ಇಂದೂ ಪತ್ತೆಯಾಗದ ಮಹಮ್ಮದ್ ಹನೀಫ್
ಯಲ್ಲಾಪುರ ತಾಲೂಕಿನ ಕವಲಗಿ ಹಳ್ಳದಲ್ಲಿ ಮುಳುಗಿ ಕಾಣೆಯಾಗಿದ್ದ ಯುವಕನಿಗಾಗಿ ಮಂಗಳವಾರವೂ ಶೋಧ ಕಾರ್ಯಾಚರಣೆ ನಡೆದಿದ್ದು, ಯುವಕ ಪತ್ತೆಯಾಗಿಲ್ಲ. ಮಹಮ್ಮದ್ ಹನೀಫ್ ಗಾಗಿ ಅಗ್ನಿಶಾಮಕ ದಳ ಹಾಗೂ ಪೊಲೀಸರು, ಸ್ಥಳೀಯರ ನೆರವಿನೊಂದಿಗೆ ಸಂಜೆಯವರೆಗೂ ಶೋಧ ನಡೆಸಿದ್ದು, ಮೂರನೇ ದಿನದ ಕಾರ್ಯಾಚರಣೆಯಲ್ಲೂ ಆತ ಪತ್ತೆಯಾಗಿಲ್ಲ.…
ಜಿಲ್ಲೆಯಲ್ಲಿ ಲಾಟರಿ, ಮಟ್ಕಾ, ಬೆಟ್ಟಿಂಗ್ ಹಾವಳಿ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ: ಎಸ್.ಪಿ ದೀಪನ್
ಜಿಲ್ಲೆಯಲ್ಲಿ ಅನಧಿಕೃತ ಲಾಟರಿ ಮತ್ತು ಮಟ್ಕಾ ಹಾವಳಿ ಹಾಗೂ ಬೆಟ್ಟಿಂಗ್ ಪ್ರಕರಣಗಳನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಹೇಳಿದರು. ಅವರು ಮಂಗಳವಾರ ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಅನಧಿಕೃತ ಲಾಟರಿ ಹಾಗೂ ಮಟ್ಕಾ…
ಸೀನ ಸೆಟ್ಟರು ನಮ್ಮ ಟೀಚರ್ರು: ತೇಲಂಗಾರ ಮಕ್ಕಳು ಸಸಿಯ ನೆಟ್ಟರು
ಯಲ್ಲಾಪುರ ತಾಲೂಕಿನ ತೇಲಂಗಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಗದ್ದೆಗೆ ಕರೆದೊಯ್ದು ಭತ್ತದ ಕೃಷಿ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ಅರಿವು ಮೂಡಿಸಲಾಯಿತು. ಏಳನೇ ತರಗತಿಯ ‘ಸೀನ ಸೆಟ್ಟರು ನಮ್ಮ ಟೀಚರ್ರು’ ಪಾಠದ ಬೋಧನೆಯ ಅಂಗವಾಗಿ ಈ ಚಟುವಟಿಕೆ ನಡೆಸಲಾಯಿತು. ಶಿಕ್ಷಕಿ…
ದ್ಯಾಮಣ್ಣ ನೇತೃತ್ವದಲ್ಲಿ ಅಖಿಲ ಕರ್ನಾಟಕ ಅಹಿಂದ ಸಂಘಟನೆ ಅಸ್ತಿತ್ವಕ್ಕೆ
