣಾಮಕಾರಿ ಔಷಧಿ ನೀಡುವ ಸುಬ್ಬಣ್ಣ
ಸಿದ್ದಾಪುರ ತಾಲೂಕಿನ ಕಾನಸೂರು ಬಳಿಯ ದಂಟಕಲ್ಲಿನ ಸುಬ್ರಾಯ ಹೆಗಡೆ ಅವರು ಕೆಚ್ಚಲು ಬಾವಿಗೆ ಪರಿಣಾಮಕಾರಿಯಾದ ಔಷಧಿಯನ್ನು ನೀಡುತ್ತಾರೆ. ನಾಟಿ ಪದ್ಧತಿಯ ಮೂಲಕ ಔಷಧಿಯನ್ನು ನೀಡುವ ಇವರು ಅದಕ್ಕೆ ಪ್ರತಿಯಾಗಿ ಎರಡು ತೆಂಗಿನಕಾಯಿಗಳನ್ನು ಮಾತ್ರ ಪಡೆಯುತ್ತಾರೆ. ಸಹಸ್ರ ಸಂಖ್ಯೆಯ ಜನರು ಬಂದು ತಮ್ಮ ಮನೆಯ ರಾಸುಗಳಿಗೆ ಔಷಧಿ ತೆಗೆದುಕೊಂಡು ಹೋಗಿದ್ದಾರೆ. ಕೆಚ್ಚಲು ಬಾವು ಸಮಸ್ಯೆ ಪರಿಹಾರಕ್ಕಾಗಿ ಸಾವಿರ ರೂಪಾಯಿಗಳನ್ನು ಖರ್ಚು ಮಾಡಿದವರೂ ಕೂಡ ದಂಟಕಲ್ಲಿಗೆ ಆಗಮಿಸಿ ಔಷಧಿ ಪಡೆದು ಹೋಗಿದ್ದಾರೆ. ಎಲ್ಲ ವೈದ್ಯ ಪದ್ಧತಿ ಪ್ರಯೋಗ ಮಾಡಿಯೂ, ಇನ್ನೇನೂ ಸಾಧ್ಯವಿಲ್ಲ ಎನ್ನುವಂತವರು ಕೂಡ ಬಂದು ಔಷಧಿ ಪಡೆದು ಹೋಗಿದ್ದಾರೆ.

ಶಿರಸಿ, ಸಿದ್ದಾಪುರ, ಯಲ್ಲಾಪುರ, ಸಾಗರ ಈ ಮುಂತಾದ ತಾಲೂಕುಗಳ ಜನರು ಇಂದಿಗೂ ಸುಬ್ರಾಯ ಹೆಗಡೆಯವರ ಬಳಿ ಬರುತ್ತಾರೆ. ಶಿರಸಿ, ಸಿದ್ದಾಪುರ ಸೇರಿದಂತೆ ಕೆಲವು ಕಡೆಗಳ ಪಶು ವೈದ್ಯರೂ ಕೂಡ ಸುಬ್ರಾಯ ಹೆಗಡೆ ಅವರು ನೀಡುವ ಔಷಧಿಯ ಕುರಿತು ಪಶುಪಾಲಕರಿಗೆ ತಿಳಿಹೇಳಿ ಔಷಧಿಗಾಗಿ ಕಳುಹಿಸಿದ ನಿದರ್ಶನಗಳಿವೆ. ಇತ್ತೀಚೆಗಷ್ಟೇ ಹೆಸರಾಂತ ವೈದ್ಯರೋರ್ವರು ಔಷಧಿಯ ಬಗ್ಗೆ ಕೇಳಿ, ದಂಟಕಲ್ಲಿಗೆ ಆಗಮಿಸಿ, ವನಸ್ಪತಿ ಸೊಪ್ಪುಗಳನ್ನು ಪಡೆದು, ಅಧ್ಯಯನಕ್ಕಾಗಿ ತೆರಳಿದ್ದಾರೆ.

ಅವರು ನೀಡುವ ನಾಟಿ ವೈದ್ಯಕೀಯದಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಹಾಲೂ ಕೂಡ ಅಲ್ಪ ಪ್ರಮಾಣದಲ್ಲಿ ಹೆಚ್ಚುತ್ತದೆ. ಕೆಚ್ಚಲು ಬಾವಿನ ಗಡ್ಡೆಗಳು ಸಂಪೂರ್ಣ ಕರಗುವುದರ ಜೊತೆಗೆ ಮೊಲೆಗಳು ಹಾಳಾಗುವುದಿಲ್ಲ ಎನ್ನುವುದು ಔಷಧಿ ಬಳಕೆ ಮಾಡಿದವರ ಅಂಬೋಣ.
ಸುಬ್ರಾಯ ಹೆಗಡೆಯವರನ್ನು 08389-295430, 9880190642 ಈ ದೂರವಾಣಿಯ ಮೂಲಕ ಸಂಪರ್ಕಿಸಬಹುದು.

ShareSendTweetShare
ADVERTISEMENT
Previous Post

ದೇಹವೇ ದೇವಾಲಯ: ಕಣ ಕಣದಲ್ಲಿಯೂ ಶಿವ!

Next Post

ಸೂಕ್ತ ಚಿಕಿತ್ಸೆ-ಕಡ್ಡಾಯ ಲಸಿಕೆ: ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಗೆ ಸೂಚನೆ

Next Post

ಸೂಕ್ತ ಚಿಕಿತ್ಸೆ-ಕಡ್ಡಾಯ ಲಸಿಕೆ: ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಗೆ ಸೂಚನೆ

the ac office job promising

ಉದ್ಯೋಗವೂ ಇಲ್ಲ.. ಪರಿಹಾರವೂ ಸಿಕ್ಕಿಲ್ಲ.. ಅವರು ನೀಡಿದ ಭರವಸೆಗಳೆಲ್ಲವೂ ಬರೀ ಸುಳ್ಳು!

ದಂಪತಿ ಮೇಲೆ ಹಲ್ಲೆ ನಡೆಸಿದ ಗುತ್ತಿಗೆದಾರ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.