ಯಲ್ಲಾಪುರ: ಕಾಡಂಜಿನ ಜನರ ಮೇಲೆ ಕರಡಿ ದಾಳಿ ಮುಂದುರೆದಿದೆ. ಬುಧವಾರ ಸಹ ಮಹಿಳೆಯೊಬ್ಬರ ಮೇಲೆ ಕರಡಿ ದಾಳಿ ನಡೆಸಿದ್ದು, ತಪ್ಪಿಸಲು ಹೋದ ಪುರುಷ ಸಹ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ.
ಕಣ್ಣಿಗೇರಿ ಸಮೀಪದ ಶಳೆಬೈಲ್ ಬಳಿ ಹೊಲದ ಬಳಿ ದನ ಮೇಯಿಸಲು ತೆರಳಿದ್ದ ನಕಲಿ ಜಾನು ಗೌಳಿ (55) ಎಂಬಾತರ ಮೇಲೆ ಕರಡಿ ಆಕ್ರಮಣ ನಡೆಸಿದೆ. ಇದರಿಂದ ಅವರ ಎಡಗೈ ಗಾಯಗೊಂಡಿದ್ದು, ತುಂಡಾಗಿರುವ ಸಾಧ್ಯತೆ ಹೆಚ್ಚಿದೆ. ಕರಡಿ ದಾಳಿ ನೋಡಿದ ಕೇಶವ ಗೌಳಿ (55) ನಕಲಿ ಅವರನ್ನು ಈ ಆಕ್ರಮಣದಿಂದ ತಪ್ಪಿಸಲು ಪ್ರಯತ್ನಿಸಿದ್ದು, ಕೇಶವ ಗೌಳಿ ಮೇಲೆ ಸಹ ದಾಳಿ ನಡೆದಿದೆ.
ಇದನ್ನೂ ಓದಿ: ಈ ಕರಡಿಗೆ ಮಾನವನ ಮೇಲೆ ಮೋಹ!
ಗಾಯಗೊಂಡ ಈ ಇಬ್ಬರು ಯಲ್ಲಾಪುರದಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಯಲ್ಲಾಪುರ ತಾಲೂಕಿನಲ್ಲಿಯೇ ಒಂದು ತಿಂಗಳ ಅವಧಿಯಲ್ಲಿ ನಡೆದ ಮೂರನೇ ದಾಳಿ ಇದಾಗಿದೆ.



