ಉರಗ ಮಿಲನಕ್ಕೆ ಅಯ್ಯಪ್ಪನಗರ ಸೂಕ್ತ!
ಶಿರಸಿಯ ಅಯ್ಯಪ್ಪನಗರದಲ್ಲಿ ಎರಡು ಜೋಡಿ ಹಾವುಗಳ ಮಿಲನ ಕಂಡು ಬಂದಿದೆ. ಮನೆ ಬಳಿ ಹಾವು ಬಂದಿರುವುದನ್ನು ನೋಡಿದ ಜನ ಉರಗ ತಜ್ಞರಿಗೆ ಪೋನ್ ಮಾಡಿದ್ದು, ಆ ಕಾಡನ್ನು ತಜ್ಞರು ಕಾಡಿಗೆ ಬಿಟ್ಟಿದ್ದಾರೆ. ಗುರುವಾರ ಅಯ್ಯಪ್ಪ ನಗರದ ಉಮೇಶ ನಾಯ್ಕ ಅವರ ಮನೆ…
ಕಷ್ಟದ ಮೇಲೆ ಕಷ್ಟ: ಬಡವರ ಮನೆ ಬೆಂಕಿಯ ಸಿಡಿಲು!
ಶಿರಸಿಯ ಬಿಸಿಲಕೊಪ್ಪದಲ್ಲಿ ಮನೆಯೊಂದು ಬೆಂಕಿಗೆ ಆಹುತಿಯಾಗಿದೆ. ಪರಿಣಾಮ ಮೂಡೆಬೈಲಿನ ಗಿರಿಜಾ ನಾಯ್ಕ ಅವರ ಕುಟುಂಬಕ್ಕೆ ಸೂರಿಲ್ಲವಾಗಿದೆ. ಕಳೆದ ಮಳೆಗಾಲದ ವೇಳೆ ಗಿರಿಜಾ ನಾಯ್ಕ ಅವರ ಮನೆ ಮುರಿದು ಬಿದ್ದಿತ್ತು. ಸರ್ಕಾರದ ಸಹಾಯವೂ ಇಲ್ಲದೇ ಅವರು ಮನೆ ದುರಸ್ಥಿ ಮಾಡಿಕೊಂಡಿದ್ದರು. ಮಳೆ ಬಂದಾಗ…
ಸರ್ವೆ ಸಿಬ್ಬಂದಿಯಿಂದ ಜಾಗೃತಿ ಯುದ್ಧ: ಪಾಪಿಸ್ತಾನಕ್ಕೆ ಪರ್ಯಾಯ ಪಾಠ!
ಕಾಶ್ಮೀರದಲ್ಲಿ ನಡೆದ ಭಯೋತ್ಪಾದನಾ ದಾಳಿ ಖಂಡಿಸಿ ಅಂಕೋಲಾದಲ್ಲಿ ಕೆಲಸ ಮಾಡುವ ಸರ್ಕಾರಿ ಸಿಬ್ಬಂದಿಯೊಬ್ಬರು ವಿಭಿನ್ನವಾಗಿ ಜನ ಜಾಗೃತಿ ನಡೆಸುತ್ತಿದ್ದಾರೆ. ಭೂ ಮಾಪನಾ ಇಲಾಖೆಯ ನೌಕರ ರಾಘವ ನಾಯಕ ಅವರು ಅಂಕೋಲಾದ ಹಲವು ಕಡೆ ಪಾಕಿಸ್ತಾನದ ವಿರುದ್ಧ ಚಿತ್ರ ಬಿಡಿಸಿದ್ದಾರೆ. ಪಾಕಿಸ್ತಾನದವರನ್ನು ಅಶ್ಲೀಲ…
ಬೆಳೆಸಾಲ | ಸಹಕಾರಿ ಸಂಘದಲ್ಲಿ ಗೊಂದಲ: ಶಾಸಕರ ಮಧ್ಯಸ್ಥಿಕೆಯಲ್ಲಿ ಸಭೆ
ಶಿರಸಿಯ ದಾನಕೊಪ್ಪದ ಕಾಳoಗಿ ಸೇವಾ ಸಹಕಾರಿ ಸಂಘದಲ್ಲಿ ಭಿನ್ನಮತ ಕಾಣಿಸಿಕೊಂಡ ಹಿನ್ನಲೆ ಕೆಡಿಸಿಸಿ ಅಧ್ಯಕ್ಷರೂ ಆಗಿರುವ ಶಿವರಾಮ ಹೆಬ್ಬಾರ್ ವಿಶೇಷ ಸಭೆ ನಡೆಸಿದ್ದಾರೆ. ಬೆಳೆ ಸಾಲ ತುಂಬಲು ಏಪ್ರಿಲ್ 30 ಕೊನೆ ದಿನವಾಗಿದ್ದು, ಈ ಅವಧಿ ವಿಸ್ತರಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.…
ಲಾರಿಗೆ ಗುದ್ದಿದ ರಾಸಾಯನಿಕ ಟ್ಯಾಂಕರ್: ಚಾಲಕರಿಬ್ಬರಿಗೂ ಮರುಜೀವ!
