6
  • Latest

ನಾಯಕರು ಸಾಕಿದ ನಾಯಿ ನಾಪತ್ತೆ: ಹಂದಿಗೆ ಹಾಕಿದ ಗುರಿಗೆ ಮುದೋಳ ತಳಿ ಬಲಿ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ನಾಯಕರು ಸಾಕಿದ ನಾಯಿ ನಾಪತ್ತೆ: ಹಂದಿಗೆ ಹಾಕಿದ ಗುರಿಗೆ ಮುದೋಳ ತಳಿ ಬಲಿ!

AchyutKumar by AchyutKumar
in ಸ್ಥಳೀಯ

ಕುಮಟಾ: ಗೋಕರ್ಣದ ಗೊನೆಹಳ್ಳಿಯ ಮಳಲಿಯ `ನಾಯಕ’ರು ಪ್ರೀತಿಯಿಂದ ಮುದೋಳ ನಾಯಿಯನ್ನು ಸಾಕಿದ್ದರು. ಅವರ ಮನೆ-ತೋಟದ ರಕ್ಷಣೆಗಾಗಿ ಶ್ರಮಿಸುತ್ತಿದ್ದ ಆ ನಾಯಿ ಕಳೆದ ಮೂರು ದಿನಗಳಿಂದ ಕಾಣುತ್ತಿಲ್ಲ.

ಮಗುವಿನ ಹಾಗೇ ಸಾಕಿದ್ದ ನಾಯಿ ಕಾಣೆಯಾಗಿದ್ದರಿಂದ ಆ ನಾಯಕರು ದಿಕ್ಕೆಟ್ಟಿದ್ದರು. ಅವರಿವರ ಮನೆಗಳಿಗೆ ತೆರಳಿ ನಾಯಿ ಬಗ್ಗೆ ವಿಚಾರಿಸಿದ್ದರು. ನಾಯಿ ಕಾಣದ ಬಗ್ಗೆ ಅವರಿವರಲ್ಲಿ ಹೇಳಿಕೊಂಡಿದ್ದರು. ಆದರೂ ನಾಯಿಯ ಸುಳಿವು ಮಾತ್ರ ಸಿಕ್ಕಿರಲಿಲ್ಲ. ನಾಯಿ ಹುಡುಕಾಟಕ್ಕೆ ಸಾಕಷ್ಟು ಕಡೆ ಹುಡುಕಾಟ ನಡೆಸಿದ ಅವರು ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡುವುದು ಮಾತ್ರ ಬಾಕಿ!

`ಆ ನಾಯಿಯನ್ನು ನಾನು ನೋಡಿದ್ದೇನೆ. ಅದು ಹೀಗಾಯಿತು’ ಎಂದು ಅಲ್ಲಿನ ಗೌಡರೊಬ್ಬರು ನಾಯಕರಿಗೆ ಮಾಹಿತಿ ನೀಡಿದ್ದು, ಅದೇ ಮಾಹಿತಿ ಆಧರಿಸಿ ನಾಯಿ ಕಳೆದುಕೊಂಡ ನಾಯಕರು ಮತ್ತೊಬ್ಬ `ನಾಯಕ’ರ ವಿರುದ್ಧ ಪೊಲೀಸ್ ಠಾಣೆಗೆ ದೂರಿದರು. ಕಾಡುಹಂದಿ ಹಿಡಿಯಲು ಅಕ್ರಮವಾಗಿ ಎಳೆದಿದ್ದ ವಿದ್ಯುತ್ ತಂತಿಗೆ ತಗುಲಿ ನಾಯಿ ಸಾವನಪ್ಪಿರುವುದು ಆ ದೂರಿನ ಮುಖ್ಯ ಸಾರಾಂಶ.

