ದಾoಡೇಲಿ: ಗಾಂಧಿ ನಗರದಲ್ಲಿನ ಮನೆ ಮೇಲೆ ಶುಕ್ರವಾರ ದಾಳಿ ನಡೆಸಿದ ಅರಣ್ಯ ಸಿಬ್ಬಂದಿ ಪಕ್ರುಸಾಬ ಎಂಬಾತನನ್ನು ಬಂಧಿಸಿದ್ದು, ಆತ ದಾಸ್ತಾನು ಇರಿಸಿಕೊಂಡಿದ್ದ ವನ್ಯಜೀವಿ ಉತ್ಪನ್ನಗಳನ್ನು ವಶಕ್ಕೆ ಪಡೆದಿದ್ದಾರೆ.
ಪಕ್ರುಸಾಬನ ಮನೆಯಲ್ಲಿ ಜಿಂಕೆ ಹಾಗೂ ಕಾಡು ಕೋಣದ ಕೊಂಬುಗಳು ದೊರೆತಿವೆ. ಆರೋಪಿಯನ್ನು ಅರಣ್ಯ ಸಿಬ್ಬಂದಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.




