ನಾಗರಾಜ ಭಟ್ಟರ ಕೈಯಿಂದ ರಂಗೇರುವ ರಂಗೋಲಿ
ಕಲೆ ಎಲ್ಲರಿಗೂ ಒಲಿಯುವುದಿಲ್ಲ. ಅದರಲ್ಲಿ ಆಸಕ್ತಿ, ಶ್ರದ್ಧೆ, ಪರಿಶ್ರಮ ಎಲ್ಲವೂ ಮೇಳೈಸಿದಾಗ ಮಾತ್ರ ಉತ್ತಮ ಕಲಾವಿದ ರೂಪುಗೊಳ್ಳಲು ಸಾಧ್ಯ. ಈ ಎಲ್ಲವನ್ನೂ ರೂಢಿಸಿಕೊಂಡು ರಂಗು ರಂಗಿನ ರಂಗೋಲಿಯ ಕಲೆಯಲ್ಲಿ ಉತ್ತಮ ಕಲಾವಿದರಾಗಿ ರೂಪುಗೊಳ್ಳುತ್ತಿದ್ದಾರೆ ಯಲ್ಲಾಪುರ ತಾಲೂಕಿನ ಕವಡಿಕೆರೆಯ ನಾಗರಾಜ ಸುಬ್ರಾಯ ಭಟ್ಟ…
ತವರಿಗೆ ಮರಳಿದ ಕಾಂಗ್ರೆಸ್: ಹೆಬ್ಬಾರ ಕೂಡ ಮರಳುವುದು ಫಿಕ್ಸ್?
ಯಲ್ಲಾಪುರದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ 79 ನೇ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್.ಭಟ್ಟ ಧ್ವಜಾರೋಹಣ ನೆರವೇರಿಸಿದರು. ಕೆಪಿಸಿಸಿ ಸದಸ್ಯ ವಿವೇಕ ಹೆಬ್ಬಾರ, ಪ್ರಮುಖರಾದ ವಿಜಯ ಮರಾಶಿ, ರವಿ ಭಟ್ಟ ಬರಗದ್ದೆ, ಶಿರೀಷ ಪ್ರಭು, ಎಂ.ಡಿ.ಮುಲ್ಲಾ ಹಾಗೂ ಪಕ್ಷದ…
ಕಾಳಮ್ಮನಗರ ಕ್ರೀಡಾಂಗಣದಲ್ಲಿ ಧ್ವಜಾರೋಹಣ
ಯಲ್ಲಾಪುರದ ಕಾಳಮ್ಮಾನಗರ ತಾಲೂಕಾ ಕ್ರೀಡಾಂಗಣದಲ್ಲಿ ನಡೆದ 79ನೇಯ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸಾರ್ವಜನಿಕ ಧ್ವಜಾರೋಹಣವನ್ನು ತಹಶಿಲ್ದಾರ ಚಂದ್ರಶೇಖರ ಹೊಸ್ಮನಿ ನೆರವೇರಿಸಿದರು. ನಂತರ ಮಾತನಾಡಿದ ಅವರು, ಎಲ್ಲರಿಗೂ ಮೂಲಭೂತ ಹಕ್ಕುಗಳಿದ್ದು, ನಮ್ಮ ಹಕ್ಕಿನ ಬಳಕೆ ಇನ್ನೊಬ್ಬರ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಬಾರದು. ಎಲ್ಲರೂ ಶಾಂತಿ ಸಾಮರಸ್ಯದಲ್ಲಿ ಬದುಕಬೇಕು.…
ಮೂತ್ರ ವಿಸರ್ಜನೆ ಬಂದ್!
