ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕನ್ನಡದ ನಟ ದರ್ಶನ್’ರನ್ನು ಬಂಧಿಸಲಾಗಿದ್ದು ಕನ್ನಡ ಚಿತ್ರರಂಗದಿoದ ದರ್ಶನ್ ಅವರನ್ನು ಬಹಿಷ್ಕರಿಸಿ ಎಂಬ ಆಗ್ರಹ ಜಾಸ್ತಿಯಾಗಿದೆ.
ಕರ್ನಾಟಕ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್ ಎಂ ಸುರೇಶ್ ನೇತೃತ್ವದಲ್ಲಿ ಈ ಬಗ್ಗೆ ಚರ್ಚಿಸಲು ಸಭೆ ನಡೆದಿದೆ. ಕೊಲೆ ಪ್ರಕರಣಕ್ಕೆ ಸಂಬoಧಿಸಿದoತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು ಅವರನ್ನು ಚಿತ್ರರಂಗದಿoದ ಬಹಿಷ್ಕರಿಸುವಂತೆ ಒತ್ತಡ ಹಾಕುತ್ತಿದ್ದಾರೆ. ಈ ಪ್ರಕರಣದ ಆರೋಪಿ ದರ್ಶನ್ ವಿರುದ್ಧ ಯಾಕೆ ಕನ್ನಡ ಚಿತ್ರೋಧ್ಯಮ ಕ್ರಮಕೈಗೊಳ್ಳುತ್ತಿಲ್ಲ ಎಂಬ ಆರೋಪ ವ್ಯಕ್ತವಾಗಿದ್ದರಿಂದ ಸಭೆ ನಡೆದಿದೆ.
Discussion about this post