ಯಲ್ಲಾಪುರ ಹೆದ್ದಾರಿಯಲ್ಲಿ ಹಂದಿ ಕಾಟ!
ಯಲ್ಲಾಪುರದ ಡೊಮಗೇರಿಯಿಂದ ಹುಲಿಗನಕೊಪ್ಪ ಕಡೆ ಹೋಗಬೇಕಿದ್ದ ಬೈಕಿಗೆ ಹಂದಿ ಡಿಕ್ಕಿಯಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಧಾರವಾಡದ ಸಂಜು ಯಮ್ಮಿ ಹಾಗೂ ಕಿರವತ್ತಿ ಖಾರೆವಾಡದ ರೊಂಗು ಕೊಕ್ಕರೆ ಮಾರ್ಚ 25ರ ರಾತ್ರಿ ಬೈಕಿನಲ್ಲಿ ಹೋಗುತ್ತಿದ್ದರು. ರಾತ್ರಿ 8.30ರ ಆಸುಪಾಸಿಗೆ ಡೊಮಗೇರಿ ಕ್ರಾಸಿನ ಬಳಿ ಹಂದಿ…
ಕಳಪೆ ಕಾಮಗಾರಿ: ಶಿರಸಿ ಶಾಸಕರ ಕೈ’ಗೆ ಅಂಟಿದ ರಸ್ತೆ ಡಾಂಬರು!
ಶಿರಸಿ-ಸಿದ್ದಾಪುರ ಗ್ರಾಮೀಣ ಭಾಗದಲ್ಲಿ ಸಂಚಾರ ನಡೆಸಿದ ಶಾಸಕ ಭೀಮಣ್ಣ ನಾಯ್ಕ ಅವರು ರಸ್ತೆಗೆ ಹಾಕಲಾದ ಡಾಂಬರಿನ ಬಗ್ಗೆ ಅಸಮಧಾನವ್ಯಕ್ತಪಡಿಸಿದ್ದಾರೆ. `ನನ್ನ ಕ್ಷೇತ್ರದಲ್ಲಿ ಕಳಪೆ ಕಾಮಗಾರಿಗೆ ಅವಕಾಶವಿಲ್ಲ’ ಎಂದು ಸಾರಿದ ಅವರು ಮರುಡಾಂಬರೀಕರಣಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಸೋಮವಾರ ಶಾಸಕ ಭೀಮಣ್ಣ ನಾಯ್ಕ…
`ಅಂಬೇಡ್ಕರ್ ತೋರಿಸಿದ ದಾರಿಯಲ್ಲಿ ನಾವು.. ನೀವು!
`ಸರ್ಕಾರಿ ಕಚೇರಿಗಳಲ್ಲಿ ಬಿ ಆರ್ ಅಂಬೇಡ್ಕರ್ ಅವರ ಫೋಟೋ ಅಳವಡಿಸದರೆ ಸಾಲದು. ಆ ಭಾವಚಿತ್ರದ ಅಡಿ ಕೆಲಸ ನಿರ್ವಹಿಸುವ ಪ್ರತಿಯೊಬ್ಬ ನೌಕರರು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಿ, ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು’ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಹೇಳಿದ್ದಾರೆ.…
ದುಪ್ಪಟ್ಟು ದುಡ್ಡು ಕೊಟ್ಟರೂ ಸಿಗದು ಈ ರುಚಿ: ಅಪ್ಪೆ ಮಿಡಿತ!
