6
ನಾಳೆ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಆಗಸ್ಟ್ 18 ರಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿ, ಸಿದ್ದಾಪುರ, ಯಲ್ಲಾಪುರ, ಜೊಯಿಡಾ ಹಾಗೂ ದಾಂಡೇಲಿ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹಳಿಯಾಳ…

ನಡಿಗೆಮನೆಯ ನಾರಾಯಣ ಭಟ್ಟರು ಇನ್ನಿಲ್ಲ

ಯಲ್ಲಾಪುರ ತಾಲೂಕಿನ ವಜ್ರಳ್ಳಿ ನಡಿಗೆಮನೆಯ ಹಿರಿಯರಾದ ನಾರಾಯಣ ಭಟ್ಟ (86) ನಿಧನರಾಗಿದ್ದಾರೆ. ಅವರು ಪುತ್ರರಾದ ಸಾಮಾಜಿಕ ಕಾರ್ಯಕರ್ತ ವಿ.ಎನ್.ಭಟ್ಟ, ನ್ಯಾಯವಾದಿ ಜಿ.ಎನ್.ಭಟ್ಟ ಸೇರಿದಂತೆ ಮೂರು ಪುತ್ರರು, ಪುತ್ರಿ ಹಾಗೂ ಬಂಧು-ಬಳಗದವರನ್ನು ಅಗಲಿದ್ದಾರೆ.‌ ವಜ್ರಳ್ಳಿಯಲ್ಲಿ ಪ್ರಾಥಮಿಕ ಶಾಲೆ, ಪ್ರೌಢಶಾಲೆಗಳು ಆರಂಭವಾಗುವಲ್ಲಿ ಶ್ರಮಿಸಿದ್ದರು. ಸ್ಥಳೀಯರು…

ಎಸ್.ಪಿ ದರ್ಜೆಯ ಕಮಾಂಡೆಂಟ್ ಡಾ.ರಾಮಕೃಷ್ಣ ಮುದ್ದೆಪಾಲ ಅವರಿಗೆ ರಾಷ್ಟ್ರಪತಿ ಪದಕ

ರಾಜ್ಯ ಮೀಸಲು ಪೊಲೀಸ್ ಪಡೆಯಲ್ಲಿ ಎಸ್.ಪಿ. ದರ್ಜೆಯ ಕಮಾಂಡೆಂಟ್ ಆಗಿರುವ ಡಾ.ರಾಮಕೃಷ್ಣ ಮುದ್ದೆಪಾಲ ಅವರು ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ. ಯಲ್ಲಾಪುರ ತಾಲೂಕಿನ ದೇಹಳ್ಳಿ ಸಮೀಪದ ಮುದ್ದೆಪಾಲಿನವರಾದ ಡಾ.ರಾಮಕೃಷ್ಣ, ಗ್ರಾಮೀಣ ಮೂಲದವರಾಗಿ, ಉನ್ನತ ಹುದ್ದೆಗೇರಿ, ರಾಷ್ಟ್ರಪತಿಗಳ ಪದಕ ಪಡೆಯುವ ಮಟ್ಟಿಗೆ…

ಉಮ್ಮಚಗಿಯಲ್ಲಿ ದಿ.ಎನ್.ಎಸ್.ಹೆಗಡೆ ಶೀಗೆಮನೆ ಸಂಸ್ಮರಣೆ ಕಾರ್ಯಕ್ರಮ ಆಗಸ್ಟ್ 18 ರಂದು

ಕರ್ನಾಟಕ ಯಕ್ಷಗಾನ ಅಕಾಡೆಮಿ ಮತ್ತು ವಾಗರ್ಥ ತಾಳಮದ್ದಳೆ ಕೂಟ ಹಾಗೂ ಸೇವಾ ಸಹಕಾರಿ ಸಂಘ ಉಮ್ಮಚಗಿ ಇವರ ಸಹಯೋಗದಲ್ಲಿ ದಿವಂಗತ ನಾರಾಯಣ ಹೆಗಡೆ (ಎನ್.ಎಸ್.ಹೆಗಡೆ) ಶೀಗೇಮನೆಯವರ ಸಂಸ್ಮರಣಾ ಕಾರ್ಯಕ್ರಮ ಆಗಸ್ಟ್ 18 ರಂದು ಮಧ್ಯಾಹ್ನ 3 ಗಂಟೆಗೆ ಉಮ್ಮಚಗಿಯ ಸಹಕಾರಿ ಸಂಘದ…

ಹಳಿಯಾಳದ ಮಹಿಳೆಗೆ ಯಮನಾದ ಯಲ್ಲಾಪುರದ ಬಸ್

ನಡೆದು ಹೋಗುತ್ತಿದ್ದ ಮಹಿಳೆಗೆ ಬಸ್ ಡಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲೇ ಸಾವಿಗೀಡಾದ ಘಟನೆ ಹಳಿಯಾಳ ತಾಲೂಕಿನ ಕರ್ಲಕಟ್ಟಾ ಬಳಿ ನಡೆದಿದೆ. ಹಳಿಯಾಳ ತಾಲೂಕಿನ ಸಾಂಬ್ರಾಣಿಯ ರೂಪಾ ಸಹದೇವ ಮೋರೆ (35) ಮೃತ ಮಹಿಳೆ. ಈಕೆ ಕುರಿಗದ್ದಾ ಬದಿಯಿಂದ ಸಾಂಬ್ರಾಣಿ ಕಡೆಗೆ ನಡೆದು…

