ಕೊಳಚೆ ಚರಂಡಿಯಲ್ಲಿ ಕೊಳೆತ ಶವ!
ಸೆಂಟ್ರಿ0ಗ್ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಕುಮಟಾದ ಗಣೇಶ ಹುಲಸ್ವಾರ ಶವ ಕೊಳಚೆ ಚರಂಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಸಿಕ್ಕಿದೆ. ಕುಮಟಾ ಮಾದನಗೇರಿಯ ಹೊಸನಗರದ ಗಣೇಶ ಹುಲಸ್ವಾರ್ (32) ಮಾರ್ಚ 4ರಂದು ಕಾಣೆಯಾಗಿದ್ದರು. ಕೆಲಸಕ್ಕಾಗಿ ಬೆಳ್ತಂಗಡಿಗೆ ಹೋಗುವುದಾಗಿ ಹೇಳಿ ಹೋದ ಅವರು ನಂತರ…
ಉತ್ತರ ಕನ್ನಡ | ಈ ಎಲ್ಲಾ ಊರುಗಳಲ್ಲಿ ಸರಾಯಿ ಮಾರಾಟ-ಸಾಗಾಟ ನಿಷೇಧ!
ಹೋಳಿ ಹಬ್ಬ, ಕಾಮದಹನ ಹಾಗೂ ರಂಗ ಪಂಚಮಿ ಹಿನ್ನಲೆ ಜಿಲ್ಲೆಯ ಹಲವು ಕಡೆ ಮದ್ಯ ಮಾರಾಟ ಹಾಗೂ ಸಾಗಾಟ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಹಬ್ಬದ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಬಾರ್ ಹಾಗೂ ವೈನ್ ಶಾಪ್ ಬಾಗಿಲು ಮುಚ್ಚುವಂತೆ ಸೂಚಿಸಲಾಗಿದೆ.…
ಪದ್ಮಶ್ರೀ ಹೆಸರಿನಲ್ಲಿ ವರ್ಷವಿಡೀ ವನ ಚೇತನ!
ಪದ್ಮಶ್ರೀ ಸುಕ್ರಿ ಗೌಡ ಹಾಗೂ ತುಳಸಿ ಗೌಡ ಅವರ ನೆನಪನ್ನು ಶಾಶ್ವತವಾಗಿರಲು ಮಂಗಳೂರಿನ `ಸಹ್ಯಾದ್ರಿ ಸಂಚಯ’ ತಂಡದವರು ಉತ್ತರ ಕನ್ನಡ ಜಿಲ್ಲೆಯಲ್ಲಿ ವರ್ಷವಿಡೀ `ವನ ಚೇತನ’ ಕಾರ್ಯಕ್ರಮ ನಡೆಸಲು ನಿರ್ಧರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಈ ಇಬ್ಬರು ಸಾಧಕರ ಆದರ್ಶಗಳ…
ಹ್ವಾಯಿ ಇಲ್ಲಿ ಕೇಣಿ: 1 ಲಕ್ಷದ ಬಾಂಡ್ ಕೊಟ್ಟವರಿಗೆ ಮಾತ್ರ ಪ್ರತಿಭಟನೆ ಅವಕಾಶ!
ಅಂಕೋಲಾ ತಾಲೂಕಿನ ಕೇಣಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ಹೀಗಾಗಿ ಇಲ್ಲಿ ಪ್ರತಿಭಟನೆಗೆ ಯಾವುದೇ ಅವಕಾಶವಿಲ್ಲ. ಅದಾಗಿಯೂ ಮೀನುಗಾರರು ಪ್ರತಿಭಟನೆಗೆ ಪಟ್ಟು ಹಿಡಿದ ಹಿನ್ನಲೆ ಮಾರ್ಚ 12ರಂದು ಬೇಲಿಕೇರಿಯಲ್ಲಿ ಪೊಲೀಸ್ ಭದ್ರತೆಯ ಜೊತೆ ಪ್ರತಿಭಟನೆ ನಡೆಸಲು ಅವಕಾಶ ಕೊಡಲಾಗಿದೆ. ಪ್ರತಿಭಟನೆಗೂ…
ಉಸಿರುಗಟ್ಟಿಸುವ ಬಿಸಿ ಗಾಳಿ: ಆರೋಗ್ಯ ಕಾಪಾಡುವುದೇ ದೊಡ್ಡ ಸವಾಲು!
ಉತ್ತರ ಕನ್ನಡ ಜಿಲ್ಲೆಯ ವಾತಾವರಣದಲ್ಲಿ ಈಚೆಗೆ ಸಾಕಷ್ಟು ಬದಲಾವಣೆಗಳಾಗಿದೆ. ನಿತ್ಯ ಬೆಳಗ್ಗೆ 11 ಗಂಟೆ ನಂತರದ ಉಷ್ಣತೆಗೆ ಜನ ತತ್ತರಿಸಿದ್ದಾರೆ. ಮಧ್ಯಾಹ್ನ 3 ಗಂಟೆಯವರೆಗೂ ಭಾರೀ ಪ್ರಮಾಣದ ಬಿಸಿಲು ಬರುತ್ತಿದ್ದು, ಕರಾವಳಿ ಭಾಗದ ಬಹುತೇಕರಿಗೆ ಮನೆಯಿಂದ ಹೊರಬರುವುದೇ ಸಮಸ್ಯೆಯಾಗಿದೆ! `ಕೆಲವು ದಿನಗಳಿಂದ…
ಮದುವೆ ಮನೆಗೆ ಗೋ ಮಾಂಸ: ಗರ್ಭದ ಹಸು ಕೊಂದ ದುರಳರ ಸೆರೆ!
