6
  • Latest

ಲಕ್ಷ ಖರ್ಚಾದರೂ ಉಳಿಯಲಿಲ್ಲ ಅಪರೂಪದ ಮರ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Thursday, July 2, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಲಕ್ಷ ಖರ್ಚಾದರೂ ಉಳಿಯಲಿಲ್ಲ ಅಪರೂಪದ ಮರ!

AchyutKumar by AchyutKumar
in ಸ್ಥಳೀಯ

ಯಲ್ಲಾಪುರ: ಜೀವ ವೈವಿಧ್ಯಗಳ ಪಟ್ಟಿಗೆ ಸೇರಲು ಎಲ್ಲಾ ಅರ್ಹತೆಗಳನ್ನು ಹೊಂದಿದ ಅಂದಾಜು 200 ವರ್ಷದ ಹಳೆಯ ಮರ ನಾಶವಾಗಿದೆ.

ಯಲ್ಲಾಪುರ ಭಾಗದಲ್ಲಿ `ಜೀವ ವೈವಿಧ್ಯ ಉಳಿಸಿ’ ಎಂಬ ಜನ ಜಾಗೃತಿಗಾಗಿ ಲಕ್ಷ ಲೆಕ್ಕದಲ್ಲಿ ಹಣ ವೆಚ್ಚ ಮಾಡಿ ಕಾರ್ಯಾಗಾರ ನಡೆಸಿದರೂ ಅಪರೂಪದ ಮರವನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ರಸ್ತೆ ಅಂಚಿನಲ್ಲಿದ್ದ ಭಾರೀ ಗಾತ್ರದ ಮರ ಕಟಾವು ನಡೆದು ಆರು ದಿನ ಕಳೆದರೂ ಈವರೆಗೆ ಅರಣ್ಯ ಇಲಾಖೆ ಪ್ರಕರಣವನ್ನು ದಾಖಲಿಸಿಕೊಂಡಿಲ್ಲ. ಆರೋಪಿತರ ಜಾಡು ಹಿಡಿದಿಲ್ಲ. ಹೀಗಾಗಿ ಅರಣ್ಯ ಇಲಾಖೆಯ ಈ ನಡೆಯೂ ಇನ್ನಷ್ಟು ಅನುಮಾನಗಳಿಗೆ ಕಾರಣವಾಗಿದೆ.

ದೆಹಳ್ಳಿ ಹಾಗೂ ಆನಗೋಡು ಗ್ರಾಮ ಪಂಚಾಯತ ನಡುವಿನ ಕಾಳಿ ಕಣಿವೆ ಪ್ರದೇಶವನ್ನು ಜೀವ ವೈವಿಧ್ಯ ತಾಣ ಎಂದು ಗುರುತಿಸಲಾಗಿದೆ. ಇಲ್ಲಿರುವ ಮರ ಅರಶಿಣ ಬಳ್ಳಿಗಳ ಬಗ್ಗೆ ಅಧ್ಯಯನ ನಡೆಸಿದ್ದು, ಅದು ಅಪರೂಪದಲ್ಲಿಯೇ ಅಪರೂಪ ಎಂದು ಹೇಳಲಾಗಿದೆ. ಜೀವ ವೈವಿಧ್ಯ ತಾಣ, ಅಪರೂಪದ ಸಸ್ಯಗಳ ಬೀಡು ಎಂದು ಗುರುತಿಸಲಾದ ಪ್ರದೇಶದಲ್ಲಿರುವ ಮರವೇ ಇದೀಗ ನಾಶವಾಗಿದೆ. ದೆಹಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಬಿಸಗೋಡು ರಸ್ತೆ ಚಿಕ್ಯಾನಮನೆ ತೆರಳುವ ರಸ್ತೆ ಅಂಚಿನಲ್ಲಿದ್ದ ಮರ ಕಡಿತವಾಗಿದೆ. ಸಾರ್ವಜನಿಕರು ನಿತ್ಯ ಓಡಾಡುವ ರಸ್ತೆ ಅಂಚಿನಲ್ಲಿಯೇ ಈ ಮರ ಇದ್ದು, ಅದು ನೆಲಕ್ಕೆ ಉರುಳಿದರೂ ಅರಣ್ಯ ಸಿಬ್ಬಂದಿ ಮೌನವಾಗಿದ್ದಾರೆ.