ಮೇದಿನಿಯ ಬಾಯಲ್ಲಿ ನಲಿಯುವ ಗೀತೆ

ಮಕ್ಕಳು ಮನೆಯ ಹಿರಿಯರನ್ನು, ತಂದೆ-ತಾಯಿಯನ್ನು ಅನುಕರಿಸುತ್ತಾರೆ, ಅನುಸರಿಸುತ್ತಾರೆ. ಹಿರಿಯರು ಏನೇ ಮಾಡಲಿ ಅದನ್ನೇ ತಾನೂ ಮಾಡುವ ಪ್ರಯತ್ನ ಮಾಡುತ್ತಾರೆ. ಅದೇ ಕಾರಣಕ್ಕಾಗಿ ಮಕ್ಕಳೆದುರು ಒಳ್ಳೆಯದನ್ನೇ ಮಾಡಬೇಕು, ಒಳ್ಳೆಯದನ್ನೇ ಮಾತನಾಡಬೇಕು ಎಂದು ಹೇಳುತ್ತಾರೆ.‌ ಮನೆಯಲ್ಲಿ ತಾಯಿಯಿಂದ ಕೇಳಿ ಕೇಳಿಯೇ ಭಗವದ್ಗೀತೆಯ ಒಂದು ಅಧ್ಯಾಯವನ್ನೇ…

ಬಸ್ ಹಾಗೂ ಲಾರಿ ನಡುವೆ ಅಪಘಾತ: ಘಟನಾ ಸ್ಥಳಕ್ಕೆ ಎಸ್.ಪಿ ಭೇಟಿ

ಯಲ್ಲಾಪುರ ತಾಲೂಕಿನ ಹಿಟ್ಟಿನಬೈಲ್ ಕ್ರಾಸ್ ಬಳಿ ಬಸ್ ಹಾಗೂ ಲಾರಿ ನಡುವೆ ಅಪಘಾತವಾದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್.ಎಂ.ಎನ್ ಭೇಟಿ ನೀಡಿದರು. ಘಟನಾ ಸ್ಥಳ ಪರಿಶೀಲಿಸಿದ ಅವರು, ಅಪಘಾತದ ಕುರಿತು ಅಧಿಕಾರಿಗಳಿಂದ ವಿವರ ಪಡೆದರು. ಯಲ್ಲಾಪುರ ಸಿಪಿಐ ರಮೇಶ ಹಾನಾಪುರ…

ಹುತ್ಕಂಡದಲ್ಲಿ ಮುದ್ದುಕೃಷ್ಣ ವೇಷ ಸ್ಪರ್ಧೆ

ಯಲ್ಲಾಪುರ ತಾಲೂಕಿನ ಹುತ್ಕಂಡ ಮಾರಿಕಾಂಬಾ ದೇವಸ್ಥಾನದಲ್ಲಿ ಶ್ರೀ ಮಹಾಗಣಪತಿ ಕಲಾ ಬಳಗದ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮುದ್ದುಕೃಷ್ಣ ವೇಷ ಸ್ಪರ್ಧೆ ನಡೆಯಿತು. ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಶಿವಲಿಂಗಯ್ಯ ಅಲ್ಲಯ್ಯನವರಮಠ ಕಾರ್ಯಕ್ರಮ ಉದ್ಘಾಟಿಸಿದರು. ಎಲ್.ಎಸ್.ಎಂ.ಪಿ ಸೊಸೈಟಿ ಅಧ್ಯಕ್ಷ ನಾಗರಾಜ…

ನಿಂತಿದ್ದ ಲಾರಿಗೆ ಗುದ್ದಿದ ಬಸ್: ಮೂವರ ಸಾವು, 7 ಜನರಿಗೆ ಗಾಯ

ನಿಲ್ಲಿಸಿದ್ದ ಲಾರಿಗೆ ಹಿಂಬದಿಯಿಂದ ಕೆ.ಎಸ್.ಆರ್.ಟಿ.ಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿ, 7 ಜನರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಯಲ್ಲಾಪುರ ತಾಲೂಕಿನ ಹಿಟ್ಟಿನಬೈಲ್ ಕ್ರಾಸ್ ಬಳಿ ನಡೆದಿದೆ. ಬಾಗಲಕೋಟೆಯ ಗುಳೇದಗುಡ್ಡದ ನೀಲವ್ವ ಯಲದುರ್ಗಪ್ಪ ಹರದೊಳ್ಳಿ (40),…

ಕಂಪ್ಲಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ: ಸಾಧಕ ವಿದ್ಯಾರ್ಥಿಗಳಿಗೆ ಪುರಸ್ಕಾರ

ಯಲ್ಲಾಪುರ ತಾಲೂಕಿನ ಕಂಪ್ಲಿ ಗ್ರಾಮ ಪಂಚಾಯತಿಯ ಆವಾರದಲ್ಲಿ 79 ನೇ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ‌ ಇದೇ ವೇಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.‌ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ರಾಜರಾಜೇಶ್ವರಿ ಪ್ರೌಢಶಾಲೆಯ ವರ್ಷಾ ದಿಲೀಪ್ ರೊಖಡೆ,…

You cannot copy content of this page