ಮಳೆಯಿಂದಾದ ಹಾನಿಯ ವಿವರ ಪಡೆದ ದೇಶಪಾಂಡೆ
ಹಳಿಯಾಳ: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಹಳಿಯಾಳ ಹಾಗೂ ದಾಂಡೇಲಿ ತಾಲೂಕುಗಳ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಶಾಸಕ ಆರ್.ವಿ.ದೇಶಪಾಂಡೆ ಸಮಾಲೋಚನಾ ಸಭೆ ನಡೆಸಿದರು. ಹಳಿಯಾಳ ಹಾಗೂ ದಾಂಡೇಲಿ ತಾಲೂಕುಗಳಲ್ಲಿ ಮಳೆಯಿಂದ ಉಂಟಾದ ಹಾನಿ ಕುರಿತು ತಾಲೂಕು ಆಡಳಿತ, ನೀರಾವರಿ, ಕೃಷಿ, ವಿದ್ಯುತ್ ಮತ್ತು…
ಇಡಗುಂದಿ ಬಳಿ ಗಟಾರಕ್ಕೆ ಉರುಳಿದ ಲಾರಿ
ಯಲ್ಲಾಪುರ: ತಾಲೂಕಿನ ಇಡಗುಂದಿ ಬಳಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದ ಗಟಾರದಲ್ಲಿ ಪಲ್ಟಿಯಾಗಿದೆ. ಅಂಕೋಲಾ ಕಡೆಯಿಂದ ಹುಬ್ಬಳ್ಳಿ ಕಡೆಗೆ ಸರಕು ತುಂಬಿ ಹೊರಟಿದ್ದ ಲಾರಿ ಇಡಗುಂದಿ ಶಾಲೆಯ ಬಳಿ ನಿಯಂತ್ರಣ ತಪ್ಪಿ ಹೆದ್ದಾರಿ ಗಟಾರದಲ್ಲಿ ಬಿದ್ದಿದೆ. ಘಟನೆಯಲ್ಲಿ ಲಾರಿ…
ತೆಂಗಿನಗೇರಿಯ ಅಡಿಕೆ ತೋಟದಲ್ಲಿ 10 ಅಡಿ ಉದ್ದದ ಹೆಬ್ಬಾವು
ಯಲ್ಲಾಪುರ: ತಾಲೂಕಿನ ಕಿರವತ್ತಿ ಸಮೀಪದ ತೆಂಗಿನಗೇರಿಯ ತೋಟವೊಂದರಲ್ಲಿ ಅಡಗಿದ್ದ ಹೆಬ್ಬಾವನ್ನು ಉರಗಪ್ರೇಮಿ ಸೂರಜ್ ಶೆಟ್ಟಿ ಅರಬೈಲ್ ರಕ್ಷಿಸಿ ಕಾಡಿಗೆ ಬಿಟ್ಟರು. ತೆಂಗಿನಗೇರಿಯ ಅಡಿಕೆ ವರ್ತಕ ನರಸಿಂಹ ಭಟ್ಟ ಅವರ ಅಡಿಕೆ ತೋಟದಲ್ಲಿ ಈ ಹೆಬ್ಬಾವು ಒಂದು ವಾರದಿಂದ ಠಿಕಾಣಿ ಹೂಡಿತ್ತು. ಸುತ್ತಮುತ್ತ…
ಮನೆಯ ಮೇಲೆ ಬಿದ್ದ ಮರ
ಯಲ್ಲಾಪುರದ ರವೀಂದ್ರನಗರದಲ್ಲಿ ಮನೆಯೊಂದರ ಮೇಲೆ ಬ್ರಹತ್ ಮರ ಬಿದ್ದು ಹಾನಿಯಾಗಿದೆ. ರವೀಂದ್ರನಗರದ ಸುಬ್ರಾಯ ಎಸ್ ಭಟ್ಟ ಅವರ ಮನೆಯ ಮೇಲೆ ಬ್ರಹತ್ ಮರ ಮುರಿದು ಬಿದ್ದಿದೆ. ಇದರಿಂದ ಮನೆಯ ಮೇಲ್ಛಾವಣಿಗೆ ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ…
ಚಂದಗುಳಿಯಲ್ಲಿ ಕಲಾವಿದರಿಂದ ಗಾನ ನಾದ ಸೇವೆ
ಯಲ್ಲಾಪುರ: ತಾಲೂಕಿನ ಚಂದಗುಳಿ ಘಂಟೆ ಗಣಪತಿ ದೇವಸ್ಥಾನದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ತುರುವೆಕೆರೆಯ ಶ್ರೀಪ್ರಣವಾನಂದ ತೀರ್ಥ ಸ್ವಾಮಿಗಳ ಸಮ್ಮುಖದಲ್ಲಿ ಸ್ಥಳೀಯ ಕಲಾವಿದರಿಂದ ಗಾನ ನಾದ ಸೇವೆ ನಡೆಯಿತು. ಭಾಗವತರಾದ ದಿನೇಶ ಭಟ್ಟ ಯಲ್ಲಾಪುರ, ನಾಗೇಂದ್ರ ಭಾಗ್ವತ ಶೇಡಿಜಡ್ಡಿ ವಿವಿಧ ಯಕ್ಷಗಾನ ಪದ್ಯಗಳು…
ತುಂಡಾಯ್ತು ಕ್ರೇನ್ ನ ಎಕ್ಸಲ್: ಹೆದ್ದಾರಿಯಲ್ಲಿ ಎರಡು ತಾಸು ಟ್ರಾಫಿಕ್ ಜಾಮ್