ಪೊಲೀಸರು ಸಹ ದೂರು ಆಧರಿಸಿ ನಾಯಿಯ ಹುಡುಕಾಟ ನಡೆಸಿದರು. ಆದರೆ, ನಾಯಿ ಕೊಂದ ನಾಯಕ ಅದನ್ನು ರಹಸ್ಯವಾಗಿ ಮಣ್ಣು ಮಾಡಿದ ಕಾರಣ ನಾಯಿಯ ಶವ ಸಿಕ್ಕಿಲ್ಲ. ಎಲ್ಲಿ ಹೂತಿದ್ದೇನೆ ಎಂದು ಸಹ ಆತ ಎಷ್ಟು ಬಾರಿ ಪ್ರಶ್ನಿಸಿದರೂ ಬಾಯಿ ಬಿಟ್ಟಿಲ್ಲ. ಎಲ್ಲರಿಗೂ ಆ ನಾಯಕ ಕೆಲಸದ ಬಗ್ಗೆ ಗೊತ್ತಿದ್ದರೂ ಆತನೇ ನಾಯಿ ಕೊಂದ ಬಗ್ಗೆ ಯಾವುದೇ ಆಧಾರವಿಲ್ಲ. ಅರಣ್ಯ ಕಾನೂನು ಉಲ್ಲಂಘಿಸಿ ಕಾಡುಹಂದಿ ಹತ್ಯೆಗೆ ಅಕ್ರಮ ವಿದ್ಯುತ್ ತಂತಿ ಎಳೆದ ಬಗ್ಗೆಯೂ ದಾಖಲೆ ಸಿಕ್ಕಿಲ್ಲ.

ನಾಯಿ ಶವ ಸಿಕ್ಕಿದ್ದರೆ ಮಾತ್ರ ಪ್ರಕರಣ ದಾಖಲಿಸಬಹುದು ಎಂದು ಪೊಲೀಸರು ದೂರುದಾರರಿಗೆ ಹೇಳಿದರು. ಶವ ಸಿಕ್ಕರೆ ಮರಣೋತ್ತರ ಪರೀಕ್ಷೆ ಮೂಲಕ ಅಕ್ರಮ ವಿದ್ಯುತ್ ಎಳೆದಿರುವಿಕೆ ಹಾಗೂ ಕಾಡುಪ್ರಾಣಿ ಹತ್ಯೆಯ ಎರಡು ಪ್ರಕರಣಗಳು ಕಳ್ಳ ನಾಯಕನ ಮೇಲೆ ಬರುತ್ತಿದ್ದವು. ಇದರೊಂದಿಗೆ ನಾಯಿ ಕಳೆದುಕೊಂಡವರ ಮೂರನೇ ದೂರು ಸಹ ಆತನ ವಿರುದ್ಧ ದಾಖಲಾಗುತ್ತಿತ್ತು. ಸಾಕ್ಷಿ ಸಿಗದ ಕಾರಣ ಕೊನೆಗೆ ರಾಜಿಸೂತ್ರದ ಮೂಲಕ ಈ ಪ್ರಕರಣ ಬಗೆಹರಿಯಿತು. ಆದರೆ, ನಾಯಿ ಕಳೆದುಕೊಂಡ ನೋವು ನಾಯಕರಿಂದ ದೂರವಾಗಿಲ್ಲ.

ShareSendTweetShare
Previous Post

ಸತ್ತವನ ಪರ್ಸಿನಲ್ಲಿ ಸಾವಿನ ರಹಸ್ಯ: ಸಾಲ ಕೊಟ್ಟವರಿಗೆ ಮರಳಿ ಸಿಕ್ಕಿದ್ದು ಚಾಲಕನ ಶವ!

Next Post

ಬೈಕಿಗೆ ಗುದ್ದಿದ ಕಾರು: ಬೈಕ್ ಸವಾರ ಸಾವು

Next Post

ಬೈಕಿಗೆ ಗುದ್ದಿದ ಕಾರು: ಬೈಕ್ ಸವಾರ ಸಾವು

ದನ ಮೇಯಿಸಲು ಹೋದವ ಆತ್ಮಹತ್ಯೆಗೆ ಶರಣಾದ

ಸ್ಮಶಾನ ಸ್ವಚ್ಛತೆ ನಂತರ ರುದ್ರಭೂಮಿ ಅಭಿವೃದ್ಧಿ ಅಭಿಯಾನ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.