ಮೇವಿಗೆ ತೆರಳಿದ್ದ ಗರ್ಭಿಣಿ ಹಸುವನ್ನು ತುಂಡರಿಸಿದ ದುಷ್ಟರು ಅದರ ಮಾಂಸವನ್ನು ಮದುವೆ ಕಾರ್ಯಕ್ರಮಕ್ಕೆ ಸರಬರಾಜು ಮಾಡಲು 7500ರೂ ಮುಂಗಡ ಹಣ ಪಡೆದಿದ್ದು, ಹೊನ್ನಾವರದಲ್ಲಿ ನಡೆದ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಭಟ್ಕಳದ ಮದುವೆ ಮನೆಗೆ ಮಾಂಸ ಪೂರೈಕೆಯ ಗುತ್ತಿಗೆ…
ಉತ್ತರ ಕನ್ನಡ: 18 ಮಂಗಗಳ ಅಸಹಜ ಸಾವು!
ಮಂಗನ ಕಾಯಿಲೆ ಕುರಿತು ಉತ್ತರ ಕನ್ನಡ ಜಿಲ್ಲಾಡಳಿತ ಸಾಕಷ್ಟು ಮುನ್ನಚ್ಚರಿಕೆವಹಿಸಿದ್ದು, ಅಸಹಜ ಮಂಗಗಳ ಸಾವಿನ ಬಗ್ಗೆ ಅಧ್ಯಯನ ನಡೆಸುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ವರ್ಷ 18 ಮಂಗಗಳು ಅಸಹಜ ರೀತಿಯಲ್ಲಿ ಸಾವನಪ್ಪಿರುವುದು ವರದಿಯಾಗಿದೆ. ಇದರೊಂದಿಗೆ ಶಿರಸಿಯ ವ್ಯಕ್ತಿಯೊಬ್ಬನಲ್ಲಿ ಮಂಗನ ಕಾಯಿಲೆ…
ರಸ್ತೆಯಿಲ್ಲ.. ಶಾಲೆಯಿಲ್ಲ.. ಆಸ್ಪತ್ರೆಯಿಲ್ಲ.. ಸಮಸ್ಯೆ ಹೇಳಲು ಜಿಲ್ಲಾಕೇಂದ್ರಕ್ಕೆ ಬಂದ ಗುಡ್ಡದೂರಿನ ಜನ!
ಅಂಕೋಲಾ ಡೋಂಗ್ರಿ-ಹೆಬ್ಬಾರಗುಡ್ಡದ ಜನ ಸೋಮವಾರ ಕಾರವಾರ ಆಗಮಿಸಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ್ದು, `ಊರಿಗೆ ಕನಿಷ್ಟ ಮೂಲಭೂತ ಸೌಕರ್ಯವನ್ನಾದರೂ ಕಲ್ಪಿಸಿ’ ಎಂದು ಅಳಲು ತೋಡಿಕೊಂಡಿದ್ದಾರೆ. `ಗ್ರಾಮಕ್ಕೆ ತೆರಳಲು ಸರಿಯಾದ ರಸ್ತೆ ಇಲ್ಲ. ರಸ್ತೆಯಿಲ್ಲದ ಕಾರಣ ಸಾರಿಗೆ ವ್ಯವಸ್ಥೆ ಸಹ ಇಲ್ಲ. ಕಂಬ ಎಳೆದರೂ…
ಆ ಲಾರಿ ತುಂಬ ಅಕ್ರಮ ಜಾನುವಾರು ಸಂತೆ!
ಮಹಾರಾಷ್ಟದಿoದ ಭಟ್ಕಳದ ಕಸಾಯಿಖಾನೆಗಳಿಗೆ ಬರುತ್ತಿದ್ದ 13 ಜಾನುವಾರುಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಭಟ್ಕಳ ತಾಲೂಕಿನ ಶಿರಾಲಿ ಚೆಕ್ ಪೋಸ್ಟ್ ಬಳಿ ಲಾರಿ ತಡೆಹಿಡಿದ ಪೊಲೀಸರಿಗೆ ರಾಜಾರೋಷವಾಗಿ ಸಾಗಿಸುತ್ತಿದ್ದ ಜಾನುವಾರುಗಳು ಕಾಣಿಸಿದೆ. ದಾಖಲೆ ಪ್ರಶ್ನಿಸಿದಾಗ ಆ ಲಾರಿಯಲ್ಲಿದ್ದವರ ಬಳಿ ಯಾವ ಕಾಗದ ಪತ್ರಗಳು…
ಕೈಗಾ | ಭದ್ರತಾ ಪಡೆಯಿಂದ ಶಕ್ತಿ ಪ್ರದರ್ಶನ!
ಉರಿಯುತ್ತಿರುವ ಬೆಂಕಿಯ ಒಳಗಡೆ ಸೈನಿಕರ ಹಾರಾಟ.. ಸಿಡಿಮದ್ದುಗಳ ಸದ್ದಿನ ನಡುವೆ ನಾಯಿಗಳ ಚುರುಕು ಓಡಾಟ ಸೇರಿ ಹಲವು ಚಿತ್ರ-ವಿಚಿತ್ರ ಸನ್ನಿವೇಶಗಳು ಸೋಮವಾರ ಕಾರವಾರದ ಕುರ್ನಿಪೇಟೆಯಲ್ಲಿ ಕಾಣಿಸಿದವು. ಕೇಂದ್ರೀಯ ಔದ್ಯೋಗಿಕ ಸುರಕ್ಷಾ ಬಲದ 56ನೇ ಸ್ಥಾಪನಾ ದಿವಸ ಕಾರ್ಯಕ್ರಮದ ಅಂಗವಾಗಿ ಕೈಗಾ ಭದ್ರತಾ…














