ಅಡಿಕೆ ಕಳ್ಳರಿಬ್ಬರು ಅರೆಸ್ಟ್!
ಶಿರಸಿಯ ಅಡಿಕೆ ವ್ಯಾಪಾರಿ ಹಾರಿಸ್ ಖಾನ್ ಅವರ ಅಡಿಕೆ ಗೋದಾಮಿನ ಬಾಗಿಲು ಒಡೆದು ಅಡಿಕೆ ಕದ್ದಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಹಾರಿಸ್ ಖಾನ್ ಅವರ ಒಡೆತನದಲ್ಲಿರುವ ಸಲಮಾತನಗರ ಕೆಳಗಿನಗುಡ್ಡದಮನೆಯ `ಅರ್ಕನೆಟ್ ಟೇಡರ್ಸ’ನಲ್ಲಿ 2024ರ ಡಿಸೆಂಬರ್ 24ರ ಅವಧಿಯಲ್ಲಿ ಎರಡು ಕ್ವಿಂಟಲ್ ಅಡಿಕೆ…
ಪ ಪಂ ಸಭೆಯ ನಿರ್ಣಯ: ಪ್ರತಿ ವಾರ್ಡಿಗೂ ನೀರು ಸರಬರಾಜು ಸಮಿತಿ
ಯಲ್ಲಾಪುರ ಪಟ್ಟಣದಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮಂಜುನಾಥ ನಗರದ ಸದಸ್ಯ ಸತೀಶ ನಾಯ್ಕ ಚರ್ಚಿಸಿದ್ದಾರೆ. ನೀರು ಪೊಲಾಗದಂತೆ ತಡೆಯುವುದು, ಸೂಕ್ತ ರೀತಿ ನೀರು ಹಂಚಿಕೆ ಹಾಗೂ ನೀರಿನ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕುರಿತು ಅವರು ಪ ಪಂ…
ಯಲ್ಲಾಪುರ ಜಾತ್ರೆ: 9 ದಿನದಲ್ಲಿ 11.88 ಲಕ್ಷ ರೂ ಅಕ್ರಮ!
ಆರು ಸಭೆ, ಅನೇಕ ಹೋರಾಟ, ಸಾಕಷ್ಟು ಕಚ್ಚಾಟ-ವಾಗ್ವಾದ, ಪ್ರತಿಭಟನೆ ನಂತರ ಯಲ್ಲಾಪುರ ಪಟ್ಟಣ ಪಂಚಾಯತವೂ ಹಿಂದಿನ ಜಾತ್ರೆ ಲೆಕ್ಕಾಚಾರವನ್ನು ಸದಸ್ಯರ ಮುಂದಿಟ್ಟಿದೆ. ಮೇಲ್ನೋಟಕ್ಕೆ 11.88 ಲಕ್ಷ ರೂ ಅವ್ಯವಹಾರ ನಡೆದಿರುವುದು ಗಮನಕ್ಕೆ ಬಂದಿದೆ. ಉತ್ತರ ಕನ್ನಡ ಜಿಲ್ಲಾಡಳಿತದ ಮಟ್ಟದಲ್ಲಿ ಈ ಅವ್ಯವಹಾರದ…
ಪೊಲೀಸ್ ಅಧಿಕಾರಿಯ ದುರಂತ ಸಾವು: ಮನೆ ಪ್ರವೇಶ ಸಡಗರದಲ್ಲಿರುವಾಗಲೇ ಸೂತಕ!
