ಕಳೆದ ನಾಲ್ಕು ದಶಕಗಳಿಂದ ಮಂಚಿಕೇರಿಯಲ್ಲಿ ನಾಟಕ ಚಟುವಟಿಕೆ ನಡೆಸುತ್ತಿರುವ ರಂಗ ಸಮೂಹದ ಕಲಾವಿದರಿಗೆ ರಾಷ್ಟ್ರೀಯ ನಾಟಕೋತ್ಸವಕ್ಕೆ ಆಮಂತ್ರಣ ದೊರೆತಿದೆ.
ಇದಕ್ಕೂ ಮುನ್ನ ಸೆ 21ರಂದು ಬೆಂಗಳೂರಿನ ಕಲಾಗ್ರಾಮ ಹಾಗೂ ಸೆ 22ರಂದು ತುಮಕೂರಿನ ಗುಬ್ಬಿ ವೀರಣ್ಣ ರಂಗಮoದಿರದಲ್ಲಿ `ಕಾಲಚಕ್ರ’ ಎಂಬ ನಾಟಕ ಪ್ರದರ್ಶನಕ್ಕೆ ಮುಂದಾಗಿದೆ. ಹುಲಿಗೆಪ್ಪ ಕಟ್ಟಿಮನೆ ಅವರು ಈ ನಾಟಕ ನಿರ್ದೇಶಿಸಿದ್ದಾರೆ. ವಿ ಎನ್ ಶಾಸ್ತ್ರಿ ಜೋಗ ಭಟ್ರಕೇರಿ, ನಾಗರಾಜ್ ಹೆಗಡೆ ಜಾಲಿಮನೆ, ಎಂಕೆ ಭಟ್ ಯಡಳ್ಳಿ, ಪ್ರಕಾಶ್ ಭಟ್ ತುಂಬೆಬೀಡು, ಕಿರಣ್ ಹೆಗಡೆ ಕಾನಗೋಡು, ಸುಬೋಧ ಹೆಗಡೆ ಮಳಗಿಮನೆ, ವಿಕಾಸ್ ನಾಯ್ಕ ಮಂಚಿಕೇರಿ, ಸಾಗರ ಹೆಗಡೆ ಮಂಚಿಕೇರಿ, ಕೃಷ್ಣಮೂರ್ತಿ ಶಾಸ್ತ್ರಿ ಕೆರೆಗದ್ದೆ, ನಿರ್ಮಲ ಹೆಗಡೆ ಗೂಳಿಕೊಪ್ಪ ಅಮೃತ ಪೂಜಾರಿ ಬೆದೆಹಕ್ಲು ಹಾಗೂ ರಕ್ಷಿತಾ ಹೂಗಾರ್ ಮಂಚಿಕೇರಿ ಕಾಲಚಕ್ರ ನಾಟಕದ ಪ್ರಮುಖ ಪಾತ್ರದಾರಿಗಳು.
ರಾಮಕೃಷ್ಣ ಭಟ್ ದುಂಡಿ ಅವರ ಅಧ್ಯಕ್ಷತೆಯಲ್ಲಿ ಎಂ ಕೆ ಭಟ್ ಯಡಳ್ಳಿ ಸಂಚಾಲಕತ್ವದಲ್ಲಿ ಈ ನಾಟಕ ರಾಜ್ಯದ ನಾನಾಭಾಗಗಳಲ್ಲಿ ಪ್ರದರ್ಶನ ಕಂಡಿದೆ. ಇನ್ನಷ್ಟು ಪ್ರದರ್ಶನಕ್ಕೆ ಬೇಡಿಕೆ ಬಂದಿದ್ದು, ನಾಟಕ ವೀಕ್ಷಿಸಿದ್ದ ಸಾಣೆಹಳ್ಳಿ ಶ್ರೀಗಳು ನವೆಂಬರ್ ಮಾಸದಲ್ಲಿ ನಡೆಯುವ ರಾಷ್ಟ್ರೀಯ ನಾಟಕೋತ್ಸವಕ್ಕೆ ತಂಡದವರನ್ನು ಆಯ್ಕೆ ಮಾಡಿ ಆಹ್ವಾನ ನೀಡಿದ್ದಾರೆ.