6

ಶ್ರೀಮಾತಾ ಸೌಹಾರ್ದ ಸಹಕಾರಿಗೆ 39.02 ಲಕ್ಷ ರೂ ಲಾಭ

ಉಮ್ಮಚಗಿಯ ಶ್ರೀಮಾತಾ ವಿವಿಧೋದ್ದೇಶ ಸೌಹಾರ್ದ ಸಹಕಾರಿಯು ಕಳೆದ ಆರ್ಥಿಕ ವರ್ಷದಲ್ಲಿ 39.02 ಲಕ್ಷ ರೂ ಲಾಭ ಗಳಿಸಿದೆ ಎಂದು‌ ಅಧ್ಯಕ್ಷ ಜಿ ಎನ್ ಹೆಗಡೆ ಹೀರೇಸರ ಹೇಳಿದರು.

ಅವರು ಮಂಗಳವಾರ ಯಲ್ಲಾಪುರ ಶಾಖೆಯಲ್ಲಿ ಸಂಘದ ವಾರ್ಷಿಕ ಪ್ರಗತಿಯ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡುತ್ತಿದ್ದರು. ಸಂಘವು ಉಮ್ಮಚಗಿ ಹಾಗೂ ಶಿರಸಿಯಲ್ಲಿ ಅಡಿಕೆ ಖರೀದಿಸುತ್ತಿದ್ದು, ವ್ಯವಹಾರ ಆರಂಭಿಸಿದೆ.

ಯಲ್ಲಾಪುರ, ಮುಂಡಗೋಡ,ಉಮಚಗಿ, ಶಿರಸಿ
ನಾಲ್ಕೂ ಶಾಖೆಗಳು ಲಾಭದಲ್ಲಿದೆ ಎಂದರಹ.‌
ಸಂಘದ ಎಲ್ಲಾ ಶಾಖೆಗಳಲ್ಲಿ ಇ ಸ್ಟಾಂಪಿಂಗ್ ಸೇರಿದಂತೆ ವಿವಿಧ ಸೇವಾ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಸಹಕಾರಿಯ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಧನ ನೀಡಲಾಗುತ್ತದೆ. ಕ್ಯಾನ್ಸರ್ ಪೀಡಿತ ಸದಸ್ಯರಿಗೆ ಅನುಕಂಪ ಪರಿಹಾರ ನೀಡಲಾಗುತ್ತಿದೆ ಎಂದರು.

ಉಪಾಧ್ಯಕ್ಷ ಎಸ್ ಎಸ್ ಭಟ್ಟ ಮಾತನಾಡಿ, ಸಂಘದ ವಾರ್ಷಿಕ ಮಹಾಸಭೆ ಉಮಚಗಿಯಲ್ಲಿ ಸೆ 20 ರಂದು ಮಧ್ಯಾಹ್ನ 3 ಘಂಟೆಗೆ ನಡೆಯಲಿದೆ. ಜ್ಯೋತಿಷಿ ನಾಗೇಂದ್ರ ಭಟ್ಟ ಹಿತ್ಲಳ್ಳಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕ ಶಿವರಾಮ ಹೆಬ್ಬಾರ ಅಧ್ಯಕ್ಷತೆ ವಹಿಸಲಿದ್ದಾರೆ. ಶಿರಸಿ ಶಾಸಕ ಭೀಮಣ್ಣ ನಾಯ್ಕ, ರಾಜ್ಯ ಸೌಹಾರ್ದ ಸಹಕಾರಿ ನಿರ್ದೇಶಕ ಮೋಹನದಾಸ ನಾಯ್ಕ, ಯು ಕೆ ಸೌಹಾರ್ದ ಸೊಸೈಟಿ ಅಧ್ಯಕ್ಷ ಪ್ರಮೋದ ಹೆಗಡೆ, ವಕೀಲ ಶಶಾಂಕ ಹೆಗಡೆ, ಉಮ್ಮಚಗಿ ಸೊಸೈಟಿ ಅಧ್ಯಕ್ಷ ಎಂ ಜಿ ಭಟ್ಟ ಸಂಕದಗುಂಡಿ, ಗ್ರಾಪಂ ಅಧ್ಯಕ್ಷ ಕುಪ್ಪಯ್ಯ ಪೂಜಾರಿ ಭಾಗವಹಿಸುತ್ತಾರೆ ಎಂದರು.

ಇದೇ ವೇಳೆ ಸಹಕಾರಿ ರತ್ನ ಜಿ ಎನ್ ಹೆಗಡೆ ಹೀರೇಸರ ಅವರನ್ನು ಗೌರವಿಸಲಾಗುವುದು. ನಂತರ ಪಂಡಿತ್ ಗಣಪತಿ ಭಟ್ಟ ಹಾಸಣಗಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು.

ನಿರ್ದೇಶಕರಾದ ಆರ್ ಎಲ್ ಭಟ್ಟ ಕುಂಬಾರಕುಳಿ, ರವೀಂದ್ರ ಹೆಗಡೆ ಹೀರೆಸರ, ಶಕುಂತಲಾ ಹೆಗಡೆ, ಗೌರವ ಸಲಹೆಗಾರ ಜಿ ಕೆ ಹೆಗಡೆ, ಯಲ್ಲಾಪುರ ಶಾಖಾ ಸಲಹಾ ಸಮಿತಿ ಅಧ್ಯಕ್ಷ ಕೆ ಎಸ್ ಭಟ್ಟ ಆನಗೋಡ, ಸಲಹಾ ಸಮಿತಿಯ ಸದಸ್ಯರಾದ ಮಂಜುನಾಥ ಗುಮ್ಮಾನಿ, ಆರ್ ಡಿ ಹೆಬ್ಬಾರ, ಮುಖ್ಯ ಕಾರ್ಯನಿರ್ವಾಹಕ ಗೋಪಾಲಕೃಷ್ಣ ಹೆಗಡೆ, ಶಾಖಾ ವ್ಯವಸ್ಥಾಪಕ ನೇತ್ರಾನಂದ ಮರಾಠಿ ಇದ್ದರು.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page