ಯಲ್ಲಾಪುರದಲ್ಲಿ ವಿಶ್ವಕರ್ಮ ಜಯಂತ್ಯುತ್ಸವ
ವಿಶ್ವದ ಸೃಷ್ಟಿಗೆ ಮೂಲಕ ಕಾರಣ ವಿಶ್ವಕರ್ಮರು. ಅವರ ಬದುಕು-ಆದರ್ಶಗಳನ್ನು ಎಲ್ಲರೂ ಸ್ಮರಿಸಬೇಕೆಂದು ತಹಸೀಲ್ದಾರ ಚಂದ್ರಶೇಖರ ಹೊಸ್ಮನಿ ಹೇಳಿದರು. ಅವರು ಯಲ್ಲಾಪುರದ ಕಾಳಮ್ಮನಗರದ ಕಾಳಮ್ಮದೇವಿ ಸಭಾಭವನದಲ್ಲಿ ತಾಲೂಕು ಆಡಳಿತ, ವಿಶ್ವಕರ್ಮ ಸಮಾಜ ಅಭಿವೃದ್ಧಿ ಸಂಘ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ವಿಶ್ವಕರ್ಮ ಜಯಂತ್ಯುತ್ಸವ…
ರಂಗೋಲಿಯಲ್ಲಿ ಮೂಡಿದ ಮೋದಿ
ದೇಶದಾದ್ಯಂತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ಬುಧವಾರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮೋದಿ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು, ಮುಖಂಡರು ರಕ್ತದಾನ ಶಿಬಿರ, ಸ್ವಚ್ಛತಾ ಕಾರ್ಯಕ್ರಮ, ಧಾರ್ಮಕ ಕಾರ್ಯಕ್ರಮಗಳು, ದಾನ-ಧರ್ಮಗಳು ಹೀಗೆ ವಿಧಾಯಕ ಕಾರ್ಯಕ್ರಮಗಳ ಮೂಲಕ ಮೋದಿ ಜನ್ಮದಿನವನ್ನು ಸಂಭ್ರಮಿಸುತ್ತಿದ್ದಾರೆ. ಮೋದಿ ಅಭಿಮಾನಿಯಾಗಿರುವ…
ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಟ್ಯಾಂಕರ್ ಟಯರ್ ಗೆ ಬೆಂಕಿ
ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ಡೀಸೆಲ್ ಟ್ಯಾಂಕರ್ ನ ಟಯರ್ ಗೆ ಆಕಸ್ಮಿಕ ಬೆಂಕಿ ತಗುಲಿದೆ. ಡೀಸೆಲ್ ಟ್ಯಾಂಕರ್ ಚಲಿಸುತ್ತಿದ್ದಾಗಲೇ ಏಕಾಏಕಿ ಹಿಂದಿನ ಟಯರ್ ಗೆ ಬೆಂಕಿ ಹೊತ್ತಿಕೊಂಡಿದೆ. ಜೋರಾಗಿ ಉರಿಯುತ್ತಿದ್ದಂತೆ ಚಾಲಕನ ಲಾರಿಯನ್ನು ನಿಲ್ಲಿಸಿದ್ದಾನೆ. ವಿಷಯ ತಿಳಿದ ಪೊಲೀಸರು ಹಾಗೂ…
ದೇವರಕಾಡಿನ ಬಳಿ ಅಮಲಿನಲ್ಲಿ ಮಂಜುನಾಥ!
