6

ವಿಮಾನ ಏರಿದ ಕಾಗೇರಿ ರೈಲ್ವೆ ನಿಗಮಕ್ಕೆ ಭೇಟಿ: ನಂತರ ಕಾರಿನಲ್ಲಿ ಸಂಚಾರ!

ದೆಹಲಿಯಿಂದ ಹುಬ್ಬಳ್ಳಿಗೆ ಶುಕ್ರವಾರ ವಿಮಾನದಲ್ಲಿ ಬಂದ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಲ್ಲಿಂದ ನೇರವಾಗಿ ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಲಯ ಕೇಂದ್ರ ಕಚೇರಿಗೆ ಭೇಟಿ ನೀಡಿದರು. ಅಧಿಕಾರಿಗಳ ಸಭೆ ನಡೆಸಿದ ಅವರು ಮುಂದೆ ತಮ್ಮ ಕಾರಿನಲ್ಲಿ ಶಿರಸಿಗೆ ಪ್ರಯಾಣ ಮಾಡಿದರು.

ರೈಲ್ವೆ ನಿಗಮದಲ್ಲಿ ಉತ್ತರ ಕನ್ನಡ ರೈಲು ಯೋಜನೆಗಳ ಸ್ಥಿತಿ-ಗತಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ರೈಲ್ವೆ ನಿಗಮದ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ ಪ್ರಗತಿಯ ಕುರಿತು ವಿವರಿಸಿದರು. ಹುಬ್ಬಳ್ಳಿ – ತಾಳಗುಪ್ಪ ರೈಲ್ವೆ ಹಳಿಯ ಅಂತಿಮ ಸ್ಥಳ ಸಮೀಕ್ಷೆ ಕುರಿತು ಸುದೀರ್ಘ ಚರ್ಚೆ ಮಾಡಿದರು. ಈ ವೇಳೆ ಬೆಂಗಳೂರು-ಮುರ್ಡೇಶ್ವರ ಎಕ್ಸ್ಪ್ರೆಸ್ ರೈಲನ್ನು ಕಾರವಾರದವರೆಗೂ ವಿಸ್ತರಿಸುವ ಬಗ್ಗೆ ಸೂಚಿಸಿದ್ದು, ಅದರ ಕಡತಗಳನ್ನು ಪರಿಶೀಲಿಸಿದರು. ಬೆಳಗಾವಿಯ ಖಾನಾಪುರದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಿಸುವ ಬಗ್ಗೆ ಜನರ ಬೇಡಿಕೆಗಳಿರುವುದನ್ನು ನಿಗಮದ ಗಮನಕ್ಕೆ ತಂದರು.

ಹುಬ್ಬಳ್ಳಿ-ಅoಕೋಲಾ ನಡುವಿನ ರೈಲ್ವೆ ಪ್ರಗತಿಯ ಕುರಿತು ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳುವಂತೆ ಸೂಚಿಸಿದರು. ಲೋಂಡಾ ಹಾಗೂ ಕ್ಯಾಸಲ್ ರಾಕ್’ಗಳಲ್ಲಿನ ರೈಲ್ವೆ ನಿಲ್ದಾಣಗಳ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ತಾಕೀತು ಮಾಡಿದರು. ಧಾರವಾಡ – ದಾಂಡೇಲಿ ನಡುವೆ ರೈಲು ಸೇವೆ ಪುನರಾರಂಭಿಸಲು ಅಗತ್ಯ ಕ್ರಮ ಜರುಗಿಸುವಂತೆ ಸೂಚಿಸಿದರು. ತಾಳಗುಪ್ಪ – ಹೊನ್ನಾವರ ನಡುವಿನ ರೈಲ್ವೆ ಯೋಜನೆಗಳ ಬಗ್ಗೆಯೂ ಪ್ರಸ್ತಾಪಿಸಿದರು.

  • Related Posts

    ಮಹಿಳೆಯ ಪಕ್ಕದಲ್ಲೇ ಮಲಗಿ ಕಳ್ಳತನಕ್ಕೆ ಯತ್ನಿಸಿದ ಖದೀಮ!

    Share this… Facebook Pinterest Twitter Linkedin Whatsappಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಮಧ್ಯರಾತ್ರಿ ಕಳ್ಳನ ಕಾಟ; ಮಹಿಳೆಯ ಹಾಸಿಗೆಯೊಳಗೆ ನುಸುಳಿದ ಖದೀಮ! ಹಾವೇರಿ: ನಗರದ ಜಿಲ್ಲಾಸ್ಪತ್ರೆಯ ವಾರ್ಡ್‌ನಲ್ಲಿ ಮಧ್ಯರಾತ್ರಿ ಕಳ್ಳನೊಬ್ಬ ವಿಚಿತ್ರ ರೀತಿಯಲ್ಲಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯ ಪಕ್ಕದಲ್ಲೇ…

    ಹಾವೇರಿ ಮಹಿಳಾ ಕಾಂಗ್ರೆಸ್‌ನಿಂದ ಇಂದಿರಾ ಗಾಂಧಿ ಜನ್ಮದಿನಾಚರಣೆ!

    Share this… Facebook Pinterest Twitter Linkedin Whatsappಹಾವೇರಿಯಲ್ಲಿ ಇಂದಿರಾ ಗಾಂಧಿ ಜನ್ಮದಿನಾಚರಣೆ: ಮಾಜಿ ಪ್ರಧಾನಿಯ ಕೊಡುಗೆ ಸ್ಮರಿಸಿದ ಮಹಿಳಾ ಕಾಂಗ್ರೆಸ್ ಮುಖಂಡರು ಹಾವೇರಿ: ಭಾರತದ ಮಾಜಿ ಪ್ರಧಾನಮಂತ್ರಿ ಹಾಗೂ ಉಕ್ಕಿನ ಮಹಿಳೆ ಎಂದೇ ಖ್ಯಾತರಾಗಿದ್ದ ದಿವಂಗತ ಇಂದಿರಾ ಗಾಂಧಿಯವರ ಜನ್ಮದಿನದ…

    You cannot copy content of this page