ಯಲ್ಲಾಪುರ: ಸಾಹಿತಿ, ಕವಿ, ಚಿಂತಕ ಹಾಗೂ ನಿವೃತ್ತ ಪ್ರಾಚಾರ್ಯ ಶ್ರೀರಂಗ ಕಟ್ಟಿ ಅವರ 4ನೇ ಪುಸ್ತಕ ಬಿಡುಗಡೆಗೆ ಸಿದ್ಧವಾಗಿದೆ. ಇದರ ಜೊತೆ ನಟ, ರಂಗಕರ್ಮಿ, ಸ್ವಾತಂತ್ರ್ಯ ಹೋರಾಗಾರರೂ ಆಗಿದ್ದ ದಿ. ವೆಂಕಣ್ಣಾಚಾರ್ಯ ಕಟ್ಟಿ ಅವರ `ಸಂದೇಶ ರಾಮಾಯಣ’ ಕೃತಿ ಸಹ ಅದೇ ವೇದಿಕೆಯಲ್ಲಿ ಬಿಡುಗಡೆಯಾಗುತ್ತಿರುವುದು ಇನ್ನೊಂದು ವಿಶೇಷ. ಯಲ್ಲಾಪುರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೆ 12ರ ಬೆಳಗ್ಗೆ 10 ಗಂಟೆಗೆ ಹಿರಿಯ ಸಾಹಿತಿ ಅರುಣಕುಮಾರ ಹಬ್ಬು ಈ ಕೃತಿ ಬಿಡುಗಡೆ ಮಾಡಲಿದ್ದಾರೆ. ಕಾಲೇಜು ಪ್ರಾಚಾರ್ಯ ಡಾ ಜನಾರ್ಧನ, ಹಿರಿಯ ಸಾಹಿತಿ ವನರಾಗ ಶರ್ಮಾ ಸೇರಿ ಅನೇಕ ಸಾಹಿತಿ, ಸಾಹಿತ್ಯ ಆಸಕ್ತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಶ್ರೀರಂಗ ಕಟ್ಟಿ ಅವರು ಈ ಮೊದಲು `ಬದುಕು ಪಯಣದ ಬುತ್ತಿ’ `ಕಬೀರ ಕಂಡoತೆ’ ಹಾಗೂ `ಶ್ರಾವಣದ ಪೋರಿ’ ಎಂಬ ಪುಸ್ತಕಗಳನ್ನು ಓದುಗರಿಗೆ ನೀಡಿದ್ದಾರೆ. ಶ್ರೀರಂಗ ಕಟ್ಟಿ ಅವರ ತಂದೆ ವೆಂಕಣ್ಣಾಚಾರ್ಯ ಕಟ್ಟಿ ಅವರು `ಸೋದೆ ವಾದಿರಾಜ ಚರಿತ್ರೆ’ ಹಾಗೂ `ಜಂಬುಖoಡಿ ವಾದಿರಾಜ ಆಚಾರ್ಯರು’ ಎಂಬ ಪುಸ್ತಕಗಳನ್ನು ರಚಿಸಿದ್ದಾರೆ. 18 ವರ್ಷದ ಹಿಂದೆ ವೆಂಕಣ್ಣಾಚಾರ್ಯ ಕಟ್ಟಿ ಅವರು ಇಹಲೋಕದ ಯಾತ್ರೆ ಮುಗಿಸಿದ್ದು, ಮರಣಕ್ಕೂ ಮುನ್ನ ಅವರು `ಸಂದೇಶ ರಾಮಾಯಣ’ ಎಂಬ ಹಸ್ತಪ್ರತಿ ರಚಿಸಿದ್ದರು. ಪ್ರಸ್ತುತ ಶ್ರೀರಂಗ ಕಟ್ಟಿ ಅವರು ಆ ಪುಸ್ತಕವನ್ನು ಮುದ್ರಣ ರೂಪಕ್ಕೆ ತಂದಿದ್ದು, ಪುಸ್ತಕದ ಸಂಕಲನ ಹಾಗೂ ಭಾವಾರ್ಥದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಮಾತೃಭೂಮಿ ಸೇವಾ ಪ್ರತಿಷ್ಠಾನ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಪ್ರದ ಕಾಲೇಜು ಸಹಯೋಗದಲ್ಲಿ ಈ ಸಾಹಿತ್ಯ ಸಮ್ಮಿಲನ ನಡೆಯಲಿದೆ.
ನೀವು ಬನ್ನಿ… ನಿಮ್ಮವರನ್ನು ಕರೆತನ್ನಿ!