ಯಲ್ಲಾಪುರ-ಮುಂಡಗೋಡ ರಸ್ತೆಯ ದೇವರಕಾಡು ಬಳಿಯ ಸಾರ್ವಜನಿಕ ಪ್ರದೇಶದಲ್ಲಿ ಗಾಂಜಾ ಸೇವಿಸಿ ಅಮಲಿನಲ್ಲಿದ್ದ ವ್ಯಕ್ತಿಯ ವಿರುದ್ಧ ಎನ್.ಡಿ.ಪಿ.ಎಸ್ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ರವೀಂದ್ರನಗರದ ಮಂಜುನಾಥ ಹನುಮಂತ ಬೋವಿವಡ್ಡರ್ ಎಂಬಾತ ದೇವರಕಾಡು ಹತ್ತಿರ ರಸ್ತೆಯ ಪಕ್ಕ ಗಾಂಜಾ ಸೇವಿಸಿ ಅಮಲಿನಲ್ಲಿದ್ದ. ಈ ವೇಳೆ…
‘ನೂತನ ಸೇತುವೆ ಮಂಜೂರಿಗೆ ನಿಮ್ಮ ಶ್ರಮವೂ ಇದೆ’: ಸೇತುವೆ ಪುನರ್ ನಿರ್ಮಾಣ ಹಕ್ಕೊತ್ತಾಯ ಸಮಿತಿಯಿಂದ ಹೆಬ್ಬಾರರಿಗೂ ಅಭಿನಂದನೆ
ಯಲ್ಲಾಪುರ ತಾಲೂಕಿನ ಗುಳ್ಳಾಪುರ-ಹೆಗ್ಗಾರ ನೂತನ ಸೇತುವೆ ಮಂಜೂರಿಗೆ ಶ್ರಮಿಸಿದ್ದಾರೆಂಬ ಕಾರಣಕ್ಕೆ ಸೇತುವೆ ಪುನರ್ ನಿರ್ಮಾಣ ಹಕ್ಕೊತ್ತಾಯ ಸಮಿತಿಯಯವರು ಯಲ್ಲಾಪುರದಲ್ಲಿ ಶಾಸಕ ಶಿವರಾಮ ಹೆಬ್ಬಾರ ಅವರನ್ನು ಭೇಟಿ ಮಾಡಿ, ಗೌರವಿಸಿ, ಅಭಿನಂದಿಸಿದರು. ಇತ್ತೀಚೆಗಷ್ಟೇ ಸೇತುವೆ ಮಂಜೂರಿಯಲ್ಲಿ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಅವರ ಶ್ರಮ…
ರಸ್ತೆ ದುರಸ್ತಿ ಮಾಡದಿದ್ದರೆ ಪ್ರತಿಭಟನೆ: ಬಿಜೆಪಿ ಮುಖಂಡರ ಎಚ್ಚರಿಕೆ
ಯಲ್ಲಾಪುರ ತಾಲೂಕಿನ ಚಂದಗುಳಿ ಹಾಗೂ ನಂದೊಳ್ಳಿ ಗ್ರಾ.ಪಂ ವ್ಯಾಪ್ತಿಯ ವಿವಿಧ ರಸ್ತೆಗಳ ದುರಸ್ತಿಗೆ ಆಗ್ರಹಿಸಿ ಸ್ಥಳೀಯ ಬಿಜೆಪಿ ಘಟಕಗಳ ನೇತೃತ್ವದಲ್ಲಿ ಗ್ರಾಮಸ್ಥರು ಲೋಕೋಪಯೋಗಿ ಹಾಗೂ ಪಂಚಾಯತರಾಜ್ ಇಂಜನಿಯರಿಂಗ್ ವಿಭಾಗದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಚಂದಗುಳಿ ಗ್ರಾ.ಪಂ ವ್ಯಾಪ್ತಿಯ ಎಪಿಎಂಸಿ-ಗುಂಡ್ಕಲ್ ರಸ್ತೆ, ಮಳಲಗಾಂವ-ಚಂದಗುಳಿ…
ಕಾಣೆಯಾದ ನಂದಿನಿ: ಅಪಹರಣದ ಶಂಕೆ