ಮಲೆನಾಡಿನಲ್ಲಿ ಮಾವಿನಕಾಯಿ ಹಂಗಾಮು ಪೂರ್ವದಲ್ಲಿಯೇ ಅಪ್ಪೆಮಿಡಿಗಾಗಿ ಹುಡುಕಾಟ ಶುರುವಾಗುತ್ತದೆ. ಪರಿಚಯಸ್ಥರ ಬಳಿ `ನನಗೆ ಇಷ್ಟು ಮಿಡಿ ಬೇಕು’ ಎಂಬ ಮುಂಗಡ ಬುಕ್ಕಿಂಗ್ ಸಹ ನಡೆಯುತ್ತದೆ. ಆದರೆ, `ಬೇಡಿಕೆಗೆ ತಕ್ಕ ಬೆಲೆ ಇದ್ದರೂ ಅಪ್ಪೆಮಿಡಿ ಮಾತ್ರ ಆ ಪ್ರಮಾಣದಲ್ಲಿ ಸಿಗುತ್ತಿಲ್ಲ’ ಎಂಬುದು ಪ್ರತಿ…
ಕಳ್ಳ.. ಮಳ್ಳ.. ಸುಳ್ಳ: ಕಾರವಾರದಲ್ಲಿ ಸಿಕ್ಕಿಬಿದ್ದ ಜೊಯಿಡಾದ ಕಳ್ಳ!
ಕಾರವಾರದ ಅಸ್ನೋಟಿಯ ಮನೆಯೊಂದಕ್ಕೆ ನುಗ್ಗಿ ಕಳ್ಳತನ ನಡೆಸಿದ್ದ ಜೊಯಿಡಾದ ಸಮೀರ ದೇಸಾಯಿ ಸಿಕ್ಕಿ ಬಿದ್ದಿದ್ದು, ಸಾರ್ವಜನಿಕರು ಸಮೀರ ದೇಸಾಯಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ನಂತರ ಪೊಲೀಸರು ಆಗಮಿಸಿ ಸಮೀರ್ ದೇಸಾಯಿ ಅವರನ್ನು ವಶಕ್ಕೆಪಡೆದಿದ್ದಾರೆ. ಅಸ್ನೋಟಿಯ ಸುರಕ್ಷಾ ಸಾಳುಂಕೆ ಎಂಬಾತರ ಮನೆಯಲ್ಲಿ ಈಚೆಗೆ ಕಳ್ಳತನ…
ರೆಸಾರ್ಟಿನಲ್ಲಿ ಮೋಜು-ಮಸ್ತಿ: ಈಜುಕೊಳದಲ್ಲಿ ಮುಳುಗಿದ ಬಾಲಕ ಇನ್ನಿಲ್ಲ!
ಜೊಯಿಡಾ ತಾಲೂಕಿನ ಗಣೇಶ ಗುಡಿಯ ಬಾಡಗುಂದದ ರೆಸಾರ್ಟಿನ ಈಜುಕೊಳದಲ್ಲಿ 6 ವರ್ಷದ ಬಾಲಕ ಸಾವನಪ್ಪಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಬೆಳಗಾವಿಯ ಕುಟುಂಬವೊoದು ಜೊಯಿಡಾ ಪ್ರವಾಸಕ್ಕೆ ಬಂದಿತ್ತು. ಅಶೋಕ ಹೋಂ ಸ್ಟೇ ಎಂಬಲ್ಲಿ ಆ ಕುಟುಂಬವಾಸವಾಗಿತ್ತು. ಹುಸೇನೈನ್ ರಹೀಮ್ ಖಾನ್ ಎಂಬ…
ದನಗರಗೌಳಿ ಸಮಾಜಕ್ಕೆ ಹೆಮ್ಮೆ ಮುಡಿಸಿದ ವಿದ್ಯಾರ್ಥಿನಿ: ಓದಿಗೆ ಅಡ್ಡಿಯಾಗದ ಬಡತನ!
ಆರ್ಥಿಕ ಪರಿಸ್ಥಿತಿಯ ಅನಾನುಕೂಲತೆ ನಡುವೆಯೂ ಧನಗರಗೌಳಿ ಸಮಾಜದ ಲಕ್ಷ್ಮೀ ಪಾಂಡ್ರಮಿಸೆ ಅವರು ಪಿಯುಸಿ ಪರೀಕ್ಷೆಯಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಈಚೆಗೆ ಪ್ರಕಟವಾದ ಪಿಯು ಪರೀಕ್ಷೆಯಲ್ಲಿ ಲಕ್ಷ್ಮೀ ಪಾಂಡ್ರಮಿಸೆ ಅವರು ಶೇ 91.5ರ ಫಲಿತಾಂಶ ದಾಖಲಿಸಿದ್ದಾರೆ. ಲಕ್ಷ್ಮೀ ಪಾಂಡ್ರಮಿಸೆ ಅವರು ಯಲ್ಲಾಪುರ ತಾಲೂಕಿನ…
ಅಪಾಯಕಾರಿ ಕಾರು ಚಾಲನೆ: ರೀಲ್ಸ್ ಮಾಡಲು ಹೋದವರ ವಿರುದ್ಧ ಕೇಸು!
