ಜೊಯಿಡಾ: ಗೋವಾ ಹೈದರಾಬಾದ್ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಅಪ್ತಾಬ ಸನದಿ ಎಂಬಾತನ ಮೇಲೆ ಅಬಕಾರಿ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ.
ಗೋವಾ ಮೂಲದ ಅಪ್ತಾಬ ತನ್ನ ಸಂಬoಧಿಕರ ಜೊತೆ ವಿಡಿಯೋ ಕಾಲ್’ನಲ್ಲಿ ಮಾತನಾಡುತ್ತಿದ್ದ. ಆನಮೋಡ ಚೆಕ್‌ಪೋಸ್ಟಿನಲ್ಲಿ ಬಸ್ ತಪಾಸಣೆಗೆ ಆಗಮಿಸಿದ ಅಬಕಾರಿ ಸಿಬ್ಬಂದಿ ಆತ ತಮ್ಮದೇ ವಿಡಿಯೋ ಮಾಡುತ್ತಿದ್ದಾನೆ ಎಂದು ಭಾವಿಸಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ಆತ ಬಸ್ಸಿನಿಂದ ಇಳಿದರೂ ಥಳಿಸುವುದನ್ನು ಮಾತ್ರ ಬಿಟ್ಟಿಲ್ಲ. ಸದಾಶಿವ ರಾಠೋಡ, ಸಂತೋಷ ಹಾಗೂ ಇನ್ನೊಬ್ಬ ಸಿಬ್ಬಂದಿ ಹಲ್ಲೆ ಮಾಡಿದ ಆರೋಪಿಗಳು. ಅಬಕಾರಿ ಸಿಬ್ಬಂದಿ ಅನಗತ್ಯವಾಗಿ ಹಲ್ಲೆ ನಡೆಸಿರುವ ಬಗ್ಗೆ ಅಪ್ತಾಬ ಸನದಿ ಪೊಲೀಸ್ ದೂರು ನೀಡಿದ್ದಾರೆ.
Discussion about this post