ಯಲ್ಲಾಪುರದ ಅರಬೈಲ್ ಘಟ್ಟದಲ್ಲಿ ರಾಸಾಯನಿಕ ತುಂಬಿದ ಟ್ಯಾಂಕರ್ ಹಾಗೂ ಜಲ್ಲಿಕಲ್ಲು ತುಂಬಿದ ಲಾರಿಯು ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಎರಡು ವಾಹನ ಚಾಲಕರು ಲಾರಿಯಲ್ಲಿ ಸಿಕ್ಕಿಬಿದ್ದು ಗಾಯಗೊಂಡರು. ಅಂಕೋಲಾ – ಹುಬ್ಬಳ್ಳಿ ಮಾರ್ಗವಾಗಿ ತೆರಳುತ್ತಿದ್ದ ಎಥನೋಲ್ ತುಂಬಿದ ಟ್ಯಾಂಕರ್ ಇಳಿಜಾರಿನಲ್ಲಿ…
ಅಂಗವಿಕಲನ ಅಂತರಾಳ: ತಾಯಿ – ಮಗುವಿನ ಜೀವ ಕಾಪಾಡಿದ ಅಬ್ದುಲ್ಲ!
ಎರಡು ಕಾಲು ಕಳೆದುಕೊಂಡರೂ ಸ್ವಾವಲಂಬಿ ಬದುಕಿಗಾಗಿ ಗೂಡಂಗಡಿ ನಡೆಸುವ ದಾಂಡೇಲಿಯ ಅಬ್ದುಲ್ ಸತ್ತರ್ ಅವರು ರಕ್ತಸ್ರಾವದಿಂದ ಬಳಲುತ್ತಿರುವ ಬಾಣಂತಿಗೆ ರಕ್ತ ನೀಡುವ ಮೂಲಕ ಎರಡು ಜೀವ ಕಾಪಾಡಿದ್ದಾರೆ. ದಾಂಡೇಲಿಯ ವನಶ್ರೀ ನಗರದಲ್ಲಿ ಗೂಡಂಗಡಿ ಹೊಂದಿರುವ ಅಬ್ದುಲ್ ಸತ್ತಾರ್ ಅವರು ಬಾಲ್ಯದಲ್ಲಿಯೇ ತಮ್ಮ…
ಹೆದ್ದಾರಿ ಅಧಿಕಾರಿಗಳಿಗೆ ನದಿ ಹೂಳೆತ್ತುವ ಕೆಲಸ!