ಚಲಿಸುತ್ತಿದ್ದ ಕಾರಿನಲ್ಲಿ ಸ್ಟಂಟ್ ಮಾಡಿದ ಕಾರಣ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಏಳು ಜನರ ವಿರುದ್ಧ ಸೂಳ್ಯ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಏಪ್ರಿಲ್ 5ರಂದು ವ್ಯಕ್ತಿಯೊಬ್ಬರು ಈ ವಿಡಿಯೋವನ್ನು ಹಂಚಿಕೊoಡಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಭಾರೀ ಪ್ರಮಾಣದಲ್ಲಿ ವೈರಲ್ ಆಗಿತ್ತು.…
ಹಾಲಕ್ಕಿ ಹಗರಣ: ಬೊಂಬೆ ಜೊತೆ ಹೆಜ್ಜೆ ಹಾಕಿದ ವಿದೇಶಿ ಬೊಂಬೆ!
ಬ್ರಿಟೀಷರ ದಬ್ಬಾಳಿಕೆ, ಜಾತಿ ಪದ್ಧತಿ, ಸಾಮಾಜಿಕ ಅಸಮಾನತೆ ಹಾಗೂ ಆಡಳಿತದಲ್ಲಿನ ಅಂಕು-ಡೊoಕುಗಳ ಬಗ್ಗೆ ಅಧಿಕಾರದಲ್ಲಿರುವವರಿಗೆ ಅರಿವು ಮೂಡಿಸುವುದಕ್ಕಾಗಿ ಹಾಲಕ್ಕಿ ಸಮುದಾಯದವರು ಕಂಡುಕೊoಡಿದ್ದ ದಾರಿ `ಹಗರಣ’ ಪರಕೀಯರ ಭಾಷೆ ಬಾರದ ಹಾಲಕ್ಕಿ ಜನ `ಹಗರಣ’ದ ಮೂಲಕ ಸಮಾಜದಲ್ಲಿನ ಅಂಕು-ಡೊoಕುಗಳ ಬಗ್ಗೆ ಮನವರಿಕೆ ಮಾಡುತ್ತಿದ್ದರು.…
ದುಡಿಯುವ ಮಗನ ದುಡುಕು ನಿರ್ಧಾರ: ಸಿದ್ದಿ ಹುಡುಗನ ಸಾವಿನಲ್ಲಿ ಅನುಮಾನ!
ಒಳ್ಳೆಯ ಕಂಪನಿ, ಉತ್ತಮ ವೇತನದಲ್ಲಿದ್ದರೂ ಮಾನಸಿಕ ನೆಮ್ಮದಿಯಿಲ್ಲದ ಕಾರಣ ಯಲ್ಲಾಪುರದ ಸ್ವಪ್ನಲ್ ಸಿದ್ದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಯಲ್ಲಾಪುರದ ಕಿರವತ್ತಿಯ ಇಂದಿರಾನಗರದಲ್ಲಿ ಸ್ವಪ್ನಲ್ ಲಾರೆನ್ಸ್ ಸಿದ್ದಿ ವಾಸವಾಗಿದ್ದರು. 23 ವರ್ಷದ ಅವರಿಗೆ ಬೆಂಗಳೂರಿನ ಕಂಪನಿ ಉದ್ಯೋಗ ನೀಡಿತ್ತು. ಅಲ್ಲಿ ಕಷ್ಟಪಟ್ಟು ದುಡಿದು ಸಂಪಾದಿಸುತ್ತಿದ್ದ…
