ಕಾರವಾರದ ಸದಾಶಿವಗಡದಲ್ಲಿ ಹೊಸ ಮನೆ ನಿರ್ಮಿಸಿಕೊಂಡಿದ್ದ ನಿವೃತ್ತ ಪೊಲೀಸ್ ಅಧಿಕಾರಿ ರಮೇಶ ರಾಣೆ, ಅದೇ ಮನೆ ಮಹಡಿಯಿಂದ ಬಿದ್ದು ಸಾವನಪ್ಪಿದ್ದಾರೆ. ರಮೇಶ ರಾಣೆ ಅವರು ಮಹಾರಾಷ್ಟದಲ್ಲಿ ಪೊಲೀಸ್ ಉಪನಿರೀಕ್ಷಕರಾಗಿದ್ದರು. ಎರಡು ವರ್ಷದ ಹಿಂದೆ ಅವರು ನಿವೃತ್ತರಾಗಿದ್ದರು. ನಿವೃತ್ತಿ ನಂತರ ಊರಾದ ಸದಾಶಿವಗಡದ…
ಪೊಲೀಸ್ ಠಾಣೆ ಎದುರು ಸ್ವಾಮೀಜಿ ಪ್ರತಿಭಟನೆ!
ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿದ್ದ ಐಆರ್ಬಿ ಕಂಪನಿಯ ಎಂಟು ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸುವಂತೆ ನ್ಯಾಯಾಲಯದ ಆದೇಶ ಹೊರಡಿಸಿದರೂ ಮೌನವಾಗಿರುವ ಪೊಲೀಸರ ವಿರುದ್ಧ ಪ್ರಣವಾನಂದ ಸ್ವಾಮೀಜಿ ಕಿಡಿಕಾರಿದ್ದಾರೆ. ಅಂಕೋಲಾ ಪೊಲೀಸ ಠಾಣೆ ಎದುರು ಅವರು ಮಂಗಳವಾರ…
ಮಾ 30ಕ್ಕೆ ಯುಗಾದಿ ಮೆರವಣಿಗೆ: ಮನೆ ಮನೆಗೂ ಅಕ್ಷತೆ-ಭಗವಾನ್ ಧ್ವಜ!
ಶಿರಸಿ ನಗರದಲ್ಲಿ ಮಾರ್ಚ 30ಕ್ಕೆ ಯುಗಾದಿ ಉತ್ಸವ ಸಮಿತಿಯಿಂದ ಮೆರವಣಿಗೆ ಆಯೋಜಿಸಲಾಗಿದೆ. ಈ ಸಂಘಟನೆ 27ನೇ ವರ್ಷದ ಯುಗಾದಿ ಉತ್ಸವ ಆಚರಿಸುತ್ತಿದ್ದು, ಅತ್ಯಂತ ಸಡಗರದ ಸಿದ್ಧತೆ ನಡೆಯುತ್ತಿದೆ. ಪ್ರತಿಯೊಬ್ಬರ ಮನೆಗೂ ಅಕ್ಷತೆ ನೀಡಿ ಹಬ್ಬದ ಮೆರವಣಿಗೆಗೆ ಆಮಂತ್ರಿಸಲು ಸಮಿತಿ ನಿರ್ಧರಿಸಿದೆ. ಇದರೊಂದಿಗೆ…
ಬಿಯರ್ ಬಾಟಲಿ ಒಡೆದವನ ವಿರುದ್ಧ ಪೊಲೀಸ್ ದೂರು!
ಆರು ತಿಂಗಳ ಹಿಂದೆ ಪತ್ನಿ ಪೀಡಿಸಿದ ಈಶ್ವರ ನಾಯ್ಕರಿಗೆ ವೆಂಕಟೇಶ ನಾಯ್ಕರು ಎಚ್ಚರಿಕೆ ನೀಡಿದ್ದು, ಅದೇ ದ್ವೇಷದಲ್ಲಿದ್ದ ಈಶ್ವರ ನಾಯ್ಕ ಬಿಯರ್ ಬಾಟಲಿಯಿಂದ ವೆಂಕಟೇಶ ನಾಯ್ಕರ ತಲೆಗೆ ಹೊಡೆದಿದ್ದಾರೆ. ಇದರಿಂದ ಬಿಯರ್ ಬಾಟಲಿ ಒಡೆದಿದ್ದು, ವೆಂಕಟೇಶ ನಾಯ್ಕರ ತಲೆ ಜೊತೆ ಹಣೆಗೂ…
ಪತ್ನಿ ಜೊತೆ ಪರ ಪುರುಷ: ಪ್ರಶ್ನಿಸಿದ ಪತಿಗೆ ಗೂಸಾ!
