ಕೊಲ್ಲಾಪುರ: ಚಲಿಸುತ್ತಿದ್ದ ರೈಲಿನಲ್ಲಿ ಮುಸ್ಲಿಂ ಮಹಿಳೆಗೆ ಹುಟ್ಟಿದ ಮಗುವಿಗೆ `ಮಹಾಲಕ್ಷ್ಮಿ’ ಎಂದು ನಾಮಕರಣ ಮಾಡಲಾಗಿದೆ.
ಕೋಲ್ಹಾಪುರ-ಮುಂಬೈ ಮಹಾಲಕ್ಷ್ಮಿ ಎಕ್ಸ್ಪ್ರೆಸ್ ಚಲಿಸುತ್ತಿದ್ದ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಗ ಮಹಾಲಕ್ಷ್ಮಿ ದೇವಸ್ಥಾನಕ್ಕೆ ತೆರಳುತ್ತಿದ್ದ ಭಕ್ತರು ಸಹಾಯ ಮಾಡಿದ್ದಾರೆ. ರೈಲು ಲೋನಾವಾಲಾ ದಾಟಿದ ನಂತರ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, `ಮಗುವನ್ನು ನೋಡಿ ದೇವಿ ದರ್ಶನ ಪಡೆದಂತೆ ಭಾಸವಾಯಿತು. ಹೀಗಾಗಿ ದೇವಿ ಹೆಸರು ಇಟ್ಟಿದ್ದೇವೆ’ ಎಂದು ಪಾಲಕರು ಹೇಳಿದ್ದಾರೆ.
Discussion about this post