ಹಳಿಯಾಳ: ದಾಂಡೇಲಿಯ ವೆಸ್ಟ್ಕೊಸ್ಟ್ ಪೆಪರ್ ಮಿಲ್ಲಿನಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ ಮಿರಾಶಿ (24) ಎಂಬಾತ ಬೈಕಿನಿಂದ ಬಿದ್ದು ಸಾವನಪ್ಪಿದ್ದಾನೆ.
ರಾಮಾಪುರದವನಾಗಿದ್ದ ನಾಗರಾಜ ರಾತ್ರಿ ವೇಳೆ ಹಳಿಯಾಳದಿಂದ ಸಾತ್ನಳ್ಳಿಗೆ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಮಂಗಳವಾಡ ಬಳಿಯ ಸೇತುವೆಗೆ ಬೈಕ್ ಗುದ್ದಿದ್ದು, ತಲೆ ಹಾಗೂ ಕೈಗೆ ಈತ ಗಾಯ ಮಾಡಿಕೊಂಡಿದ್ದ. ಅಪಘಾತವನ್ನು ನೋಡಿದ ಜನ ಆಸ್ಪತ್ರೆಗೆ ದಾಖಲಿಸಿದ್ದರು. ಆದರೂ, ಆತ ಬದುಕಲಿಲ್ಲ.
Discussion about this post