ಹಿಂದುಳಿದ ಸಮಾಜಕ್ಕೆ ಅನ್ಯಾಯವಾದರೆ ಖಂಡಿಸುವ ಮೂಲಕ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ಹೊಸದಾಗಿ ಅಖಿಲ ಕರ್ನಾಟಕ ಅಹಿಂದ ಸಂಘಟನೆ ಹುಟ್ಟುಹಾಕಲಾಗಿದೆ ಎಂದು ಸಂಘಟನೆಯ ಅಧ್ಯಕ್ಷ ದ್ಯಾಮಣ್ಣ ಬೋವಿವಡ್ಡರ್ ಹೇಳಿದರು. ಅವರು ಯಲ್ಲಾಪುರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಧಾರ್ಮಿಕ,ರಾಜಕೀಯ,ಕೋಮು ವಿಷಯ ಹೊರತಾದ ಸಂಘಟನೆ ಇದಾಗಿದೆ.…
ಭೂ ಸುರಕ್ಷಾ ಯೋಜನೆ, ಇ-ಪೌತಿ ಆಂದೋಲನ: ಸಾರ್ವಜನಿಕರ ಸಹಕಾರ ಕೋರಿದ ತಹಸೀಲ್ದಾರ ಚಂದ್ರಶೇಖರ ಹೊಸ್ಮನಿ
ಸರ್ಕಾರದ ಮಹತ್ವಾಕಾಂಕ್ಷೆಯ ಭೂ ಸುರಕ್ಷಾ ಯೋಜನೆ ಹಾಗೂ ಇ ಪೌತಿ ಆಂದೋಲನ ಯಲ್ಲಾಪುರ ತಾಲೂಕಿನಲ್ಲಿ ನಡೆಯುತ್ತಿದೆ. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ತಹಸೀಲ್ದಾರ ಚಂದ್ರಶೇಖರ ಹೊಸಮನಿ ಹೇಳಿದರು. ಅವರು ಮಂಗಳವಾರ ಮಾಧ್ಯಮದವರಿಗೆ ಮಾಹಿತಿ ನೀಡಿ, ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಇ-ಪೌತಿ ಆಂದೋಲನ ಮತ್ತು…
ಬುಲೆರೊಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಬೈಕ್: ಚಿಕನ್ ಅಂಗಡಿಯ ಸತ್ಯನಾರಾಯಣ ಇನ್ನಿಲ್ಲ
ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಬುಲೆರೊಗೆ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದು ಸವಾರ ಸಾವನ್ನಪ್ಪಿದ ಘಟನೆ ಯಲ್ಲಾಪುರ ತಾಲೂಕಿನ ಉಮ್ಮಚಗಿ-ಮಾವಿನಕಟ್ಟಾ ರಸ್ತೆಯ ಸಂಕದಗುಂಡಿ ಕ್ರಾಸ್ ಬಳಿ ನಡೆದಿದೆ. ಉಮ್ಮಚಗಿಯ ಚಿಕನ್ ಶಾಪ್ ಮಾಲೀಕ ಸತ್ಯನಾರಾಯಣ ಮಂಜುನಾಥ ನಾಯ್ಕ (25) ಮೃತ ವ್ಯಕ್ತಿ. ಈತ…
ಕವಲಗಿ ಹಳ್ಳದಲ್ಲಿ ಮುಳುಗಿದ ಸಹೋದರರು: ಒಬ್ಬ ಜೀವಂತ ಸಿಗಲಿಲ್ಲ, ಇನ್ನೊಬ್ಬ ಇನ್ನೂ ಸಿಗಲೇ ಇಲ್ಲ