ಯಲ್ಲಾಪುರ ತಾಲೂಕಿನ ಆರತಿಬೈಲ್ ಘಟ್ಟದಲ್ಲಿ ಹಾಳಾದ ಲಾರಿಯನ್ನು ತೆಗೆದುಕೊಂಡು ಬರುತ್ತಿದ್ದ ಕ್ರೇನ್ ಎಕ್ಸೆಲ್ ತುಂಡಾಗಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಳ್ಳುವಂತಾಯಿತು. ಹಾಳಾಗಿದ್ದ ಲಾರಿಯೊಂದನ್ನು ಗುಳ್ಳಾಪುರ ಕಡೆಯಿಂದ ಯಲ್ಲಾಪುರಕ್ಕೆ ಕ್ರೇನ್ ಮೂಲಕ ತೆಗೆದುಕೊಂಡು ಬರಲಾಗುತ್ತಿತ್ತು. ಆರತಿಬೈಲ್ ಘಟ್ಟದ ಬಳಿ ಕ್ರೇನ್…
ಜಾಮ್ ಪರೀಕ್ಷೆಯಲ್ಲಿ ಪವನ್ ಸಾಧನೆ
ಎಂಇಎಸ್, ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎಸ್ ಸಿ ವಿದ್ಯಾರ್ಥಿ ಪವನ್ ತಿಮ್ಮಣ್ಣ ಗಾಂವ್ಕರ ದೇಶದ ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಎಂ ಎಸ್ ಸಿ ಪದವಿಗಾಗಿ ನಡೆಸುವ ಜಾಮ್ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ. ಭೌತಶಾಸ್ತ್ರ ವಿಷಯದಲ್ಲಿ…
ಕರಡಿ ದಾಳಿ: ರೈತನಿಗೆ ಗಂಭೀರ ಗಾಯ
ಕರಡಿ ದಾಳಿಯಿಂದ ರೈತ ಗಂಭೀರವಾಗಿ ಗಾಯಗೊಂಡ ಘಟನೆ ಜೊಯಿಡಾ ತಾಲೂಕಿನ ರಾಮನಗರದ ನಾನೆಗಾಳಿ ಬಳಿ ನಡೆದಿದೆ. ರಾಮನಗರದ ಹನುಮಾನ ಗಲ್ಲಿಯ ರೈತ ಮಾರುತಿ ಮಳೇಕರ ಗಾಯಗೊಂಡವರು. ಮಂಗಳವಾರ ಸಂಜೆ ಸಿಂರಗಾಂವ ಗ್ರಾಮ ಪಂಚಾಯತ ಪ್ರದೇಶದ ನಾನೆಗಾಳಿಯಲ್ಲಿರುವ ತನ್ನ ಹೊಲದಲ್ಲಿ ಕೆಲಸ ಮಾಡಿ…
ಅರಬೈಲ್ ಶಾಲೆಯಲ್ಲಿ ಕವನ ಆಲಿಸಿ, ಭಾವಾರ್ಥ ಗೃಹಿಸಿದ ಮಕ್ಕಳು
ಯಲ್ಲಾಪುರ: ತಾಲೂಕಿನ ಅರಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಕವನ ಆಲಿಸೋಣ ಭಾವಾರ್ಥ ಗೃಹಿಸೋಣ’ ಕಲಿಕಾಫಲ ಆಧಾರಿತ ಉಪನ್ಯಾಸ, ಮುಂಗಾರು ಕವಿಗೋಷ್ಠಿ ನಡೆಯಿತು. ಮುಂಗಾರು ಕವಿಗೋಷ್ಠಿಯಲ್ಲಿ ವಿದ್ಯಾರ್ಥಿಗಳಾದ ಪ್ರಥಮ ಭಟ್ಟ, ಪವಿತ್ರಾ ಸಿದ್ದಿ, ಮಾನ್ಯಾ ಭಟ್ಟ, ಸಿಂಚನಾ ದೇವಾಡಿಗ, ಆರಾಧ್ಯಾ ಭಟ್ಟ,…
ಅಕ್ಷರಕ್ಕೊಂದು ವೃಕ್ಷ ಬೆಳೆಸೋಣ ಬನ್ನಿ: ಸುಮೇರು ಜ್ಯೋತಿರ್ವನದಲ್ಲಿ ವಿಶಿಷ್ಟ ಕಾರ್ಯಕ್ರಮ
ಯಲ್ಲಾಪುರ: ತಾಲೂಕಿನ ಉಮ್ಮಚಗಿಯ ಸುಮೇರು ಜ್ಯೋತಿರ್ವಿಜ್ಞಾನ ಸಂಪ್ರತಿಷ್ಠಾನ, ಸಾತ್ವಿಕ ಫೌಂಡೇಶನ್ ಹಾಗೂ ಮಂಚೀಕೇರಿ ವಲಯ ಅರಣ್ಯ ಇಲಾಖೆಗಳ ಆಶ್ರಯದಲ್ಲಿ ಸುಮೇರು ಜ್ಯೋತಿರ್ವನದಲ್ಲಿ ‘ಅಕ್ಷರಕ್ಕೊಂದು ವೃಕ್ಷ ಬೆಳೆಸೋಣ ಬನ್ನಿ’ ಕಾರ್ಯಕ್ರಮ ನಡೆಯಿತು. ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಭಾನು ಜಿ.ಪಿ, ಧಾರವಾಡದ ಕೃಷಿ ವಿಶ್ವವಿದ್ಯಾಲಯದ…
















