6
  • Latest

ಸಾಧಕ ಕೃಷಿಕರಿಗೆ ಮಲೆನಾಡು ಸಂಘದ ಗೌರವ

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Saturday, July 4, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸಾಧಕ ಕೃಷಿಕರಿಗೆ ಮಲೆನಾಡು ಸಂಘದ ಗೌರವ

AchyutKumar by AchyutKumar
in ಸ್ಥಳೀಯ

ಯಲ್ಲಾಪುರ: ಕೃಷಿ ಹಾಗೂ ತೋಟಗಾರಿಕಾ ಕ್ಷೇತ್ರದಲ್ಲಿ ವಿವಿಧ ರೀತಿ ಸಾಧನೆ ಮಾಡಿದವರನ್ನು ಮಲೆನಾಡು ಕೃಷಿ ಅಭಿವೃದ್ಧಿ ಸಹಕಾರಿ ಸಂಸ್ಥೆಯವರು ಗುರುತಿಸಿ ಅಡಿಕೆ ಭವನದಲ್ಲಿ ನಡೆದ ಸಭೆಯಲ್ಲಿ ಸನ್ಮಾನಿಸಿದ್ದಾರೆ.

ನಂತರ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ `ರೈತರ ಹಿತಕ್ಕಾಗಿ ಸಂಘ ಸ್ಥಾಪನೆಯಾಗಿದ್ದು, ರೈತರ ಸಹಕಾರದಿಂದಲೇ ಸಂಘ ಸಾಧನೆ ಮಾಡಿದೆ’ ಎಂದು ಹೇಳಿದರು. `ನಮ್ಮ ಸೇವೆ ಮೆಚ್ಚಿ ಅಂಕೋಲಾ, ಜೊಯಿಡಾ, ಮುಂಡಗೋಡಿನ ಕೃಷಿಕರು ಹಾಗೂ ಅಲ್ಲಿನ ಸಹಕಾರಿ ಸಂಘದವರು ಸಂಪೂರ್ಣ ಬೆಂಬಲ ನೀಡಿದ್ದಾರೆ’ ಎಂದರು.

`ಆಧುನಿಕ ಕಾಲಘಟ್ಟದಲ್ಲಿದ್ದ ಕೃಷಿಗೆ ಹಲವು ಸವಾಲು ಎದುರಾಗುತ್ತದೆ. ಹೊಸ ಹೊಸ ಆವಿಷ್ಕಾರದೊಂದಿಗೆ ಆಧುನಿಕ ಪದ್ಧತಿಯನ್ನು ಅಳವಡಿಸಿಕೊಂಡಾಗ ಮಾತ್ರ ಅದನ್ನು ಹಿಮ್ಮೆಟ್ಟಲು ಸಾಧ್ಯ’ ಎಂದರು. `ಅಡಿಕೆಯ ಜೊತೆಯಲ್ಲಿ ಬಾಳೆ, ತೆಂಗು, ಕಾಳುಮೆಣಸು ಸೇರಿದಂತೆ ಬದಲಿ ಬೆಳೆಗಳನ್ನು ಅಳವಡಿಸಿಕೊಂಡಾಗ ಕೃಷಿಯಲ್ಲಿ ಯಶಸ್ಸು ಸಿಗುತ್ತದೆ’ ಎಂದು ತಮ್ಮ ಅನುಭವ ಹಂಚಿಕೊ0ಡರು. ಸನ್ಮಾನ ಸ್ವೀಕರಿಸಿದ ವಿ.ಎನ್.ಭಟ್ಟ ಏಕಾನ ಮಾತನಾಡಿ `ಪ್ರತಿಯೊಬ್ಬ ರೈತರು ತಮ್ಮ ಮಕ್ಕಳಿಗೂ ಕೃಷಿ ಕಾಯಕದ ಬಗ್ಗೆ ತಿಳಿಸಬೇಕು. ಸಾವಯವ ಕೃಷಿಗೆ ಒತ್ತು ನೀಡಬೇಕು’ ಎಂದರು. ಸನ್ಮಾನ ಸ್ವೀಕರಿಸಿದ ಸದಾಶಿವ ಕಮಲಾಕರ ದೇಸಾಯಿ ಮಾತನಾಡಿದರು. ವೆಂಕಟರಮಣ ಭಟ್ಟ ಕಾಶಿಮನೆ, ಶಾಂತಾರಾಮ ಹೆಗಡೆ ಬಾಳೆಹಳ್ಳಿ, ರವೀಂದ್ರ ಭಟ್ಟಕಾನಗೋಡು, ಅಕ್ಷಯ ಗಾಂವ್ಕರ ನೆಲೆಪಾಲ, ಮಹೇಶ ಹೆಗಡೆ ಹೆಮ್ಮಾಡಿ, ಸದಾಶಿವ ದೇಸಾಯಿ ಗುಂದ, ಗಂಗಾ ಭಟ್ಟ ತಟಗಾರ, ರಾಮಚಂದ್ರ ಹೆಗಡೆ ಕಂಚನಳ್ಳಿ, ಛಾಯಪ್ಪ ಎಂ ಕೆಂಚನ್ನವರ ಇಂದೂರು, ವೆಂಕಟರಮಣ ಎಸ್.ಮರಾಠಿ, ಗಜಾನನ ವಿ ಭಟ್ಟ ಕುಟ್ರೇಬೈಲ್ ಸನ್ಮಾನ ಸ್ವೀಕರಿಸಿದರು.

ಸಂಘದ ಉಪಾಧ್ಯಕ್ಷ ಎಂ.ಜಿ.ಭಟ್ಟ ಶೀಗೇಪಾಲ, ಲೆಕ್ಕ ಪರಿಶೋಧಕ ಎಸ್.ಜಿ.ಹೆಗಡೆ ಬೆದೆಹಕ್ಕಲು, ಪ್ರಧಾನ ವ್ಯವಸ್ಥಾಪಕ ವಿನಾಯಕ ಹೆಗಡೆ ಇತರರು ಇದ್ದರು. ನಿರ್ದೇಶಕ ದತ್ತಾತ್ರೇಯ ಬೋಳಗುಡ್ಡೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.

ShareSendTweetShare
Previous Post

ಪ್ರವಾಸಿಗರ ಪಾಲಿಗೆ ಖುಷಿ ಸುದ್ದಿ: ಪ್ರಸಿದ್ಧ ಜಲಪಾತ ವೀಕ್ಷಣೆಗೆ ಸಿಗಲಿದೆ ಅವಕಾಶ!

Next Post

ಅಸ್ತಮಾದಿಂದ ಸಾವನಪ್ಪಿದ ಹೋಟೆಲ್ ಕಾರ್ಮಿಕ

Next Post

ಅಸ್ತಮಾದಿಂದ ಸಾವನಪ್ಪಿದ ಹೋಟೆಲ್ ಕಾರ್ಮಿಕ

ಗುಡ್ಡ ಕುಸಿದು ಎರಡು ತಿಂಗಳಾದರೂ ತೆರವಾಗದ ಮಣ್ಣು: ಜಿಲ್ಲಾಡಳಿತದ ವಿರುದ್ಧ ಜನಾಕ್ರೋಶ

15 ಸೆಕೆಂಡಿನಲ್ಲಿ 1 ಪುಟದ ಬರಹ: ಈ ಬಾಲಕನ ಸಾಧನೆಯೇ ದೊಡ್ಡ ದಾಖಲೆ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.