ಕುಮಟಾ: ಗೋಕರ್ಣ ಓಂ ಕಡಲತೀರ ರಸ್ತೆಯಿಂದ ಬಂಡಿಕೇರಿಮಠಕ್ಕೆ ತೆರಳುವ ಮಾರ್ಗದಲ್ಲಿನ ರೆಸಾರ್ಟ ತ್ಯಾಜ್ಯ ವಸತಿ ಪ್ರದೇಶಗಳಿಗೆ ನುಗ್ಗುತ್ತಿದೆ. ಹೀಗಾಗಿ ಬಂಡಿಕೇರಿ ಭಾಗದ ಜನ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಗ್ರಾ ಪಂ ಕ್ರಮ ಜರುಗಿಸಿಲ್ಲ ಎಂಬುದು ಸ್ಥಳೀಯರ ದೂರು.
ರೆಸಾರ್ಟಿನ ತ್ಯಾಜ್ಯದ ನೀರು 1ಕಿಮೀವರೆಗೂ ಹರಿಯುತ್ತಿದೆ. ಹೀಗಾಗಿ ಆ ಭಾಗದ ಭತ್ತದ ಗದ್ದೆ ಹಾಗೂ ಕುಡಿಯುವ ನೀರು ಸಹ ಮಾಲಿನ್ಯವಾಗಿದೆ. ರೆಸಾರ್ಟ ಹೊರಭಾಗದಲ್ಲಿ ಸಹ ಹೊಲಸು ನೀರು ತುಂಬಿದ್ದು, ಅಲ್ಲಿ ವಾಸ್ತವ್ಯ ಹೂಡಿದವರು ಅನಾರೋಗ್ಯಕ್ಕೆ ಒಳಗಾದ ದೂರುಗಳಿವೆ. ರೆಸಾರ್ಟ ಪಕ್ಕದಲ್ಲಿ ಸಹ ವ್ಯಾಪಕ ಪ್ರಮಾಣದಲ್ಲಿ ತ್ಯಾಜ್ಯಗಳಿವೆ. ಕಸ ಎಸೆಯುವವರ ಮೇಲೆ ಸ್ಥಳೀಯ ಆಡಳಿತ ಯಾವುದೇ ಕ್ರಮ ಜರುಗಿಸಿಲ್ಲ. ನೈರ್ಮಲ್ಯ ಕಾಪಾಡಲು ಗ್ರಾ ಪಂ ಆಸಕ್ತಿವಹಿಸುತ್ತಿಲ್ಲ ಎಂದು ಜನ ಆಕ್ರೋಶವ್ಯಕ್ತಪಡಿಸಿದರು.



