ಮುಂಡಗೋಡ: ಹಿತ್ತಲಿನಲ್ಲಿ ಹೂವಿನ ಗಿಡ ನೆಟ್ಟ ವಿಚಾರಕ್ಕೆ ಸಂಬoಧಿಸಿ ಎರಡು ಕುಟುಂಬಗಳ ನಡುವೆ ಹೊಡೆದಾಟ ನಡೆದಿದೆ.
ನಂದಿಗಟ್ಟಾದ ಮಾರುತಿ ಬೋಸ್ಲೆ ಅವರ ಪತ್ನಿ ಹೂವಿನ ಗಿಡ ನೆಟ್ಟಿದ್ದು, ಇದಕ್ಕೆ ರಮೇಶ ಬೋಸ್ಲೆ ಎಂಬಾತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೂ ಕೇಳದೇ ಹೂವಿನ ಗಿಡ ನೆಟ್ಟದಕ್ಕಾಗಿ ಮಾರುತಿ ಅವರ ಮನೆಯೊಳಗೆ ನುಗ್ಗಿದ ರಮೇಶ್ ದೊಣ್ಣೆಯಿಂದ ಹೊಡೆದಿದ್ದಾನೆ. ಇದಲ್ಲದೇ ಕಾಲಿನಿಂದ ಹೊಡೆದು, ಬೆನ್ನಿಗೆ ಗುದ್ದಿ ಗಾಯ ಪಡಿಸಿರುವ ಬಗ್ಗೆ ಮಾರುತಿ ಬೋಸ್ಲೆ ಪೊಲೀಸ್ ದೂರು ನೀಡಿದ್ದಾರೆ.
Discussion about this post