ಅಂಕೋಲಾದ ಶಿರೂರು ಬಳಿ ಸಂಭವಿಸಿದ್ದ ಗುಡ್ಡ ಕುಸಿತದಿಂದಾಗಿ ಗಂಗಾವಳಿ ನದಿಯಲ್ಲಿ ಶೇಖರಗೊಂಡಿರುವ ಮಣ್ಣು ತೆರವು ಕಾರ್ಯವನ್ನು ಕೂಡಲೇ ಕೈಗೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಬಂದರು ಇಲಾಖೆಯ ಆಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಸೂಚನೆ ನೀಡಿದ್ದಾರೆ. ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ…
ನೀರಿಗೆ ಬಿದ್ದು ಜೀವಬಿಟ್ಟ ಗಂಗಾವಳಿಯ ಮೀನುಗಾರ
ಅಂಕೋಲಾದ ತಿಮ್ಮಣ್ಣ ಹರಿಕಂತ್ರ ಮೀನುಗಾರಿಕೆಗೆ ತೆರಳಿದ ವೇಳೆ ಸಾವನಪ್ಪಿದ್ದಾರೆ. ಅಂಕೋಲಾ ಹಿಚ್ಕಡದ ದಂಡೆಭಾಗದಲ್ಲಿ ತಿಮ್ಮಣ್ಣ ಹರಿಕಂತ್ರ (74) ಅವರು ವಾಸವಾಗಿದ್ದರು. ಅವರು ಮೀನುಗಾರಿಕೆ ನಡೆಸಿ ಬದುಕು ಕಟ್ಟಿಕೊಂಡಿದ್ದರು. ಏಪ್ರಿಲ್ 28ರಂದು ತಮ್ಮ ಮನೆ ಹಿಂದಿನ ಗಂಗಾವಳಿ ನದಿಗೆ ಹೋಗಿದ್ದ ಅವರು ನೀರಿನಲ್ಲಿ…
ಲಕ್ಷ ಲಕ್ಷ ದುಡಿಯುವ ಕನಸು: ಆಮೀಷಕ್ಕೆ ಬಲಿಯಾದ ಬ್ಯಾಂಕ್ ನೌಕರನಿಗೆ ಪಂಗನಾಮ!
ಮನೆಯಲ್ಲಿ ಕುಳಿತು ಕಾಸು ಸಂಪಾದಿಸುವ ಯೋಚನೆಗೆ ಬಿದ್ದ ಶಿರಸಿಯ ಮಂಜುನಾಥ ಹೆಗಡೆ ಅವರು ತಾವು ದುಡಿದ ಹಣವನ್ನು ಕಳೆದುಕೊಂಡಿದ್ದಾರೆ. ತಮಗಾದ ಅನ್ಯಾಯದ ಬಗ್ಗೆ ಅವರು ಇದೀಗ ಪೊಲೀಸರ ಮೊರೆ ಹೋಗಿದ್ದಾರೆ. ಶಿರಸಿ ಹುತ್ಕಾರ ಬಳಿಯ ಮಣಜವಳ್ಳಿ ಶಾಂತಿನಗರದ ಮಂಜುನಾಥ ಹೆಗಡೆ ಅವರು…
ದಾರಿಗಾಗಿ ದಾಯಾದಿ ಕಲಹ: ನ್ಯಾಯಕ್ಕಾಗಿ ಅಂಗಲಾಚಿದ ವೃದ್ಧ ದಂಪತಿ!
ಅoಕೋಲಾದ ಕೊಡ್ಲಗದ್ದೆಯಲ್ಲಿ ಅನಾಧಿಕಾಲದಿಂದಲೂ ಸಂಚರಿಸುತ್ತಿದ್ದ ಕಾಲುದಾರಿಯ ಓಡಾಟದ ವಿಷಯವಾಗಿ ಅಕ್ಕ-ಪಕ್ಕದಮನೆಯವರ ನಡುವೆ ಗಲಾಟೆ ನಡೆದಿದ್ದು, ಈ ಗಲಾಟೆಯಲ್ಲಿ ಸುಬ್ರಾಯ ಗಾಂವ್ಕರ್ ಗಾಯಗೊಂಡಿದ್ದಾರೆ. ಕೊಡ್ಲಗದ್ದೆಯ ಸುಬ್ರಾಯ ಗಾಂವ್ಕರ್ ಅವರು ಅನಾರೋಗ್ಯಕ್ಕೀಡಾಗಿದ್ದಾರೆ. ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬಗ್ಗೆ ಅರಿವಿದ್ದರೂ ಪಕ್ಕದಮನೆಯ ರಾಜೇಶ ಗಾಂವ್ಕರ್…
















