ಕಾರವಾರ: ಮನೆ ರಿಪೇರಿಗಾಗಿ ಆಲ್ವವಾಡಕ್ಕೆ ತೆರಳಿದ್ದ ಕೋಡಿಭಾಗದ ಕಾರ್ಪರೆಂಟರ್ ಸುನೀಲ ಪೆಡ್ನೇಕರ್ ಎಂಬಾತರ ಮೇಲೆ ಹಲ್ಲೆ ನಡೆದಿದೆ.
ಶಿಶಿರ ಪೆಡ್ನೆಕರ್ ಎಂಬಾತರ ಮನೆ ರಿಪೇರಿಗಾಗಿ ಸುನೀಲ್ ತೆರಳಿದ್ದರು. 15 ದಿನಕ್ಕೂ ಮೊದಲು ಇದೇ ಮನೆ ರಿಪೇರಿ ಮಾಡಿದ್ದು, ಮನೆಯ ಹಂಚಿನಿAದ ನೀರು ಸೋರುತ್ತಿತ್ತು. ಈ ಬಗ್ಗೆ ಶಿರರ ಸುನೀಲ ಬಗ್ಗೆ ಹೇಳಿಕೊಂಡಿದ್ದು, ಕಾರ್ಪರೆಂಟರ್ ಪರಿಶೀಲನೆಗೆ ಹೋದಾಗ ಹಲ್ಲೆಯ ಪ್ರಯತ್ನ ನಡೆದಿದೆ. ಅದಾದ ನಂತರ ಕಾರ್ಪರೆಂಟರ್ ಸುನೀಲ ಮನೆಗೆ ಆಗಮಿಸಿದ ಶಿಶಿರ ಸುನಿಲ ಅವರ ಮನೆಯ ಕಿಟಕಿಯನ್ನು ಒಡೆದು ಹಾಳು ಮಾಡಿದ್ದು, ಈ ಪ್ರಕರಣ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
Discussion about this post