ಕೂಲಿ ಕೆಲಸ ಮಾಡಿಕೊಂಡಿದ್ದ ರಾಜಅಲಿ ಸಾಬ್ ಅವರ ಪತ್ನಿ ರಮಿಸಾ ಪರ ಪುರುಷರ ಜೊತೆ ಮನೆಯಲ್ಲಿದ್ದಾಗ ರಾಜಅಲಿ ಸಾಬ್ ಅದನ್ನು ಪತ್ತೆ ಮಾಡಿದ್ದಾರೆ. ಕೂಡಲೇ ಮನೆಗೆ ಬೀಗ ಹಾಕಿದ ಕಾರಣ ಅವರ ಸಹೋದರರೇ ರಾಜಅಲಿ ಸಾಬ್ ಮೇಲೆ ಕೈ ಮಾಡಿದ್ದಾರೆ. ಹಳಿಯಾಳದ…
ಅಕ್ರಮ ಆಟಕ್ಕೆ ಪರಜಿಲ್ಲೆಯವರ ಪ್ರವೇಶ: ಮೀಸೆ ಮೂಡದ ಹುಡುಗರಿಗೆ ಜೂಜಾಟದ ಹುಚ್ಚು!
ಉತ್ತರ ಕನ್ನಡ ಜಿಲ್ಲೆಯಲ್ಲಿದ್ದ ಅಕ್ರಮ ಜೂಜಾಟ ನಡೆಸುವವರನ್ನು ಹುಡುಕಿದ ಪೊಲೀಸರು ಅಂಥವರ ವಿರುದ್ಧ ನಿರಂತರ ಪ್ರಕರಣ ದಾಖಲಿಸುತ್ತಿದ್ದಾರೆ. ಆದರೆ, ಇದೀಗ ಇಲ್ಲಿನ ಜಾತ್ರೆ-ನಾಟಕಗಳಿಗೆ ಬೇರೆ ಜಿಲ್ಲೆಗಳಿಂದ ಜೂಜಾಟಗಾರರು ಆಗಮಿಸುತ್ತಿರುವುದು ತಲೆಬಿಸಿಗೆ ಕಾರಣವಾಗಿದೆ. ಭಟ್ಕಳ-ಹೊನ್ನಾವರ ಭಾಗದಲ್ಲಿ ನಡೆಯುವ ಜಾತ್ರೆ-ನಾಟಕ-ಯಕ್ಷಗಾನಗಳಿಗೆ ಕುಂದಾಪುರ ಭಾಗದಿಂದ ಗುಡುಗುಡಿ…
ಅನ್ನಭಾಗ್ಯ: ಅಕ್ಕಿ ಕೊಡದಿದ್ದರೆ ಇಲ್ಲಿ ಫೋನ್ ಮಾಡಿ!
`2025ರ ಫೆಬ್ರವರಿ ಹಾಗೂ ಮಾರ್ಚ ತಿಂಗಳ ಅಕ್ಕಿಯನ್ನು ಸರ್ಕಾರ ಒಟ್ಟಿಗೆ ಕೊಡಲು ನಿರ್ಧರಿಸಿದ್ದು, ಪಡಿತರ ಅಂಗಡಿಯಲ್ಲಿ ಅಕ್ಕಿ ಕೊಡದೇ ಇದ್ದರೆ 1967ಗೆ ಫೋನ್ ಮಾಡಿ’ ಎಂದು ಉತ್ತರ ಕನ್ನಡ ಜಿಲ್ಲಾಡಳಿತ ಹೇಳಿದೆ. ಪಡಿತರ ವಿತರಣೆಯಲ್ಲಿ ಯಾವುದೇ ಸಮಸ್ಯೆಯಾದರೂ ದೂರು ನೀಡುವಂತೆ ಫಲಾನುಭವಿಗಳಿಗೆ…
