ಮೀನು ಹಿಡಿಯಲು ಹೋಗಿ ಯಲ್ಲಾಪುರ ತಾಲೂಕಿನ ಕವಲಗಿ ಹಳ್ಳದಲ್ಲಿ ಮುಳುಗಿದ್ದ ಇಬ್ಬರು ಸಹೋದರರಲ್ಲಿ ಒಬ್ಬ ಶವವಾಗಿ ಪತ್ತೆಯಾಗಿದ್ದಾನೆ. ದಿನವಿಡೀ ಹುಡುಕಿದರೂ ಇನ್ನೊಬ್ಬನ ಸುಳಿವು ಸಿಕ್ಕಿಲ್ಲ. ಮಹಮ್ಮದ್ ರಫೀಖ್ ಇಬ್ರಾಹಿಂ ಸಾಬ್ ಸೈಯದ್ (27) ಶವವಾಗಿ ಪತ್ತೆಯಾಗಿದ್ದಾರೆ. ಮಾದನಸರದ ಎಂಟು ಜನ ಕವಲಗಿ…
‘ಶ್ರೀ ನ್ಯೂಸ್’ ವರದಿಗೆ ಸ್ಪಂದಿಸಿದ ಆಡಳಿತ: ಕಸದ ರಾಶಿಗೆ ಮುಕ್ತಿ ನೀಡಿದ ಪಟ್ಟಣ ಪಂಚಾಯಿತಿ
ಯಲ್ಲಾಪುರದ ಮುಂಡಗೋಡ ರಸ್ತೆಯ ಪಕ್ಕ ಬಿ.ಎಸ್.ಎನ್.ಎಲ್ ವಸತಿಗೃಹ ಸಂಕೀರ್ಣದ ಎದುರು ವರ್ಷಗಳಿಂದ ಬಿದ್ದಿರುವ ಕಸದ ರಾಶಿಗೆ ಅಂತೂ ಮುಕ್ತಿ ಸಿಕ್ಕಿದೆ. ರಾಶಿ, ರಾಶಿ ಕಸ ಬಿದ್ದಿದ್ದು, ಕಸದ ರಾಶಿಯ ನಡುವೆಯೇ ಕಸದ ತೊಟ್ಟಿಯೊಂದು ಬಿದ್ದುಕೊಂಡಿತ್ತು. ನೋಡುವವರಿಗೆ ಅದೂ ಕಸವೇ ಇರಬಹುದೆಂಬ ಭಾವನೆ…
ಲಾರಿಗಳ ನಡುವೆ ಅಪಘಾತ: ಹೆದ್ದಾರಿಯಲ್ಲಿ ರಾಶಿಯಾದ ಸಿಮೆಂಟ್ ಚೀಲಗಳು
ಎರಡು ಲಾರಿಗಳ ನಡುವೆ ಅಪಘಾತ ಸಂಭವಿಸಿ ಇಬ್ಬರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 63 ರ ಮೇಲೆ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ನಡೆದಿದೆ. ಲಾರಿಯ ಚಾಲಕ ಬೆಳಗಾವಿಯ ಸವದತ್ತಿಯ ಪ್ರಕಾಶ ಮಹಾದೇವ ಶೆಟ್ಟಪ್ಪನವರ್ ಗಾಯಗೊಂಡ ವ್ಯಕ್ತಿ. ಯಲ್ಲಾಪುರ ಕಡೆಯಿಂದ ಅಂಕೋಲಾ…
ಹಳ್ಳದಲ್ಲಿ ಮುಳುಗಿದ ಸಹೋದರರು: ಬೆಳಗ್ಗೆ ಮುಂದುವರಿಯಲಿದೆ ಶೋಧ ಕಾರ್ಯ
ಯಲ್ಲಾಪುರ ತಾಲೂಕಿನ ಕೆರೆಹೊಸಳ್ಳಿ ಸಮೀಪದ ಕವಲಗಿ ಹಳ್ಳದಲ್ಲಿ ಮುಳುಗಿದ ಸಹೋದರರ ಪತ್ತೆ ಕಾರ್ಯಾಚರಣೆಯನ್ನು ಪೊಲೀಸ್ ಹಾಗೂ ಅಗ್ನಿಶಾಮದ ದಳದವರು ಜಂಟಿಯಾಗಿ ಮಾಡುತ್ತಿದ್ದಾರೆ. ಘಟನೆ ಸಂಜೆ 6 ಗಂಟೆಯ ಹೊತ್ತಿಗೆ ನಡೆದಿದ್ದು, ಕಾಣೆಯಾದ ಸಹೋದರರ ಜತೆ ಬಂದಿದ್ದ ಅವರ ತಂದೆ ಹಾಗೂ ಇನ್ನುಳಿದವರು…
