ಪೇಟೆಗೆ ಹೋಗುವ ಮೊದಲು ಹತ್ತು ಬಾರಿ ತಲೆ ಕೆಡಿಸಿಕೊಳ್ಳಬೇಕಿದೆ. ಮೂತ್ರ ವಿಸರ್ಜನೆ ಮಾಡುವುದೇ ದೊಡ್ಡ ಸಮಸ್ಯೆ.ಬಿಡ್ರಿ…ಅದೇನ್ ಮಹಾ ಉಚ್ಚಿ ಬಂದಾಗ ಖಾಲಿ ಮಾಡಿದ್ರಾಯ್ತು ಅಂತೀರಾ? ಉಂಹೂ…..ಅದಕ್ಕೆಲ್ಲಿದೆ ಅವಕಾಶ? ಬೆಳಿಗ್ಗೆ ಮನೆ ಬಿಟ್ಟರೆ ಸಂಜೆ ಮನೆಗೆ ಬಂದೇ ಮೂತ್ರ ವಿಸರ್ಜನೆ ಮಾಡಬೇಕು. ಕಾರಣ…
‘ರಾಷ್ಟ್ರನಮನ’: ದೇಶಭಕ್ತಿಗೀತೆ ರಚನೆ ಮತ್ತು ಗಾಯನ ಸ್ಪರ್ಧೆ
ಬೆಂಗಳೂರಿನ ಅಂತರಂಗ ಪ್ರತಿಷ್ಠಾನದಿಂದ ಪ್ರೇರಣಾ ಮಾಸದ ಸರಣಿ ಕಾರ್ಯಕ್ರಮವಾಗಿ ‘ರಾಷ್ಟ್ರ ನಮನ’ ದೇಶಭಕ್ತಿ ಗೀತೆ ರಚನೆ ಮತ್ತು ಗಾಯನ ಸ್ಪರ್ಧೆ ಆಯೋಜಿಸಲಾಗಿದೆ. ಗೀತೆ ಸ್ವತಂತ್ರ ರಚನೆಯಾಗಿರಬೇಕು. ಯಾವುದೇ ರೀತಿಯಲ್ಲಿ ನಕಲು ಮಾಡುವಂತಿಲ್ಲ. ಯಾವುದೇ ಗಾಯಕರಿಂದ ರಾಗ ಸಂಯೋಜನೆ ಮಾಡಿಸಿ, ಹಾಡಿಸಬಹುದು. ಹಾಡಿದ…
ಅಂಗಡಿಗಳಲ್ಲಿ ಮದ್ಯ ಸೇವನೆಗೆ ಅವಕಾಶ : ದಾಳಿ ನಡೆಸಿದ ಪೊಲೀಸರಿಗೆ ಸಿಕ್ಕಿದ್ದು 330 ರೂಪಾಯಿ ಮೌಲ್ಯದ ಮದ್ಯ!
ಯಲ್ಲಾಪುರದ ನಾಯಕನಕೆರೆ ಹಾಗೂ ಹುಣಶೆಟ್ಟಿಕೊಪ್ಪದ ಬೆಳಕೊಪ್ಪದಲ್ಲಿ ಯಾವುದೇ ಅನುಮತಿ ಇಲ್ಲದೇ ಸಾರಾಯಿ ಕುಡಿಯಲು ಅವಕಾಶ ಮಾಡಿಕೊಟ್ಟ ಎರಡು ಅಂಗಡಿಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಒಟ್ಟು 330 ರೂ ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ. ನಾಯಕನಕೆರೆಯ ತನ್ನ ಫಾಸ್ಟ್ ಫುಡ್ ಅಂಗಡಿಯಲ್ಲಿ ಜನರಿಗೆ…
ಶವವಾಗಿ ಸಿಕ್ಕ ಹನೀಫ್: ನಾಲ್ಕನೇ ದಿನದ ಹುಡುಕಾಟದಲ್ಲಿ ಶವ ಪತ್ತೆ
ಯಲ್ಲಾಪುರ ತಾಲೂಕಿನ ಕವಲಗಿಹಳ್ಳದಲ್ಲಿ ನಾಲ್ಕನೇ ದಿನದ ಕಾರ್ಯಾಚರಣೆ ವೇಳೆ ಮಹಮ್ಮದ್ ಹನೀಫ್ ಶವವಾಗಿ ಪತ್ತೆಯಾಗಿದ್ದಾನೆ. ಮುಳುಗಿದ ಸ್ಥಳದಿಂದ ಒಂದೂವರೆ ಕಿಮೀ ದೂರದಲ್ಲಿ ಶವ ಪತ್ತೆಯಾಗಿದೆ. ಮಾದನಸರದ ಎಂಟು ಜನ ಕವಲಗಿ ಹಳ್ಳ ದಾಟಿ ಬೇಡ್ತಿ ನದಿಗೆ ಮೀನು ಹಿಡಿಯಲು ಕಳೆದ ಭಾನುವಾರ…
