ಭಟ್ಕಳ: ಅಬ್ದುಲ್ ಅಲಿಮ್ ಎಂಬಾತರ ಬೈಕಿಗೆ ಕುಮಟಾ ಟೀಚರ್ ಕಾಲೋನಿಯ ಗಣಪತಿ ನಾಯ್ಕ ಎಂಬಾತರ ಕಾರು ಗುದ್ದಿದ ಕಾರಣ ಅಬ್ದುಲ್ ಅವರ ಕಾಲು ಮುರಿದಿದೆ.
ಹೊನ್ನಾವರ ಕಡೆಯಿಂದ ಭಟ್ಕಳ ಕಡೆ ಹೊರಟ ಕಾರು ಚಾಲಕ ನಕ್ಷತ್ರ ಹೋಟೆಲ್ ಬಳಿ ತನ್ನ ಕಾರನ್ನು ಬೈಕಿಗೆ ಗುದ್ದಿದ್ದಾನೆ. ಕಾರು ಚಾಲಕ ಯಾವುದೇ ಸೂಚನೆ ನೀಡದೇ ಗುಮ್ಮನಕ್ಕಲ್ ಕ್ರಾಸ್ ಕಡೆ ತಿರುಗಿದ ಕಾರಣ ತನಗೆ ಅಪಘಾತವಾಗಿದೆ ಎಂದು ಬೈಕ್ ಚಾಲಕ ದೂರಿದ್ದಾನೆ. ಏಕಾಏಕಿ ಆಗಮಿಸಿ ಅಪಘಾತ ಮಾಡಿದ ಗಣಪತಿ ನಾಯ್ಕ ವಿರುದ್ಧ ಪೊಲೀಸರು ಕ್ರಮ ಜರುಗಿಸಬೇಕು. ಬೈಕಿನಲ್ಲಿದ್ದ ಇಬ್ಬರಿಗೆ ಗಾಯವಾಗಿದ್ದು, ನ್ಯಾಯ ಒದಗಿಸಬೇಕು ಎಂದು ದೂರುದಾರ ಅವಲತ್ತುಕೊಂಡಿದ್ದಾನೆ.
Discussion about this post