ಯಲ್ಲಾಪುರ: ಮುರುಳಿ ಹೆಗಡೆ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ವಿಕಾಸ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಕಳೆದ ಬಾರಿ 1.20 ಕೋಟಿ ರೂ ಲಾಭಗಳಿಸಿದೆ.
`ಡಿಜಿಟಲ್ ಪ್ರಕ್ರಿಯೆಯಲ್ಲಿ ಇನ್ನಷ್ಟು ಹೊಸತನ ಅಳವಡಿಸಿಕೊಳ್ಳಲು ಈ ಬ್ಯಾಂಕ್ ನಿರ್ಧರಿಸಿದ್ದು, ಇದಕ್ಕಾಗಿ ಎಲ್ಲಾ ಬಗೆಯ ತಯಾರಿ ನಡೆಸಲಾಗಿದೆ. ಆರ್ಥಿಕ ಏರಿಳಿತಗಳ ನಡುವೆಯೂ ಬ್ಯಾಂಕ್ ಕೋಟಿ ಲೆಕ್ಕದಲ್ಲಿ ಲಾಭಗಳಿಸಿರುವುದು ಸಾಧನೆ’ ಎಂದು ಬ್ಯಾಂಕಿನ ಅಧ್ಯಕ್ಷ ಮುರುಳಿ ಹೆಗಡೆ ಸುದ್ದಿಗಾರರಿಗೆ ಮಾಹಿತಿ ನೀಡಿದರು.
`1997ರಲ್ಲಿ ಸ್ಥಾಪನೆಯಾದ ಈ ಬ್ಯಾಂಕು ನಿರಂತರವಾಗಿ ಪ್ರಗತಿ ಸಾಧಿಸುತ್ತ ಬಂದಿದೆ. ಸ್ಪರ್ಧಾತ್ಮಕ ದರದಲ್ಲಿ ಸಾಲ ನೀಡುವಿಕೆ ಹಾಗೂ ಹೂಡಿಕೆದಾರರಿಗೆ ಸೇವೆ ನೀಡುತ್ತಿದೆ. ಕೋರ್ ಬ್ಯಾಂಕಿoಗ್, ಯುಪಿಐ ಸೇವೆ ಸೇರಿ ಹಲವು ತಂತ್ರಾ0ಶಗಳನ್ನು ಬ್ಯಾಂಕ್ ಅಳವಡಿಸಿಕೊಳ್ಳಲಿದ್ದು, ಬ್ಯಾಂಕಿನ ಗ್ರಾಹಕರು ಈಗಾಗಲೇ ಎಟಿಎಂ, ಮೊಬೈಲ್ ಬ್ಯಾಂಕಿ0ಗ್ ಸೇರಿ ಹಲವು ರೀತಿಯ ಡಿಜಿಟಲ್ ಸೇವೆ ಪಡೆಯುತ್ತಿದ್ದಾರೆ’ ಎಂದು ತಿಳಿಸಿದರು.
`ಸೆ 23ರ ಮಧ್ಯಾಹ್ನ 3ಗಂಟೆಗೆ ಅಡಿಕೆ ಭವನದಲ್ಲಿ ಬ್ಯಾಂಕಿನ ಸರ್ವ ಸಾಧಾರಣ ಸಭೆ ನಡೆಯಲಿದೆ’ ಎಂದು ತಿಳಿಸಿದರು. ಬ್ಯಾಂಕಿನ ಉಪಾಧ್ಯಕ್ಷೆ ಅಪರ್ಣಾ ಮಾರುತಿ ಘಟ್ಟಿ,ಪ್ರಮುಖರಾದ ಅನಿತಾ ಹೆಗಡೆ, ರಾಜೇಂದ್ರ ಬದ್ದಿ, ನಾಗೇಶ ದೇವಳಿ, ಲೋಕೇಶ್ ಗಿಡ್ಡನ್, ಎಸ್ ಕೆ ಭಾಗ್ವತ ಹಾಗೂ ವ್ಯವಸ್ಥಾಪಕ ನಿರ್ದೇಶಕ ಉಮೇಶ ಗೋಪಾಲ ಭಾಗ್ವತ ಇದ್ದರು.