ಉತ್ತರ ಕನ್ನಡ ಜಿಲ್ಲೆಯ ಅನೇಕರು ವಿದೇಶಗಳಲ್ಲಿ ಉನ್ನತ ಉದ್ಯೋಗದಲ್ಲಿದ್ದರೂ ಇಲ್ಲಿ ಪಡೆದಿದ್ದ ಬಿಪಿಎಲ್ ಕಾರ್ಡ ತ್ಯಜಿಸಿಲ್ಲ. ಮುಖ್ಯವಾಗಿ ಭಟ್ಕಳದ ಹಲವರು ದೇಶ-ವಿದೇಶಗಳಲ್ಲಿ ಉದ್ಯೋಗದಲ್ಲಿದ್ದರೂ ಅಂಥವರ ಬಿಪಿಎಲ್ ಕಾರ್ಡು ಹಾಗೇ ಉಳಿದಿದೆ. ಆದರೆ, ಅಂಥವರನ್ನು ಹುಡುಕಿ ಸರ್ಕಾರಿ ಸೌಲಭ್ಯ ದುರುಪಯೋಗಪಡಿಸಿಕೊಂಡವರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಬಗ್ಗೆ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ.
ನಿಯಮಗಳ ಪ್ರಕಾರ ಅಕ್ರಮವಾಗಿ ಬಿಪಿಎಲ್ ಪಡಿತರ ಚೀಟಿ ಪಡೆದವರ ವಿರುದ್ಧ ಕ್ರಿಮಿನಲ್ ಮೊಕದ್ಧಮೆ ದಾಖಲಿಸಬೇಕು. ಆದರೆ, ಸರ್ಕಾರಿ ನೌಕರರೇ ಈ ಅಕ್ರಮ ಪಡಿತರ ಹೊಂದಿರುವುದರಿoದ ಕ್ರಿಮಿನಲ್ ನಿಯಮ ಪಾಲಿಸುವ ವಿಷಯದಲ್ಲಿ ಮೃದು ದೋರಣೆ ಅನುಸರಿಸಿದ್ದಾರೆ. ನಿಯಮಗಳ ಪ್ರಕಾರ ಅಕ್ರಮವಾಗಿ ಬಿಪಿಎಲ್ ಪಡಿತರ ಚೀಟಿ ಪಡೆದವರ ವಿರುದ್ಧ ಕ್ರಿಮಿನಲ್ ಮೊಕದ್ಧಮೆ ದಾಖಲಿಸಬೇಕು. ಆದರೆ, ಸರ್ಕಾರಿ ನೌಕರರೇ ಈ ಅಕ್ರಮ ಪಡಿತರ ಹೊಂದಿರುವುದರಿoದ ಕ್ರಿಮಿನಲ್ ನಿಯಮ ಪಾಲಿಸುವ ವಿಷಯದಲ್ಲಿ ಮೃದು ದೋರಣೆ ಅನುಸರಿಸಿದ್ದಾರೆ. ಅಕ್ರಮವಾಗಿ ಬಿಪಿಎಲ್ ಕಾರ್ಡು ಪಡೆದವರ ಪತ್ತೆಗೆ ಸರ್ಕಾರ ಸಾಕಷ್ಟು ಒತ್ತು ನೀಡಿದರೂ ಅಧಿಕಾರಿಗಳು ಪ್ರಯತ್ನ ನಡೆಸಿಲ್ಲ.
ಅಕ್ರಮ ಪಡಿತರ ಚೀಟಿ ಪಡೆದವರ ಶಿಸ್ತು ಕ್ರಮದ ಕಾನೂನು ಪಠ್ಯಕ್ಕೆ ಮಾತ್ರ ಸೀಮಿತವಾಗಿದೆ. ಇದರಿಂದ ಕಾನೂನಿನ ಬಗ್ಗೆ ಅಕ್ರಮ ನಡೆಸುವವರಿಗೆ ಗೌರವವಿಲ್ಲ. ಹೀಗಾಗಿ ಎಲ್ಲ ಬಗೆಯ ಐಷಾರಾಮಿ ಸೌಲಭ್ಯ ಹೊಂದಿಯೂ ಅಕ್ರಮವಾಗಿ ಬಿಪಿಎಲ್ ಪಡಿತರ ಚೀಟಿ ಹೊಂದಿದ್ದರೂ ಅದನ್ನು ತ್ಯಜಿಸಿದವರಿಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ವರ್ಷ 3 ಸಾವಿರ ಅಕ್ರಮ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಿರುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯವರು ಹೇಳಿದ್ದಾರೆ. ಇದೀಗ ಭಟ್ಕಳದಲ್ಲಿ ಎರಡು ಚಪ್ಪಲಿ ಅಂಗಡಿ ಮಾಲಕನಾಗಿ ಜಿಎಸ್‌ಟಿ ಸಂಖ್ಯೆ ಹೊಂದಿರುವ ವ್ಯಕ್ತಿ ವಿರುದ್ಧ ದೂರು ದಾಖಲಾಗಿದೆ.
ಅನೇಕ ಸರ್ಕಾರಿ ನೌಕರರು ತಂದೆ-ತಾಯಿ ಹೆಸರಿನಲ್ಲಿ ಬಿಪಿಎಲ್ ಕಾರ್ಡು ಹೊಂದಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ತಮ್ಮದು ಬೇರೆ ಕುಟುಂಬ ಎಂದು ದಾರಿ ತಪ್ಪಿಸುತ್ತಿದ್ದಾರೆ.