ಮಂಚಿಕೇರಿ ಸಮೀಪದ ಕೆರೆಹೊಸಳ್ಳಿಯ ಯುವತಿಯೊಬ್ಬಳು ಕಾಣೆಯಾದ ಬಗ್ಗೆ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಚಿಕೇರಿ ಸಮೀಪದ ಕೆರೆಹೊಸಳ್ಳಿಯ ನಂದಿನಿ ಪುಟ್ಟ ಸಿದ್ದಿ ಕಾಣೆಯಾದ ಯುವತಿ. ಈಕೆ ಮನೆಯಿಂದ ಕಳೆದ ಆಗಸ್ಟ್ 7 ರಂದು ಹೋದವಳು ಕಾಣೆಯಾಗಿದ್ದು, ಮರಳಿ ಬಂದಿಲ್ಲ. ಯಾರೋ ಅಪಹರಿಸಿಕೊಂಡು…
ಶ್ರೀಮಾತಾ ಸೌಹಾರ್ದ ಸಹಕಾರಿಗೆ 39.02 ಲಕ್ಷ ರೂ ಲಾಭ
ಉಮ್ಮಚಗಿಯ ಶ್ರೀಮಾತಾ ವಿವಿಧೋದ್ದೇಶ ಸೌಹಾರ್ದ ಸಹಕಾರಿಯು ಕಳೆದ ಆರ್ಥಿಕ ವರ್ಷದಲ್ಲಿ 39.02 ಲಕ್ಷ ರೂ ಲಾಭ ಗಳಿಸಿದೆ ಎಂದು ಅಧ್ಯಕ್ಷ ಜಿ ಎನ್ ಹೆಗಡೆ ಹೀರೇಸರ ಹೇಳಿದರು. ಅವರು ಮಂಗಳವಾರ ಯಲ್ಲಾಪುರ ಶಾಖೆಯಲ್ಲಿ ಸಂಘದ ವಾರ್ಷಿಕ ಪ್ರಗತಿಯ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ…
ಬೀಗಾರಿನಲ್ಲಿ ಜಾಂಬವತಿ ಕಲ್ಯಾಣ
ಯಕ್ಷಗಾನ ಮಲೆನಾಡು ಹಾಗೂ ಕರಾವಳಿ ಭಾಗದ ಜನ-ಜೀವನದ ಅವಿಭಾಜ್ಯ ಅಂಗ. ಆಧುನಿಕ ಭರಾಟೆಗಳಿಂದಾಗಿ ಸಂಪ್ರದಾಯಿಕ ಕಲೆಯ ಪ್ರಸರಣಕ್ಕೆ ಹಿನ್ನೆಡೆ ಉಂಟಾಗುತ್ತಿದೆ ಎಂದು ಹಿರಿಯ ಕಲಾವಿದ ಗ. ನಾ. ಕೋಮಾರ ಹೇಳಿದರು. ಅವರು ಯಲ್ಲಾಪುರ ತಾಲೂಕಿನ ಬೀಗಾರಿನ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನದಲ್ಲಿ…
ಹೋಟೆಲ್ ಮೇಲಿನಿಂದ ಬಿದ್ದ ವಿದೇಶಿಗ
ಆಕಸ್ಮಿಕವಾಗಿ ಹೋಟೆಲ್ ಮೇಲಿನಿಂದ ಬಿದ್ದು ವಿದೇಶಿಗನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಕಾರವಾರದಲ್ಲಿ ನಡೆದಿದೆ. ರಷ್ಯಾ ಮೂಲದ ಡ್ಯುಯಲ್ ಯುಗಾನ್ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯಾಗಿದ್ದಾನೆ. ಆತನನ್ನು ತಕ್ಷಣ ಚಿಕಿತ್ಸೆಗಾಗಿ ಗೋವಾದ ಆಸ್ಪತ್ರೆಗೆ ಸಾಗಿಸಲಾಗಿದೆ. ಈತ ಮಹಡಿಯ ಮೇಲೆ ನಿಂತು ಸಿಗರೇಟ್ ಸೇದುವಾಗ…
