ಬೆಲ್ತರಗದ್ದೆ ಮಹಿಳೆ ಸಾವಿನ ವಿಚಾರದಲ್ಲಿ ಸುಳ್ಳು ಹೇಳ್ಬೇಡಿ ಪ್ಲೀಸ್’ : ಗ್ಯಾರಂಟಿ ಸಮಿತಿ ಅಧ್ಯಕ್ಷ ಉಲ್ಲಾಸ ಶಾನಭಾಗ ಮನವಿ
ಗ್ಯಾರಂಟಿ ಸಮಿತಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ. ಸರ್ಕಾರವನ್ನು ಟೀಕಿಸುವ ಭರದಲ್ಲಿ, ತಮ್ಮ ಪ್ರಚಾರದ ಸಲುವಾಗಿ ನಮ್ಮ ಸಮಿತಿಯ ವಿರುದ್ಧ ಆರೋಪ ಮಾಡುತ್ತಿರುವುದನ್ನು ಖಂಡಿಸುತ್ತೇವೆ ಎಂದು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ಉಲ್ಲಾಸ ಶಾನಭಾಗ ಹೇಳಿದರು. ಅವರು ಯಲ್ಲಾಪುರದ ಪಟ್ಟಣ…
ದಿ.ಉಮೇಶ ಭಟ್ಟರ ಪುಣ್ಯಸ್ಮರಣೆ: ಅಭಿಮಾನಿ ಬಳಗದಿಂದ ವೃದ್ಧಾಶ್ರಮಕ್ಕೆ ಕುರ್ಚಿ ಕೊಡುಗೆ
ಮಾಜಿ ಶಾಸಕ, ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಉಮೇಶ ಭಟ್ಟ ಭಾವಿಕೇರಿ ಅವರ 6 ನೇ ಪುಣ್ಯಸ್ಮರಣೆ ಉಮೇಶ ಭಟ್ಟ ಅಭಿಮಾನಿ ಬಳಗದಿಂದ ಯಲ್ಲಾಪುರದ ನಾಯಕನಕೆರೆ ಶ್ರೀ ರಾಘವೇಂದ್ರ ಹಿರಿಯ ನಾಗರಿಕರ ಗೃಹದಲ್ಲಿ ನಡೆಯಿತು. ಉಮೇಶ ಭಟ್ಟ ಅವರ ನೆನಪಿನಲ್ಲಿ ವೃದ್ಧಾಶ್ರಮಕ್ಕೆ…
ಸೆಪ್ಟೆಂಬರ್ ಕ್ರಾಂತಿ ಆಗಸ್ಟ್ ನಲ್ಲೇ ಆರಂಭ!
ರಾಜ್ಯದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಮಹಾಕ್ರಾಂತಿ ಆಗಲಿದೆ ಎಂದು ಭವಿಷ್ಯ ನುಡಿದಿದ್ದ ಕೆ.ಎನ್.ರಾಜಣ್ಣ ಸಂಪುಟದಿಂದ ವಜಾ ಆಗಿದ್ದಾರೆ. ಅವರದೇ ವಿಕೆಟ್ ಬೀಳುವ ಮೂಲಕ ಒಂದು ತಿಂಗಳು ಮೊದಲೇ ಕ್ರಾಂತಿ ಆರಂಭವಾಗಿದೆ ಎಂದು ಬಿಜೆಪಿ ಮುಖಂಡ, ನಾಗರಿಕ ವೇದಿಕೆಯ ಅಧ್ಯಕ್ಷ ರಾಮು ನಾಯ್ಕ ಹೇಳಿದ್ದಾರೆ.…
