`ಎಷ್ಟು ವರ್ಷದ ಮರ ಎಂದು ಲೆಕ್ಕ ಮಾಡಿಲ್ಲ. ಮರ ಕಟಾವು ಆದ ಬಗ್ಗೆ ಯಾರು ಮಾಹಿತಿ ನೀಡಿರಲಿಲ್ಲ. ಎರಡು ದಿನದ ಹಿಂದೆ ಸ್ಥಳ ಪರಿಶೀಲನೆ ಮಾಡಿದ್ದು, ಆರೋಪಿಗಳ ಹುಡುಕಾಟ ನಡೆದಿದೆ’ ಎಂದು ಅಲ್ಲಿನ ಪಾರೆಸ್ಟರ್ ಶಿವಾನಂದ ಹೇಳಿದರು. `ಆ ಮಾರ್ಗದಲ್ಲಿ ಹಾದು ಹೋದ ಅಪಾಯಕಾರಿ ವಿದ್ಯುತ್ ತಂತಿ ಕಳಚಿ ಅದಾದ ನಂತರ ಮರ ಕಟಾವು ಮಾಡಲಾಗಿದೆ. ಮರ ಕಟಾವು ನಂತರ ಮತ್ತೆ ವಿದ್ಯುತ್ ತಂತಿಯನ್ನು ಕಂಬಗಳಿಗೆ ಜೋಡಿಸಲಾಗಿದೆ. ಇಷ್ಟೆಲ್ಲ ಕೆಲಸ ನಡೆದರೂ ಅರಣ್ಯ ಇಲಾಖೆಯವರಿಗೆ ಮಾಹಿತಿ ಇರಲಿಲ್ಲವೇ? ಎಂಬುದು ಎಲ್ಲರ ಪ್ರಶ್ನೆ. ಕಡಿತವಾದ ಮರ ಇನ್ನೊಂದು ಮರಕ್ಕೆ ಸಿಕ್ಕಿಬಿದ್ದು ಸಾಗಾಟಕ್ಕೆ ಸಮಸ್ಯೆಯಾದ ಪರಿಣಾಮ ಮರ ಕಟಾವು ವಿಷಯ ಹೊರಬಿದ್ದಿದೆ. ಇಲ್ಲವಾದಲ್ಲಿ ಅಲ್ಲಿ ಮರವೇ ಇರಲಿಲ್ಲ ಎಂದು ಹೇಳಿದರೂ ಎಲ್ಲರೂ ನಂಬಬೇಕಿತ್ತು ಎಂಬುದು ಹಲವರ ಮಾತು.

 

ShareSendTweetShare
Previous Post

ಅಂದರ್ ಬಾಹರ್ ಆಡುತ್ತಿದ್ದವರು ಅಂದರ್!

Next Post

ನಾಟಿ ಮನೆ’ಲಿ ಸಿಗುವುದು ಲೋಕಲ್ ಬ್ರಾಂಡು!

Next Post

ನಾಟಿ ಮನೆ'ಲಿ ಸಿಗುವುದು ಲೋಕಲ್ ಬ್ರಾಂಡು!

The boat driver was injured by the threat to the dog

ನಾಯಿಗೆ ಬೆದರಿ ಗಾಯಗೊಂಡ ಬೋಟು ಚಾಲಕ!

ಕಾಲು ತೊಳೆದವನನ್ನು ಆಹುತಿ ಪಡೆದ ಕೆರೆ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.