6

ಹಗಲು ದುಡಿಯುವವನ ವೇಷ – ರಾತ್ರಿ ಕಳ್ಳತನ: ಕೊನೆಗೂ ಸಿಕ್ಕಿಬಿದ್ದ ಸರಣಿ ಕಳವು ರೂವಾರಿ!

ದಾಂಡೇಲಿ: ಸಂಡೆ ಮಾರ್ಕೇಟಿನಲ್ಲಿ ನಡೆದ ಸರಣಿ ಕಳ್ಳತನದ ರೂವಾರಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.

ಸೆಂಟ್ರಿoಗ್ ಕೆಲಸ ಮಾಡುವ ಹಸನ ಖಾಸಿಂಸಾಬ್ ಬೇಗ ಹಾಗೂ ತರಕಾರಿ ವ್ಯಾಪಾರ ಮಾಡುವ ಆಶೀಪ್ ಕಾಸಿಂಸಾಬ್ ಬೇಗ ಸರಣಿ ಕಳ್ಳತನ ಮಾಡುತ್ತಿದ್ದದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಧಾರವಾಡ ಜಿಲ್ಲೆಯವರಾದ ಅವರು ಹಳಿಯಾಳದ ಮೀನು ಮಾರ್ಕೇಟ್ ಬಳಿ ವಾಸವಾಗಿದ್ದರು. ಹಸನ್ ಧಾರವಾಡದಲ್ಲಿಯೇ ಇದ್ದು ಕಳ್ಳತನದ ವೇಳೆ ಜಿಲ್ಲೆಗೆ ಬರುತ್ತಿದ್ದ. ಈ ಇಬ್ಬರು ಸೆ 18ರಂದು ಸಹ ಆತ ದಾಂಡೇಲಿಗೆ ಬಂದಿದ್ದು, ಅಲ್ಲಿನ ಮಳಿಗೆಗಳನ್ನು ಗುರಿಯಾಗಿರಿಸಿಕೊಂಡು ಕಳ್ಳತನ ನಡೆಸಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿವಿಧ ಬಗೆಯ ಹುಡುಕಾಟ ನಡೆಸಿ ಕೊನೆಗೂ ಆ ಕಳ್ಳರಿಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿoದ 1.70 ಲಕ್ಷ ರೂ ಹಣ, 36.83 ಗ್ರಾಮಿನ ಬಂಗಾರದ ಆಭರಣ ಹಾಗೂ 30.18 ಗ್ರಾಂ ತೂಕದ ಬೆಳ್ಳಿ ಆಭರಣವನ್ನು ವಶಕ್ಕೆ ಪಡೆದಿದ್ದಾರೆ. ಮಂಗಲಸೂತ್ರ, ಕಿವಿ ಓಲೆ, ಬಂಗಾರದ ಚೈನ್ ಜೊತೆ ಸರಾಯಿ ಕುಡಿದ ಪ್ಯಾಕೆಟ್ ಸಹ ಅವರ ಬಳಿ ಸಿಕ್ಕಿದೆ.

  • Related Posts

    ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ

    Share this… Facebook Pinterest Twitter Linkedin Whatsapp*ನಟ ನಾನಾ ಪಾಟೇಕರ್ ನಿಧನಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಸಂತಾಪ* ಬೆಂಗಳೂರು: ಖ್ಯಾತ ಬಾಲಿವುಡ್ ನಟ ನಾನಾ ಪಾಟೇಕರ್ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಅತ್ಯಂತ ದುಖವಾಯಿತು. ಹಿಂದಿ ಹಾಗೂ ಮರಾಠಿ…

    ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್ ಐಆರ್ ವಿಚಾರದಲ್ಲಿ ಚುನಾವಣಾ ಆಯೋಗ ದೂರು ನೀಡದೇ ಯಾವುದೆ ಎಫ್ ಐಆರ್ ಮಾಡಲು ಅವಕಾಶ ಇಲ್ಲ:ಬಸವರಾಜ ಬೊಮ್ಮಾಯಿ ಸಿಎಂ ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ:ಬಸವರಾಜ ಬೊಮ್ಮಾಯಿ…

    You cannot copy content of this page